ತೆಲಂಗಾಣದಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಿರುವ 4% ಮೀಸಲಾತಿ ತೆಗೆದುಹಾಕ್ತೇವೆ - ಅಮಿತ್ ಶಾ | JANATA NEWS
ಹೈದರಾಬಾದ್ : ಬಿಜೆಪಿ ರಾಷ್ಟ್ರೀಯ ಮುಖಂಡ ಅಮಿತ್ ಶಾ ತೆಲಂಗಾಣದಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಿರುವ 4% ಮೀಸಲಾತಿಯನ್ನೂ ತೆಗೆದುಹಾಕ್ತೇವೆ, ಎಂದರಲ್ಲದೇ ಮಾದಿಗ ಸಮುದಾಯಕ್ಕೆ ಎಸ್ಸಿ ವರ್ಗದ ಅಡಿಯಲ್ಲಿ ಮೀಸಲಾತಿ ನೀಡುವುದಾಗಿ ಘೋಷಿಸಿದ್ದಾರೆ.
ತೆಲಂಗಾಣ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಗ್ತಿಯಾಲ್‌ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅಮಿತ್ ಶಾ ಮಾತನಾಡುತ್ತಿದ್ದರು.
ಭಾರತ್ ರಾಷ್ಟ್ರ ಸಮಿತಿ (BRS), ಎಐಎಂಐಎಂ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ಈ ಎಲ್ಲಾ ಪಕ್ಷಗಳು 2G, 3G ಮತ್ತು 4G ಪಕ್ಷಗಳು. 2G ಎಂದರೆ ಕೆಸಿಆರ್ ಮತ್ತು ಕೆಟಿಆರ್, 3G ಅಂದ್ರೆ ಓವೈಸಿಯ ಅಜ್ಜ, ಅವರ ತಂದೆ ಮತ್ತು ಓವೈಸಿ, 4G ಅಂದ್ರೆ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ರಾಹುಲ್ ಗಾಂಧಿ. ಅದರಲ್ಲಿ ನಿಮ್ಮ ಸ್ಥಾನ ಎಲ್ಲಿದೆ ಎಂದು ಪ್ರಶ್ನಿಸಿದರು.
ಮಾದಿಗ ಮೀಸಲಾತಿ ಗುಂಪು (MRPS) ತೆಲಂಗಾಣ ವಿಧಾನಸಭೆ ಚುನಾವಣೆಗೆ ಬಿಜೆಪಿಗೆ ಅಧಿಕೃತವಾಗಿ ಬೆಂಬಲ ಘೋಷಿಸಿದೆ.
ಕಾಂಗ್ರೆಸ್ ಮತ್ತು ಬಿಆರ್‌ಎಸ್ ದಲಿತ ವಿರೋಧಿಗಳು ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಸಂಸ್ಥಾಪಕ ಮಂದ ಕೃಷ್ಣ ಮಾದಿಗ ತಮ್ಮ ಅಂಗಸಂಸ್ಥೆಗಳಿಗೆ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಅವರು ತೆಲಂಗಾಣದ ಜನಸಂಖ್ಯೆಯ ಸುಮಾರು 11% ರಷ್ಟಿದ್ದಾರೆ. ತೆಲಂಗಾಣದಲ್ಲಿ ಬಿಜೆಪಿಗೆ ದೊಡ್ಡ ಉತ್ತೇಜನ ಸಿಕ್ಕಿದಂತಾಗಿದೆ.
ಹೈದರಾಬಾದ್‌ನಲ್ಲಿ ಎಂಆರ್‌ಪಿಎಸ್ ಆಯೋಜಿಸಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು.