ಕೆ.ಇ.ಎ ಪರೀಕ್ಷೆ ಅಕ್ರಮ: ಸಿಬಿಐ ತನಿಖೆಗೆ ಪ್ರಿಯಾಂಕ ಖರ್ಗೆ ವಿರೋಧ ಏಕೆ? -ಬಿಜೆಪಿ ಪ್ರಶ್ನೆ | JANATA NEWS
ಬೆಂಗಳೂರು : ಕೆ.ಇ.ಎ ಪರೀಕ್ಷೆ ಅಕ್ರಮದ ಕುರಿತು ತನಿಖೆಯನ್ನು ಸಿಬಿಐಗೆ ಒಪ್ಪಿಸಲು ನಿಮ್ಮ ವಿರೋಧ ಏಕೆ ಎಂದು ಸಚಿವ ಪ್ರಿಯಾಂಕಾ ಖರ್ಗೆ ಅವರಿಗೆ ವಿರೋಧ ಪಕ್ಷವಾದ ಬಿಜೆಪಿ ಪ್ರಶ್ನೆ ಮಾಡಿದೆ.
ಈ ಕುರಿತು ರಾಜ್ಯ ಬಿಜೆಪಿ ತನ್ನ ಅಧಿಕೃತ ಖಾತೆಯಿಂದ ಪೋಸ್ಟ್ ಮಾಡಿದ್ದು, "ಕೆ.ಇ.ಎ ಪರೀಕ್ಷೆ ಅಕ್ರಮದಲ್ಲಿ ಭಾಗಿಯಾದವರ ಬ್ಯಾಂಕ್ ಖಾತೆಗಳಲ್ಲಿ ಕೋಟಿ ಕೋಟಿ ಪತ್ತೆಯಾಗಿದೆ. ಆದರೆ ಪ್ರಕರಣದ ಮೂಲ, ಸಚಿವ ಪ್ರಿಯಾಂಕ ಖರ್ಗೆ ಅವರು ಮಾತ್ರ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬ ವಿತಂಡವಾದದಲ್ಲಿ ಮುಳುಗಿದ್ದಾರೆ.
ಪ್ರಿಯಾಂಕ್ ಖರ್ಗೆಯವರೇ, ಕೆ.ಇ.ಎ. ಪರೀಕ್ಷೆಯಲ್ಲಿ ಅಕ್ರಮ ನಡೆಯತ್ತದೆ ಎಂದು ಮೊದಲೇ ನಿಮಗೆ ದೂರು ಸಲ್ಲಿಸಿದರೂ ನೀವು ಸುಮ್ಮನಿದ್ದದ್ದೇಕೆ..?
ಈಗ ಪರೀಕ್ಷಾ ಅಕ್ರಮದ ತನಿಖೆಯನ್ನು ಸಿ.ಬಿ.ಐ. ಗೆ ಒಪ್ಪಿಸಲು ನಿಮ್ಮ ವಿರೋಧ ಏಕೆ..?
ಕೆ.ಇ.ಎ ಪರೀಕ್ಷಾ ಅಕ್ರಮದಲ್ಲಿ ಆರ್. ಡಿ. ಪಾಟೀಲ್ ಮಾಡಿರುವ ಕಲೆಕ್ಷನ್‌ನಲ್ಲಿ ನಿಮ್ಮ ಪಾಲೆಷ್ಟು..?", ಎಂದು ಬಿಜೆಪಿ ಪ್ರಶ್ನಿಸಿದೆ.