Fri,Jan24,2025
ಕನ್ನಡ / English

ವಿದ್ಯುತ್‌ ತಂತಿ ತುಳಿದು ತಾಯಿ- ಮಗಳು ಸಾವು: 5 ಬೆಸ್ಕಾಂ ಅಧಿಕಾರಿಗಳ ಅಮಾನತು | JANATA NEWS

20 Nov 2023
1200

ಬೆಂಗಳೂರು : ಬೆಸ್ಕಾಂ ವೈಟ್‌ ಫೀಲ್ಡ್‌ ವಿಭಾಗ ವ್ತಾಪ್ತಿಯ ಕಾಡುಗೋಡಿಯ 4 ನೇ ಪೂರ್ವ ಉಪ ವಿಭಾಗದ ಕಾಡುಗೋಡಿ ಹೋಪ್‌ ಫಾರ್ಮ್‌ ಸಿಗ್ನಲ್‌ ಸಮೀಪ ಪಾದಚಾರಿ ರಸ್ತೆ ಮೇಲೆ ತುಂಡಾಗಿ ಬಿದ್ದಿದ್ದ 11ಕೆವಿ ವಿದ್ಯುತ್‌ ತಂತಿ ತುಳಿದು ತಾಯಿ-ಮಗಳು ಮೃತ ಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಕರ್ತವ್ಯಲೋಪ ಮೇಲ್ನೋಟಕ್ಕೆ ಕಂಡ ಬಂದ ಹಿನ್ನೆಲೆಯಲ್ಲಿ ಬೆಸ್ಕಾಂನ ಐವರು ಅಧಿಕಾರಿಗಳನ್ನು ಅಮಾನತುಗೊಳಿಸಿ, ಇಬ್ಬರು ಹಿರಿಯ ಅಧಿಕಾರಿಗಳಿಗೆ ಕಾರಣ ಕೇಳಿ ಶೋಕಾಸ್‌ ನೋಟಿಸ್‌ ಜಾರಿಗೊಳಿಸಲಾಗಿದೆ.

ಭಾನುವಾರ ಬೆಳಗ್ಗೆ 5.30 ರ ಸಮಯದಲ್ಲಿ ಸೌಂದರ್ಯ ( 23 ) ಅವರ ಮಗಳು ಲೀಲಾ ಅವರು ಆಕಸ್ಮಿಕವಾಗಿ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ಸ್ಥಳದಲ್ಲೇ ಮೃತ ಪಟ್ಟಿದ್ದರು. ಘಟನೆಗೆ ಸಂಬಂಧಿಸಿದಂತೆ ವೈಟ್‌ ಫೀಲ್ಡ್‌ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇಂಧನ ಸಚಿವ ಕೆ,ಜೆ, ಜಾರ್ಜ್‌ ಅವರ ಸೂಚನೆ ಮೇರೆಗೆ 4ನೇ ಪೂರ್ವ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ಸುಬ್ರಮಣ್ಯ ಟಿ , ಸಹಾಯಕ ಇಂಜಿನಿಯರ್‌ ಚೇತನ್‌ ಎಸ್‌ , ಕಿರಿಯ ಇಂಜಿನಿಯರ್‌ ರಾಜಣ್ಣ , ಕಿರಿಯ ಪವರ್‌ ಮನ್‌ ಮಂಜುನಾಥ್‌ ರೇವಣ್ಣ ಹಾಗೂ ಲೈನ್‌ ಮನ್‌ ಬಸವರಾಜು ಅವರನ್ನು ಅಮಾನತುಗೊಳಿಸಿ ಬೆಸ್ಕಾಂ ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಸಂಬಂಧ ವಿಸೃತ ತನಿಖೆ ನಡೆಸಿ ಮುಂದಿನ ಕ್ರಮ ಜರುಗಿಸಲಾಗುವುದು.

ಅದೇ ರೀತಿ ಕರ್ತವ್ಯಲೋಪಕ್ಕೆ ಸಂಬಂಧಿಸಿದಂತೆ ಬೆಸ್ಕಾಂ ಪೂರ್ವ ವೃತ್ತದ ಅಧೀಕ್ಷಕ ಇಂಜಿನಿಯರ್‌ ಲೋಕೇಶ್‌ ಬಾಬು ಎಂ ಹಾಗೂ ಬೆಸ್ಕಾಂ ವೈಟ್‌ ಫೀಲ್ಡ್‌ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್‌ ಆಗಿರುವ ಶ್ರೀರಾಮು ಅವರಿಗೆ ಕಾರಣ ಕೇಳಿ ಶೋಕಾಸ್‌ ನೋಟಿಸ್‌ ನೀಡಲಾಗಿದೆ.

ಘಟನೆ ವಿವರ: ಕಾಡುಗೋಡಿಯ ಎಫ್‌ ೯ ಬಿಪಿಎಲ್‌ ಫೀಡರ್‌ ಬೆಳಗ್ಗೆ 3.50ಕ್ಕೆ ಟ್ರಿಪ್‌ ಆಗಿತ್ತು. ಪುನ: 3.55 ಕ್ಕೆ ಲೈನ್‌ ಚಾರ್ಜ್‌ ಆಗಿರುವುದು ದಾಖಲಾಗಿರುತ್ತದೆ. ವಿದ್ಯುತ್‌ ತಂತಿ ತುಂಡಾಗಿ ಬಿದ್ದಿದ್ದು, ಅದರಲ್ಲಿ ವಿದ್ಯುತ್‌ ಪ್ರವಹಿಸುತ್ತಿತ್ತು. ಈ ತುಂಡಾದ ತಂತಿ ತುಳಿದು ತಾಯಿ ಮಗಳು ಮೃತ ಪಟ್ಟಿರುತ್ತಾರೆ.

ಬೆಸ್ಕಾಂ ಅಧಿಕಾರಿಗಳ ಈ ಕರ್ತವ್ಯಲೋಪವನ್ನು ಇಂಧನ ಸಚಿವರು ಗಂಭೀರವಾಗಿ ಪರಿಗಣಿಸಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ರಾಜ್ಯದ ಎಲ್ಲಾ ಎಸ್ಕಾಂಗಳ ಇಂಜಿನಿಯರ್‌ ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

English summary :Mother and daughter died in electrical accident: BESCOM suspends 5 officials

ಮಹಾ ಕುಂಭಮೇಳ : ಸಂಗಮದಲ್ಲಿ ತೀರ್ಥಸ್ನಾನ ಮಾಡಿದ ಕೇಂದ್ರ ರಾಜ್ಯ ಸಚಿವ ವಿ.ಸೋಮಣ್ಣ
ಮಹಾ ಕುಂಭಮೇಳ : ಸಂಗಮದಲ್ಲಿ ತೀರ್ಥಸ್ನಾನ ಮಾಡಿದ ಕೇಂದ್ರ ರಾಜ್ಯ ಸಚಿವ ವಿ.ಸೋಮಣ್ಣ
ದೊಡ್ಡ ಯಶಸ್ಸು : 1 ಕೋಟಿ ರೂ. ಬಹುಮಾನ ಹೊತ್ತಿದ್ದ ಮಾವೋವಾದಿ ಜೊತೆ 20 ಮಾವೋವಾದಿಗಳು ತಟಸ್ಥ
ದೊಡ್ಡ ಯಶಸ್ಸು : 1 ಕೋಟಿ ರೂ. ಬಹುಮಾನ ಹೊತ್ತಿದ್ದ ಮಾವೋವಾದಿ ಜೊತೆ 20 ಮಾವೋವಾದಿಗಳು ತಟಸ್ಥ
ಆರ್‌ಜಿ ಕರ್ ಅತ್ಯಾಚಾರ ಮತ್ತು ಕೊಲೆ ಪ್ರಕರಣ : ಪ್ರಮುಖ ಆರೋಪಿಗೆ ಜೀವಾವಧಿ ಶಿಕ್ಷೆ  ಸೆಷನ್ಸ್ ನ್ಯಾಯಾಲಯ
ಆರ್‌ಜಿ ಕರ್ ಅತ್ಯಾಚಾರ ಮತ್ತು ಕೊಲೆ ಪ್ರಕರಣ : ಪ್ರಮುಖ ಆರೋಪಿಗೆ ಜೀವಾವಧಿ ಶಿಕ್ಷೆ ಸೆಷನ್ಸ್ ನ್ಯಾಯಾಲಯ
ಇಸ್ರೋ ಸ್ಪೇಡೆಕ್ಸ್ ಡಾಕಿಂಗ್ ಮಿಷನ್‌ ಯಶಸ್ವಿ : ಈ ಸಾಮರ್ಥ್ಯ ಹೊಂದಿರುವ ವಿಶ್ವದ ನಾಲ್ಕನೇ ರಾಷ್ಟ್ರ ಭಾರತ
ಇಸ್ರೋ ಸ್ಪೇಡೆಕ್ಸ್ ಡಾಕಿಂಗ್ ಮಿಷನ್‌ ಯಶಸ್ವಿ : ಈ ಸಾಮರ್ಥ್ಯ ಹೊಂದಿರುವ ವಿಶ್ವದ ನಾಲ್ಕನೇ ರಾಷ್ಟ್ರ ಭಾರತ
ಮನೆಯಲ್ಲಿ ನಿಮ್ಮ ಹೆಂಡತಿಯನ್ನು ನೀವು ಎಷ್ಟು ಹೊತ್ತು ನೋಡಬಹುದು? ಆಫೀಸಿಗೆ ಹೋಗಿ ಕೆಲಸ ಮಾಡು - ಎಲ್ ಅಂಡ್ ಟಿ ಅಧ್ಯಕ್ಷ
ಮನೆಯಲ್ಲಿ ನಿಮ್ಮ ಹೆಂಡತಿಯನ್ನು ನೀವು ಎಷ್ಟು ಹೊತ್ತು ನೋಡಬಹುದು? ಆಫೀಸಿಗೆ ಹೋಗಿ ಕೆಲಸ ಮಾಡು - ಎಲ್ ಅಂಡ್ ಟಿ ಅಧ್ಯಕ್ಷ
ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ವೈಮಾನಿಕ ದಾಳಿಯನ್ನು ತೀವ್ರವಾಗಿ ಖಂಡಿಸಿದ ಭಾರತ
ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ವೈಮಾನಿಕ ದಾಳಿಯನ್ನು ತೀವ್ರವಾಗಿ ಖಂಡಿಸಿದ ಭಾರತ
ಚಿನ್ನದ ಹಾಲ್‌ಮಾರ್ಕ್‌ನಂತೆಯೇ ಶೀಘ್ರದಲ್ಲೇ ಬೆಳ್ಳಿಗೆ ಹಾಲ್‌ಮಾರ್ಕಿಂಗ್ - ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಚಿನ್ನದ ಹಾಲ್‌ಮಾರ್ಕ್‌ನಂತೆಯೇ ಶೀಘ್ರದಲ್ಲೇ ಬೆಳ್ಳಿಗೆ ಹಾಲ್‌ಮಾರ್ಕಿಂಗ್ - ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಅಮೆರಿಕದಲ್ಲಿ ಭಯೋತ್ಪಾದಕ ದಾಳಿ : ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟಾಗಿ ನಿಲ್ಲಬೇಕು - ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್
ಅಮೆರಿಕದಲ್ಲಿ ಭಯೋತ್ಪಾದಕ ದಾಳಿ : ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟಾಗಿ ನಿಲ್ಲಬೇಕು - ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್
ಮಾಜಿ ಪ್ರಧಾನಿಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ :  ಏಳು ದಿನಗಳ ರಾಷ್ಟ್ರೀಯ ಶೋಕಾಚರಣೆ
ಮಾಜಿ ಪ್ರಧಾನಿಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ : ಏಳು ದಿನಗಳ ರಾಷ್ಟ್ರೀಯ ಶೋಕಾಚರಣೆ
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನ : ನೀಲಿ ಪೇಟದ ಸರ್ದಾರ್ ರಹಸ್ಯ
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನ : ನೀಲಿ ಪೇಟದ ಸರ್ದಾರ್ ರಹಸ್ಯ
ಚೆನ್ನೈ ಅಣ್ಣಾ ವಿಶ್ವವಿದ್ಯಾನಿಲಯದ ಲೈಂಗಿಕ ದೌರ್ಜನ್ಯ ಪ್ರಕರಣ : ರಾಜ್ಯ ಸರ್ಕಾರ ಕಿತ್ತೋಗೆಯುವವರೆಗೂ ಪಾದರಕ್ಷೆ ಧರಿಸುವುದಿಲ್ಲ - ಅಣ್ಣಾಮಲೈ
ಚೆನ್ನೈ ಅಣ್ಣಾ ವಿಶ್ವವಿದ್ಯಾನಿಲಯದ ಲೈಂಗಿಕ ದೌರ್ಜನ್ಯ ಪ್ರಕರಣ : ರಾಜ್ಯ ಸರ್ಕಾರ ಕಿತ್ತೋಗೆಯುವವರೆಗೂ ಪಾದರಕ್ಷೆ ಧರಿಸುವುದಿಲ್ಲ - ಅಣ್ಣಾಮಲೈ
ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ 100ನೇ ಜನ್ಮದಿನ : ಪ್ರಧಾನಿ ಮೋದಿ ಪುಷ್ಪ ನಮನ
ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ 100ನೇ ಜನ್ಮದಿನ : ಪ್ರಧಾನಿ ಮೋದಿ ಪುಷ್ಪ ನಮನ

ನ್ಯೂಸ್ MORE NEWS...