ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ | JANATA NEWS
ಬೆಂಗಳೂರು : ಬಿಜೆಪಿಯ ಸಂಸದ ಹಾಗೂ ಹಿರಿಯ ನಾಯಕ, ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಡಿವಿ.ಸದಾನಂದ ಗೌಡ ಅವರು ಸಕ್ರಿಯ ರಾಜಕೀಯಕ್ಕೆ ಬುಧವಾರ ನಿವೃತ್ತಿ ಘೋಷಿಸಿದ್ದಾರೆ.
ಹಾಸನದಲ್ಲಿ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಬರ ಅಧ್ಯಯನದಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದಗೌಡ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಎಲ್ಲದಕ್ಕೂ ಇತಿಮಿತಿ ಅನ್ನೋದು ಇರುತ್ತದೆ. 30 ವರ್ಷದಿಂದ ರಾಜಕೀಯದಲ್ಲಿದ್ದೇನೆ. ಪಕ್ಷದಿಂದ ಗರಿಷ್ಠ ಲಾಭ ಪಡೆದಿದ್ದೇನೆ, ಹೆಚ್ಚಿನದಕ್ಕೆ ಆಸೆ ಪಡುವುದಿಲ್ಲ ಎಂದು ಹೇಳಿ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಕಳೆದ ವರ್ಷವೇ ನಿವೃತ್ತಿ ಘೋಷಿಸುವ ಮನಸಿತ್ತು ಆದರೆ ಆಗಲಿಲ್ಲ ಅದಕ್ಕೆ ಈ ಬಾರಿ ಚುನಾವಣೆಗೂ ಮೊದಲೇ ಘೋಷಿಸಿದರೆ ಹೊಸಬರಿಗೆ ಪರಿಚಯಿಸಲು ಚುನಾವಣೆಗೆ ತಯಾರಾಗಲು ಸಮಯ ದೊರಕುತ್ತದೆ ಎಂದು ಘೋಷಿಸುತ್ತಿದ್ದೇನೆ ಇದರಲ್ಲಿ ಯಾರದು ಒತ್ತಡ ಇಲ್ಲ, ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.