ಸ್ಪೀಕರ್ ಹುದ್ದೆಗೆ ಧರ್ಮದ ಲೇಪನ : ಜಮೀರ್ ಅಹ್ಮದ್ ಖಾನ್ ಮನಸ್ಥಿತಿಯನ್ನು ಖಂಡಿಸಿದ ಡಾ ಅಶ್ವಥ್ ನಾರಾಯಣ್ | JANATA NEWS
ಬೆಂಗಳೂರು : ಸಂವಿಧಾನದ ಪವಿತ್ರ ಸ್ಪೀಕರ್ ಹುದ್ದೆಗೆ ಧರ್ಮದ ಲೇಪನ ಮಾಡಿ ಭಾಷಣ ಮಾಡಿರುವ ರಾಜ್ಯ ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ ಖಾನ್ ಅವರ ವೈರಲ್ ವಿಡಿಯೋ ಸಾಕಷ್ಟು ಜನಾಕ್ರೋಶ ವ್ಯಕ್ತವಾದ ಬೆನ್ನಲ್ಲೇ ಮಾಜಿ ಡಿಸಿಎಂ ಡಾ. ಅಶ್ವತ್ ನಾರಾಯಣ್ ಅವರು ಸಚಿವ ಖಾನ್ ಅವರ ಹೇಳಿಕೆಯನ್ನು ಖಂಡಿಸಿ ದ್ದಾರೆ ಅಲ್ಲದೆ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾ ಮಾಡಬೇಕೆಂದು ಸಿಎಂ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.
ಜಮೀರ್ ಖಾನ್ ಅವರ ಹೇಳಿಕೆ ಕುರಿತು ಮಾತನಾಡಿರುವ ಮಾಜಿ ಡಿಸಿಎಂ ಹಾಗೂ ಬಿಜೆಪಿ ಮುಖಂಡ ಡಾಕ್ಟರ್ ಅಶ್ವತ್ ನಾರಾಯಣ್ ಅವರು, "ಪ್ರಜಾಪ್ರಭುತ್ವದ ಗೌರವಯುತ ಸ್ಥಾನವಾದ ಸ್ಪೀಕರ್ ಹುದ್ದೆಗೆ ನಮಸ್ಕರಿಸುವುದನ್ನು ಧರ್ಮಕ್ಕೆ ಸೀಮಿತಗೊಳಿಸಿರುವ ಸಂಕುಚಿತ ಮನಸ್ಥಿತಿಯ ಸಚಿವ ಜಮೀರ್ ಅಹ್ಮದ್ ಖಾನ್ ಅವರದ್ದು ಅಜ್ಞಾನದ ಪರಮಾವಧಿ.
ಸಚಿವ ಸ್ಥಾನದಿಂದ ಜಮೀರ್ ಅಹ್ಮದ್ ಅವರನ್ನು ಕೂಡಲೇ ವಜಾ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಆಗ್ರಹಿಸುತ್ತೇನೆ.", ಎಂದು ಹೇಳಿದ್ದಾರೆ