ಕೆಇಎ ಪರೀಕ್ಷೆ ಅಕ್ರಮದ ಕಿಂಗ್ಪಿನ್ ಆರ್‌ಡಿ ಪಾಟೀಲ್ ಕೊನೆಗೂ ಅರೆಸ್ಟ್ | JANATA NEWS

ಕಲಬುರಗಿ : ಕೆಇಎ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ಕಿಂಗ್‍ಪಿನ್ ಆರ್‌ಡಿ ಪಾಟೀಲ್‍ನನ್ನು ಬಂಧಿಸಲಾಗಿದೆ.
ಕಲಬುರಗಿ ಜಿಲ್ಲೆ ಅಶೋಕ ನಗರ ಠಾಣೆ ಪೊಲೀಸ್ ತಂಡದಿಂದ ಕಿಂಗ್‌ಪಿನ್ ಆರ್‌ಡಿ ಪಾಟೀಲ್ ಬಂಧನ ಮಾಡಲಾಗಿದೆ ಎನ್ನಲಾಗಿದೆ.
ಪ್ರಕರಣ ಬೆಳಕಿಗೆ ಬಂದ ಬಳಿಕ ಅಂದರೆ ಕಳೆದ 12 ದಿನಗಳಿಂದ ಆರ್‌ಡಿ ಪಾಟೀಲ್ ತಲೆಮರೆಸಿಕೊಂಡಿದ್ದನು. ತಲೆಮರೆಸಿಕೊಂಡಿದ್ದ ಆರ್ ಡಿ ಪಾಟೀಲ್ ಸಂಬಮಧಿಕರ ಮನೆಯಲ್ಲಿಯೇ ಅವಿತುಕೊಂಡಿದ್ದ.
ಅಪಾರ್ಟ್ಮೆಂಟ್‌ನ ಕಾಂಪೌಂಡ್ ಹಾರಿ ಆರ್‌ಡಿ ಪಾಟೀಲ್ ಎಸ್ಕೇಪ್ ಆಗಿದ್ದ ದೃಶ್ಯಗಳು ಮಾಧ್ಯಮದಲ್ಲಿ ಪ್ರಸಾರ ಆಗಿತ್ತು. ಸದ್ಯ ಸಿಟಿ ಪೊಲೀಸ್ ಕಮಿಷನರ್ ಚೇತನ್ ಆರ್ ನೇತೃತ್ವದಲ್ಲಿ ಆರೋಪಿ ಆರ್‌ಡಿ ಪಾಟೀಲ್‍ನನ್ನು ಕರೆತರಲಾಗುತ್ತಿದೆ ಎನ್ನಲಾಗಿದೆ.
ಕಲಬುರಗಿ ಹೈಕೋರ್ಟ್ ನಲ್ಲಿ ಜಾಮೀನಿಗಾಗಿ ಆರ್.ಡಿ ಪಾಟೀಲ್ ಅರ್ಜಿ ಸಲ್ಲಿಸಿದ್ದು, ಜಾಮೀನು ಅರ್ಜಿಯನ್ನು ನವೆಂಬರ್ 16ಕ್ಕೆ ಹೈಕೋರ್ಟ್ ವಿಚಾರಣೆ ತೆಗೆದುಕೊಳ್ಳಲಿದೆ. ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ಆರ್.ಡಿ ಪಾಟೀಲ್ ಜಾಮೀನು ಅರ್ಜಿ ತಿರಸ್ಕಾರ ಹಿನ್ನಲೆಯಲ್ಲಿ ಆರೋಪಿ ಹೈಕೋರ್ಟ್ ಮೊರೆ ಹೋಗಿದ್ದ.