Thu,Nov30,2023
ಕನ್ನಡ / English

ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗದಲ್ಲಿನ ಒತ್ತುವರಿ ತೆರವು ಕಾರ್ಯಾಚರಣೆ | JANATA NEWS

09 Nov 2023
484

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯ ಮಹದೇವಪುರ, ಬೊಮ್ಮನಹಳ್ಳಿ, ಪಶ್ಚಿಮ, ಬೊಮ್ಮನಹಳ್ಳಿ, ರಾಜರಾಜೇಶ್ವರಿ ನಗರ ಹಾಗೂ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗದಲ್ಲಿನ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಲಾಗಿದೆ.

ಮಹದೇವಪುರ ವಲಯ:
ಮಹದೇವಪುರ ವಿಭಾಗ ವ್ಯಾಪ್ತಿಯಲ್ಲಿನ ಸ್ಥಳೀಯ Resident Welfare Association ಹಾಗೂ Mahadevapura Traders Associations ರವರ ಮನವಿಯಂತೆ ಹಾಗೂ ಮಾನ್ಯ ಉಚ್ಚ ನ್ಯಾಯಾಲಯದ ಹೊರಡಿಸಿರುವ ಆದೇಶದನುಸಾರ ಇಂದು ಮಹದೇವಪುರ ವಿಭಾಗ ವ್ಯಾಪ್ತಿಯ ಇಬ್ಬಲೂರಿನಿಂದ ಕಾಡುಬಿಸನಹಳ್ಳಿ, ಕಾರ್ತಿಕ್‌ನಗರ ಮಾರ್ಗವಾಗಿ ಲೌರಿ ಜಂಕ್ಷನ್ ವರೆಗೆ ಸುಮಾರು 4.00 ಕಿ.ಮೀ ರಷ್ಟು ಹಾಗೂ ಲೌರಿ ಜಂಕ್ಷನ್‌ನಿಂದ ಗರುಡಾಚಾರ್‌ಪಾಳ್ಯ ಮೆಟ್ರೋ ನಿಲ್ದಾಣ, ಶಾಂತಿನಿಕೇತನ, ಬಿಪಿಎಲ್ ಮೆಟ್ರೋ ನಿಲ್ದಾಣದವರೆಗೆ ಸುಮಾರು 3.00 ಕಿ.ಮೀ ರಷ್ಟು, ಹೆಚ್.ಎ.ಎಲ್ ಅಂಡರ್‌ಪಾಸ್‌, ಸುರಂಜನ್‌ದಾಸ್ ಜಂಕ್ಷನ್‌ನಿಂದ ಯಮಲೂರು ಜಂಕ್ಷನ್, ಯಶೋಮತಿ ಆಸ್ಪತ್ರೆ, ಸಿದ್ದಾಪುರ ಜಂಕ್ಷನ್, ವರ್ತೂರು ಕೋಡಿ, ಸ್ವಸ್ತಾ ಆಸ್ಪತ್ರೆ, ಹೋಪ್‌ಫಾರಂ ಮಾರ್ಗವಾಗಿ ಸಾಯಿಬಾಬಾ ಜಂಕ್ಷನ್ ವರೆಗೆ ಸುಮಾರು 3.00 ಕಿ.ಮೀ ರಷ್ಟು ರಸ್ತೆಯಲ್ಲಿನ ಪಾದಚಾರಿ ಮಾರ್ಗದಲ್ಲಿನ ಒತ್ತುವರಿ ತೆರವು ಕಾರ್ಯಚರಣೆಯನ್ನು ನಡೆಸಲಾಗಿದ್ದು, ಪಾದಚಾರಿ ಮಾರ್ಗಗಳಲ್ಲಿ ಇಟ್ಟಿದ್ದ ಅನಧಿಕೃತ ಅಂಗಡಿ, ಅಂಗಡಿ ಮುಂಗಟ್ಟುಗಳು, ಅನುಪಯುಕ್ತ ತಳ್ಳುವ ಗಾಡಿಗಳು, ಹಣ್ಣಿನ ಬಾಕ್ಸ್‌ಗಳನ್ನು ತೆರವುಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಅನುವುಮಾಡಲಾಯಿತು.

ಕಾರ್ಯಚರಣೆ ನಡೆಯುವ ಮುನ್ನ ವ್ಯಾಪಾರಿಗಳ ಗಮನಕ್ಕೆ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡದಂತೆ ಧ್ವನಿವರ್ಧಕ ಮುಖಾಂತರ ಕೋರಲಾಗಿದ್ದರೂ, ಮೇಲ್ಕಾಣಿಸಿದ ರಸ್ತೆಗಳಲ್ಲಿ ಸುಮಾರು 10.00 ಕಿ.ಮೀ ರಷ್ಟು ಉದ್ದದ ಪಾದಚಾರಿ ಹಾಗೂ ರಸ್ತೆಯಲ್ಲಿ 12 ತಾತ್ಕಾಲಿಕ ಅಂಗಡಿಗಳನ್ನು, ಸುಮಾರು 4 ಅನುಪಯುಕ್ತ ತಳ್ಳುವ ಗಾಡಿಗಳನ್ನು ಹಾಗೂ ತಾತ್ಕಾಲಿಕವಾಗಿ ಪುಟ್ ಪಾತ್ ಮೇಲೆ ಸಾಮಾಗ್ರಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುವವರನ್ನು ತೆರವುಗೊಳಿಸಲಾಯಿತು. ಸದರಿ ಕಾರ್ಯಚರಣೆಯಲ್ಲಿ ಸುಮಾರು ಮೂರು ಲೋಡ್‌ಗಳಷ್ಟು ಅಂಗಡಿ ಮುಗ್ಗಟ್ಟುಗಳನ್ನು ಹಾಗೂ ಸಾಮಾಗ್ರಿಗಳನ್ನು ತೆರವುಗೊಳಿಸಲಾಯಿತು.

ರಾಜರಾಜೇಶ್ವರಿ ನಗರ ವಲಯ:
ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ ಕೆಂಗೇರಿ ವಿಭಾಗದಲ್ಲಿ, ವಾರ್ಡ್ ಸಂಖ್ಯೆ 130 ಮತ್ತು 159 ರಲ್ಲಿನ ಕೆಂಗೇರಿ ಹೊರವರ್ತುಲ ರಸ್ತೆಯಲ್ಲಿದ್ದ ಪಾದಚಾರಿ ವ್ಯಾಪಾರಿಗಳನ್ನು ಇಂದು ತೆರವುಗೊಳಿಸಲಾಯಿತು. ಸದರಿ ರಸ್ತೆಯನ್ನು “ಮಾದರಿ ರಸ್ತೆ”ಯನ್ನಾಗಿ ಮಾಡುವ ಉದ್ದೇಶದ ಹಿನ್ನಲೆಯಲ್ಲಿ ಹಾಗೂ ವಾರ್ಡ್ ಸಂಖ್ಯೆ 130 ಉಲ್ಲಾಳ ವಾರ್ಡ್‌ನ್ನು “ಮಾದರಿ ವಾರ್ಡ್” ಎಂದು ದಿನಾಂಕ:30-11-2023ರೊಳಗೆ ಪ್ರಕಟಣೆ ಮಾಡುವ ಸಲುವಾಗಿ ಪೂರ್ವಭಾವಿಯಾಗಿ ಸಾರ್ವಜನಿಕರಿಗೆ ಓಡಾಟಕ್ಕೆ ತೊಂದರೆಯಾಗುತ್ತಿದ್ದ ಶಾಶ್ವತವಾಗಿ ನಿರ್ಮಾಣ ಮಾಡಿದ್ದ ಕಬ್ಬಿಣದ ಪೆಟ್ಟಿಗೆಗಳನ್ನು ತೆರವುಗೊಳಿಸಲಾಯಿತು. ಈ ಕಾರ್ಯಾಚರಣೆಯಲ್ಲಿ 10 ಶಾಶ್ವತವಾಗಿ ನಿರ್ಮಾಣ ಮಾಡಿದ ಕಬ್ಬಿಣದ ಪೆಟ್ಟಿಗೆಗಳು ಹಾಗೂ 46 ತಾತ್ಕಾಲಿಕ ಶೆಡ್‌ಗಳನ್ನು ಮತ್ತು ತಳ್ಳುವ ಗಾಡಿಗಳನ್ನು ತೆರವುಗೊಳಿಸಲಾಯಿತು. ಸದರಿ ಪಾಲಿಕೆಯ ಕ್ರಮಕ್ಕೆ ಸ್ಥಳೀಯ ಹಿರಿಯ ನಾಗರೀಕರು ಹರ್ಷ ವ್ಯಕ್ತಪಡಿಸಿ ಇದೇ ರೀತಿ ಇನ್ನು ಹಲವಾರು ರಸ್ತೆಗಳಲ್ಲಿ ಪಾದಚಾರಿ ಮಾರ್ಗಕ್ಕೆ ಅಡ್ಡಿಯಾಗಿರುವ ಕಟ್ಟಡ, ಪೆಟ್ಟಿಗೆ ಮತ್ತು ತಳ್ಳುವ ಗಾಡಿಗಳನ್ನು ತೆರವುಗೊಳಿಸಲು ಮನವಿ ಸಲ್ಲಿಸಿದರು.

ಬೊಮ್ಮನಹಳ್ಳಿ ವಲಯ:
ಬೊಮ್ಮನಹಳ್ಳಿ ವಲಯ ವ್ಯಾಪ್ತಿಗೆ ಬರುವ ಬೆಂಗಳೂರು ದಕ್ಷಿಣ ವಿಭಾಗ, ಅಂಜನಾಪುರ ಉಪ ವಿಭಾಗದ ವಾರ್ಡ್ ನಂ.196 ಅಂಜನಾಪುರದ ಅಮೃತನಗರ ಮುಖ್ಯ ರಸ್ತೆ, ಕೋಣನಕುಂಟೆ ಸರ್ಕಾರಿ ಆಸ್ಪತ್ರೆ ಎದುರು ರಸ್ತೆಯಲ್ಲಿನ ಪಾದಚಾರಿ ಮಾರ್ಗದಲ್ಲಿನ ಒತ್ತುವರಿ ತೆರವು ಕಾರ್ಯಚರಣೆ ನಡೆಸಲಾಯಿತು.

ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಚರಣೆಯ ವೇಳೆ, 4 ಟ್ರ್ಯಾಕ್ಟರ್ ಹಾಗೂ 20ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನಿಯೋಜಿಸಿಕೊಂಡು ಪಾದಚಾರಿ ಮಾರ್ಗಗಳಲ್ಲಿ ಇಟ್ಟಿದ್ದ 3 ತಾತ್ಕಾಲಿಕ ಶೆಡ್‌ಗಳಲ್ಲಿನ ಅನಧಿಕೃತ ಅಂಗಡಿ, ಅಂಗಡಿ ಮುಂಗಟ್ಟುಗಳು, ಅನುಪಯುಕ್ತ ತಳ್ಳುವ ಗಾಡಿಗಳು, ಹಣ್ಣಿನ ಬಾಕ್ಸ್‌ಗಳನ್ನು ತೆರವುಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಅನುವು ಮಾಡಲಾಯಿತು. ಸುಮಾರು 300 ಮೀಟರ್ ರಷ್ಟು ಉದ್ದದ ಪಾದಚಾರಿ ಹಾಗೂ ರಸ್ತೆಯಲ್ಲಿ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿರುವವರ ಅಂಗಡಿಗಳನ್ನು ತೆರವುಗೊಳಿಸಲಾಯಿತು. ಮತ್ತೊಮ್ಮೆ ಪಾದವಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುವವರಿಗೆ ದಂಡ ವಿಧಿಸುವ ಜೊತೆಗೆ ಕಾನೂನು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಲಾಗಿರುತ್ತದೆ.

ಪಶ್ಚಿಮ ವಲಯ:
ಪಶ್ಚಿಮ ವಲಯ ವ್ಯಾಪ್ತಿಯ ರಾಜಾಜಿನಗರದ ಶ್ರೀರಾಮ ಮಂದಿರ ವಾರ್ಡ್ ನ 10ನೇ ಮುಖ್ಯ ರಸ್ತೆ, ಭಾಷ್ಯಂ ವೃತ್ತದಿಂದ ಇ.ಎಸ್.ಐ ಆಸ್ಪತ್ರೆ12ನೇ ಮುಖ್ಯ ರಸ್ತೆಯವರೆಗೆ ಪಾದಚಾರಿ ಮಾರ್ಗದ ಒತ್ತುವರಿಯನ್ನು ತೆರವುಗೊಳಿಸಲಾಗಿದ್ದು, ಈ ವೇಳೆ 4 ತಳ್ಳುವ ಗಾಡಿ ಹಾಗೂ ಅನಧಿಕೃತವಾಗಿ ಮೆಟ್ಟಿಲುಗನ್ನು ನಿರ್ಮಿಸಿ ತಾತ್ಕಾಲಿಕವಾಗಿ ತೆರದಿರುವ ಅಂಗಡಿಗಳನ್ನು ತೆರವುಗೊಳಿದಲಾಗಿದೆ.

ಮಲ್ಲೇಶ್ವರಂನ ಕಾಡುಮಲ್ಲೇಶ್ವರ ವಾರ್ಡ್ ನ 6, 7 ಮತ್ತು 8ನೇ ಕ್ರಾಸ್ ಮಾರ್ಗೋಸಾ ರಸ್ತೆಯಿಂದ ಸಂಪಿಗೆ ರಸ್ತೆಯವರೆಗೆ ಪಾದಚಾರಿ ಮಾರ್ಗದ ಒತ್ತುವರಿಯನ್ನು ತೆರವುಗೊಳಿಸಲಾಗಿದ್ದು, ಈ ವೇಳೆ ಸುಮಾರು 2.1 ಕಿ.ಮೀ ಉದ್ದದ ರಸ್ತೆಯಲ್ಲಿ 50 ತಳ್ಳುವ ಗಾಡಿಗಳುನ್ನು ತೆರವುಗೊಳಿಸಲಾಗಿರುತ್ತದೆ.

ದಕ್ಷಿಣ ವಲಯ ವಲಯ ವ್ಯಾಪ್ತಿಯಲ್ಲಿ ಓ‌.ಎಫ್.ಸಿ ಕೇಬಲ್ ತೆರವು:
ದಕ್ಷಿಣ ವಲಯ ವಿಜಯನಗರ ವ್ಯಾಪ್ತಿಯ ಹೊರ ಪಶ್ಚಿಮ ಕಾರ್ಡ್ ರಸ್ತೆಯ ಸರ್ವಿಸ್ ರಸ್ತೆ ಅನಧಿಕೃತವಾಗಿ ಅಳವಡಿಸಿರುವ ಒ.ಎಫ್.ಸಿ ಕೇಬಲ್‌ಗಳ ತೆರವು ಕಾರ್ಯಾಚರಣೆಯನ್ನು ನಡೆಸಲಾಯಿತು.

ನಗರದ ಪಶ್ಚಿಮ ಕಾರ್ಡ್ ರಸ್ತೆಯ ಸರ್ವಿಸ್ ರಸ್ತೆ, ಟೋಲ್ ಗೆಟ್ ಜಂಕ್ಷನ್ ನಿಂದ ವಿಜಯನಗರ ಮೆಟ್ರೋ ನಿಲ್ದಾಣದವರೆಗೂ 1.3 ಕೀ.ಮಿ ಅನಧಿಕೃತವಾಗಿ ಅಳವಡಿಸಿರುವ ಓಎಫ್‌ಸಿ ಕೇಬಲ್‌ಗಳ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದ್ದು, ಸದರಿ ರಸ್ತೆಯಲ್ಲಿ 4 ಟ್ರ್ಯಾಕ್ಟರ್ ಲೋಡ್ ಅನಧಿಕೃತ ಕೇಬಲ್ ಗಳನ್ನು ಕತ್ತರಿಸಿ ತೆರವುಗೊಳಿಸಲಾಗಿದೆ. ಕತ್ತರಿಸಿರುವ ಕೇಬಲ್‌ಗಳನ್ನು ಟ್ರ್ಯಾಕ್ಟರ್‌ಗಳ ಮೂಲಕ ತೆರವುಗೊಳಿಸಲಾಗಿದೆ.

ಸಾರ್ವಜನಿಕರ ಸುರಕ್ಷತೆ ಮತ್ತು ವಾಹನ ಸವಾರರ ಸಂಚಾರಕ್ಕೆ ಯಾವುದೆ ತೊಂದರೆಯಾಗದಿರುಲು ಅನಧಿಕೃತ ಒ.ಎಫ್.ಸಿ ತೆರವುಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅನಧಿಕೃತ ಕೇಬಲ್‌ಗಳನ್ನು ಅಳವಡಿಸಿದಲ್ಲಿ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿ ಸಂಬಂಧಪಟ್ಟ ಸಂಸ್ಥೆಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಜೊತೆಗೆ ಅನಧಿಕೃತ ಕೇಬಲ್ ತೆರವು ಕಾರ್ಯಾಚರಣೆಗೆ ಸಂಚಾರ ಪೊಲೀಸ್ ವಿಭಾಗ ಹಾಗೂ ಸಾರ್ವಜನಿಕರು ಸಹಕರಿಸುವಂತೆ ವಲಯ ಜಂಟಿ ಆಯುಕ್ತರಾದ ಡಾ. ಜಗದೀಶ್.ಕೆ.ನಾಯ್ಕ ರವರು ಕೋರಿರುತ್ತಾರೆ.

English summary :Operation of encroachment clearance on footpath under BBMP

ಸರ್ಕಾರಿ ಶಾಲೆಗಳಿಗೆ ಹಿಂದೂ ಹಬ್ಬಗಳ ರಜೆ ಕಡಿಮೆ, ಮುಸ್ಲಿಂ ಹಬ್ಬಕ್ಕೆ ಹೆಚ್ಚು : ಬಿಹಾರ ಸರ್ಕಾರದ ಎಡವಟ್ಟು
ಸರ್ಕಾರಿ ಶಾಲೆಗಳಿಗೆ ಹಿಂದೂ ಹಬ್ಬಗಳ ರಜೆ ಕಡಿಮೆ, ಮುಸ್ಲಿಂ ಹಬ್ಬಕ್ಕೆ ಹೆಚ್ಚು : ಬಿಹಾರ ಸರ್ಕಾರದ ಎಡವಟ್ಟು
ನೌಕಾಪಡೆಯಲ್ಲಿ ತರಬೇತಿ ಪಡೆಯುತ್ತಿರುವ ಅಗ್ನಿವೀರ್ ಮಹಿಳೆ ನೇಣು ಬಿಗಿದು ಆತ್ಮಹತ್ಯೆ
ನೌಕಾಪಡೆಯಲ್ಲಿ ತರಬೇತಿ ಪಡೆಯುತ್ತಿರುವ ಅಗ್ನಿವೀರ್ ಮಹಿಳೆ ನೇಣು ಬಿಗಿದು ಆತ್ಮಹತ್ಯೆ
ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಪ್ರಧಾನಿ ಮೋದಿ
ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಪ್ರಧಾನಿ ಮೋದಿ
ಯಶವಂತಪುರ ನಿಲ್ದಾಣದ ಪುನರಾಭಿವೃದ್ಧಿ ಮತ್ತು ಉಪನಗರ ರೈಲ್ವೆ ಪ್ರಗತಿಯನ್ನು ಪರಿಶೀಲಿಸಿದ ಕೇಂದ್ರ ರೈಲ್ವೆ ಸಚಿವರು
ಯಶವಂತಪುರ ನಿಲ್ದಾಣದ ಪುನರಾಭಿವೃದ್ಧಿ ಮತ್ತು ಉಪನಗರ ರೈಲ್ವೆ ಪ್ರಗತಿಯನ್ನು ಪರಿಶೀಲಿಸಿದ ಕೇಂದ್ರ ರೈಲ್ವೆ ಸಚಿವರು
ಪ್ರಧಾನಿ ಭದ್ರತಾ ಲೋಪ : 7 ಪಂಜಾಬ್ ಪೊಲೀಸ್ ಅಧಿಕಾರಿ ಅಮಾನತು
ಪ್ರಧಾನಿ ಭದ್ರತಾ ಲೋಪ : 7 ಪಂಜಾಬ್ ಪೊಲೀಸ್ ಅಧಿಕಾರಿ ಅಮಾನತು
ರನ್ನಿಂಗ್ ರೇಸ್‍ನಲ್ಲಿ ಸೋಲು, ಖಿನ್ನತೆಯಿಂದ ಕೀಟನಾಶಕ ಸೇವಿಸಿ ವಿದ್ಯಾರ್ಥಿನಿ ಆತ್ಮಹತ್ಯೆ!
ರನ್ನಿಂಗ್ ರೇಸ್‍ನಲ್ಲಿ ಸೋಲು, ಖಿನ್ನತೆಯಿಂದ ಕೀಟನಾಶಕ ಸೇವಿಸಿ ವಿದ್ಯಾರ್ಥಿನಿ ಆತ್ಮಹತ್ಯೆ!
ಸಿಬಿಐ ತನಿಖೆ ಹಿಂಪಡೆಯುವ ನಿರ್ಧಾರವನ್ನು ವಿರೋಧಿಸಿ ಬಿಜೆಪಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಮುಂದೂಡಿಕೆ
ಸಿಬಿಐ ತನಿಖೆ ಹಿಂಪಡೆಯುವ ನಿರ್ಧಾರವನ್ನು ವಿರೋಧಿಸಿ ಬಿಜೆಪಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಮುಂದೂಡಿಕೆ
ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ ರಾಜ್ಯ ಸರ್ಕಾರದ ವತಿಯಿಂದ ರೂ. 50 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ
ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ ರಾಜ್ಯ ಸರ್ಕಾರದ ವತಿಯಿಂದ ರೂ. 50 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯ ಸರ್ಕಾರ ಕರ್ನಾಟಕದಲ್ಲಿ ಲೂಟಿಗೈದ 5 ಕೋಟಿಯನ್ನು ತೆಲಂಗಾಣದಲ್ಲಿ ಮತ ಆಮಿಷಕ್ಕಾಗಿ ಬಳಸುತ್ತಿದೆ - ಬಿಜೆಪಿ
ಸಿದ್ದರಾಮಯ್ಯ ಸರ್ಕಾರ ಕರ್ನಾಟಕದಲ್ಲಿ ಲೂಟಿಗೈದ 5 ಕೋಟಿಯನ್ನು ತೆಲಂಗಾಣದಲ್ಲಿ ಮತ ಆಮಿಷಕ್ಕಾಗಿ ಬಳಸುತ್ತಿದೆ - ಬಿಜೆಪಿ
 ಡಿಕೆ ಶಿವಕುಮಾರ್ ಅವರ ಖಾಸಗಿ ವಕೀಲರು ಅಡ್ವೋಕೇಟ್ ಜೆನರಲ್ ಆಗಿ ಸಿ.ಬಿ.ಐ ತನಿಖೆ ಹಿಂಪಡೆಯಲು ಶಿಫಾರಸು ಮಾಡಿದ್ದಾರೆ- ಯತ್ನಾಳ್
ಡಿಕೆ ಶಿವಕುಮಾರ್ ಅವರ ಖಾಸಗಿ ವಕೀಲರು ಅಡ್ವೋಕೇಟ್ ಜೆನರಲ್ ಆಗಿ ಸಿ.ಬಿ.ಐ ತನಿಖೆ ಹಿಂಪಡೆಯಲು ಶಿಫಾರಸು ಮಾಡಿದ್ದಾರೆ- ಯತ್ನಾಳ್
ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನಿ ಭಯೋತ್ಪಾದಕ ಮುಖಂಡನನ್ನು ಹೊಡೆದು ಹಾಕಿದ ಭಾರತ ಪಡೆ
ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನಿ ಭಯೋತ್ಪಾದಕ ಮುಖಂಡನನ್ನು ಹೊಡೆದು ಹಾಕಿದ ಭಾರತ ಪಡೆ
ಇಂದಿರಾಗಾಂಧಿ ಜನ್ಮದಿನವೇ ಭಾರತದ ಕ್ರಿಕೆಟ್ ತಂಡ ಸೋಲಲು ಕಾರಣ ಸಿಎಂ ಹೇಮಂತ್ ಬಿಸ್ವ ಶರ್ಮ
ಇಂದಿರಾಗಾಂಧಿ ಜನ್ಮದಿನವೇ ಭಾರತದ ಕ್ರಿಕೆಟ್ ತಂಡ ಸೋಲಲು ಕಾರಣ ಸಿಎಂ ಹೇಮಂತ್ ಬಿಸ್ವ ಶರ್ಮ

ನ್ಯೂಸ್ MORE NEWS...