ಕಾನೂನು ವ್ಯಾಪ್ತಿ ಒಳಗಡೆ ನಮ್ಮ ಧರ್ಮ ರಕ್ಷಣೆಗೆ ಎಲ್ಲಾ ರೀತಿಯ ತೀರ್ಮಾನ - ಎಚ್ ಡಿ ಕುಮಾರಸ್ವಾಮಿ | JANATA NEWS

ಬೆಂಗಳೂರು : ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಜಮೀರ್ ಅಹಮದ್ ಖಾನ್ ಅವರು ಸ್ಪೀಕರ್ ಸ್ಥಾನಕ್ಕೆ ಧರ್ಮದ ಬಣ್ಣ ಬಡಿಯುವ ರೀತಿಯ ಹೇಳಿಕೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತೀವ್ರ ಖಂಡನೆ ವ್ಯಕ್ತಪಡಿಸಿದ್ದು, "ಅವರು ಈಗಾಗಲೇ ಕ್ಷಮೆ ಕೇಳಬೇಕಾಗಿತ್ತು ಅವರಿಗೆ ಕ್ಷಮೆ ಕೇಳುವಂತೆ ನಿರ್ದೇಶನವು ಬಂದಿಲ್ಲ ಅವರು ಕೂಡ ಕ್ಷಮೆ ಕೇಳಿಲ್ಲ ಇದು ಉದ್ಘಾಟತನ", ಎಂದು ಹೇಳಿದ್ದಾರೆ.
"ಅವರು ತೆಲಂಗಾಣಕ್ಕೆ ಹೋಗಿ ನಮ್ಮ ಧರ್ಮಕ್ಕೆ ಕೈ ಮುಗಿಸುತ್ತೇವೆ, ಎಂದು ತಮ್ಮ ಭಾವನೆಯನ್ನು ಏನು ವ್ಯಕ್ತಪಡಿಸಿದ್ದಾರೆ... ನಾವು ಹಿಂದೂ ಸಂಸ್ಕೃತಿಯಲ್ಲಿ ಹುಟ್ಟಿದ್ದೇವೆ ನಮ್ಮ ಧರ್ಮವನ್ನು ನಾವು ಸಹ ಕಾಪಾಡಬೇಕಲ್ಲವೇಕಾಪಾಡಬೇಕಲ್ಲವೇ?
ನಮ್ಮ ಧರ್ಮ ಹಾಳು ಮಾಡಿಕೊಂಡು ಅವರ ಧರ್ಮವನ್ನು ಎತ್ತಲು ಆಗುತ್ತದೆಯಾ. ಅಂತ ಪರಿಸ್ಥಿತಿ ಬಂದರೆ ದತ್ತ ಮಾಲೆ ಹಾಕುತ್ತೇನೆ ಎಂದು ನಿನ್ನೆ ಪತ್ರಿಕೆಗಳಿಗೆ ಹೇಳಿದ್ದೇನೆ", ಎಂದು ಕುಮಾರಸ್ವಾಮಿಯವರು ಸ್ಪಷ್ಟನೆ ನೀಡಿದ್ದಾರೆ.
ಹಾಗೂ "ಕಾನೂನು ವ್ಯಾಪ್ತಿ ಒಳಗಡೆ ನಮ್ಮ ಧರ್ಮ ರಕ್ಷಣೆ ಮಾಡಲು ನಾನು ಎಲ್ಲ ರೀತಿಯ ತೀರ್ಮಾನ ಮಾಡಬೇಕಾದರೆ, ನಾನು ಮಾಡುತ್ತೇನೆ. ಅವರಿಗೆ ಅವರ ಧರ್ಮದ ಬಗ್ಗೆ ಅಂತಹ ದುರಾಭಿಮಾನ ಇರುವಾಗ ನನಗೆ ಅಭಿಮಾನ ಇರಬಾರದೇ?", ಎಂದು ಎಚ್.ಡಿ.ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ.