3 ಬೈಕ್ ಗಳಿಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಓಡಿದ ಎಸ್‌ಯುವಿ : 4 ಗಾಯ | JANATA NEWS
ಬೆಂಗಳೂರು : ಎಸ್‌ಯುವಿ ಒಂದು ನಿಧಾನವಾಗಿ ಚಲಿಸುವ ಟ್ರಾಫಿಕ್ ಮೂಲಕ ನುಗ್ಗಿ ಹೋಗುವ ಬರದಲ್ಲಿ, 3 ಬೈಕ್ ಗಳಿಗೆ ಡಿಕ್ಕಿ ಹೊಡೆದರೂ ನಿಲ್ಲಿಸದೆ ಸ್ಥಳದಿಂದ ವೇಗವಾಗಿ ಹಾದು ಹೋಗಿದೆ.
ಬೆಂಗಳೂರಿನ ಹುಳಿಮಾವು ಎಂಬಲ್ಲಿ ನಡೆದ ಈ ಭೀಕರ ಹಿಟ್ ಆ್ಯಂಡ್ ರನ್ ಪ್ರಕರಣ ಮತ್ತೊಂದು ವಾಹನದ ಡ್ಯಾಶ್ ಕ್ಯಾಮ್ ನಲ್ಲಿ ಸೆರೆ ಯಾಗಿದೆ.
ಮೂರು ಬೈಕ್‌ಗಳಿಗೆ ಎಸ್‌ಯುವಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಈ ವೈರಲ್ ವೀಡಿಯೋದಲ್ಲಿ, ಎಸ್‌ಯುವಿ ಚಾಲಕ ಜನನಿಬಿಡ ರಸ್ತೆಯಲ್ಲಿ ಅತಿವೇಗವಾಗಿ ಹಾಗೂ ನಿರ್ಲಕ್ಷದ ಚಾಲನೆ ಮಾಡಿದ್ದು ಅಪಘಾತಕ್ಕೆ ಕಾರಣವಾಗಿರುವುದು ಕಂಡುಬಂದಿದೆ.
English summary :SUV which ran without stopping after hitting 3 bikes: 4 injured