ಅರುಣ್ ಪುತ್ತಿಲ ಮೇಲೆ ತಲವಾರ್ ದಾಳಿಗೆ ಯತ್ನ ಆರೋಪ | JANATA NEWS

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಪುತ್ತಿಲ ಪರಿವಾರದವನ ಮೇಲೆ ತಲವಾರ್ ದಾಳಿಗೆ ಯತ್ನ ಆರೋಪ ಮಾಡಲಾಗಿದೆ.
ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರ ಕಚೇರಿ ಎದುರು ಶುಕ್ರವಾರ ಹಾಡಹಗಲೇ ಐವರು ಕತ್ತಿ ಹಿಡಿದ ಘಟನೆ ನಡೆದಿದೆ. ಹಿಂದೂ ಜಾಗರಣ ವೇದಿಕೆ ಮುಖಂಡ ದಿನೇಶ್ ಪಂಜಿಗ ನೇತೃತ್ವದ ತಂಡದಿಂದ ತಲವಾರು ದಾಳಿಗೆ ಯತ್ನ ಎಂದು ತಿಳಿದು ಬಂದಿದೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಸಂದೇಶವು ಘಟನೆಗೆ ಕಾರಣವಾಯಿತು ಎನ್ನಲಾಗಿದೆ. ಪುತ್ತಿಲ ಬೆಂಬಲಿಗ ಮನೀಶ್ ಕುಲಾಲ್ ಎಂಬವರ ಮೇಲೆ ದಾಳಿ ಮಾಡಲು ಯತ್ನಿಸಲಾಗಿದ್ದು ಆದರೆ ಮನೀಷ್ ಈ ವೇಳೆ ಕಚೇರಿಯಲ್ಲಿ ಇರಲಿಲ್ಲ.
ದಿನೇಶ್ ಪಂಜಿಗ ಸೇರಿ 8 ಜನರಿದ್ದ ತಂಡದ ಮೇಲೆ ಈ ಆರೋಪ ಕೇಳಿಬಂದಿದೆ. ಈ ನಡುವೆ ಪೊಲೀಸರು ದಿನೇಶ್ ಸೇರಿದಂತೆ 5 ಮಂದಿಯನ್ನು ಬಂಧಿಸಿದ್ದಾರೆ.