ವಿಶ್ವ ಸಾರಿಗೆ ದಿನ: ಕಚೇರಿಗೆ ತಲುಪಲು ಸಾರ್ವಜನಿಕ ಸಾರಿಗೆಯನ್ನು ಬಳಸಿದ ಬೆಂಗಳೂರು ನಗರ ಪೊಲೀಸ್ ಅಧಿಕಾರಿಗಳು | JANATA NEWS
ಬೆಂಗಳೂರು : ಬೆಂಗಳೂರು ಪೊಲೀಸ್ ಆಯುಕ್ತರಾದ ಬಿ.ದಯಾನಂದ ಅವರು ಇಂದು ಶುಕ್ರವಾರ ವಿಶ್ವ ಸಾರಿಗೆ ದಿನ ದಂದು ಸಾರ್ವಜನಿಕ ಸಾರಿಗೆ ಗಳಾದ ಬಿಎಂಟಿಸಿ ಬಸ್ ಹಾಗೂ ನಮ್ಮ ಮೆಟ್ರೋ ಬಳಸುವ ಮೂಲಕ ಸಾರ್ವಜನಿಕರ ಗಮನ ಸೆಳೆದರು
ಅಲ್ಲದೆ ವಿಶ್ವ ಸಾರಿಗೆ ದಿನವಾದ ಇಂದು ಬೆಂಗಳೂರು ನಗರ ಪೋಲಿಸ್ ಅಧಿಕಾರಿಗಳು ಅಮ್ಮ ಕಚೇರಿ ತಲುಪಲು ಸಾರ್ವಜನಿಕ ಸಾರಿಗೆ ಬಳಸಿದ್ದಾರೆ ಎಂದು ಸಹ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಪೊಲೀಸ್ ಆಯುಕ್ತರು ಈ ಬಗ್ಗೆ ಬರೆದಿದ್ದಾರೆ, "ವಿಶ್ವ ಸಾರಿಗೆ ದಿನದ ಒಗ್ಗಟ್ಟಿನಲ್ಲಿ, ಎಲ್ಲಾ BCP ಅಧಿಕಾರಿಗಳು ಇಂದು ಕಚೇರಿಗೆ ಪ್ರಯಾಣಿಸಲು ಸಾರ್ವಜನಿಕ ಸಾರಿಗೆಯನ್ನು ಬಳಸಿದರು. ನಾನು ಪೊಲೀಸ್ ಠಾಣೆಯ ವಾರ್ಷಿಕ ತಪಾಸಣೆ ನಡೆಸಲು ಎಲೆಕ್ಟ್ರಾನಿಕ್ ಸಿಟಿ ಪಿಎಸ್ ತಲುಪಲು ಮೆಟ್ರೋ ಮತ್ತು ಬಿಎಂಟಿಸಿ ಬಸ್ ಬಳಸಿದ್ದೇನೆ."
English summary :World Transport Day : Bengaluru City Police officers used public transport to reach office