ರಾಹುಲ್ ಗಾಂಧಿ ಪ್ರಾಣತ್ಯಾಗ : ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯನ್ನು ಲೇವಡಿ ಮಾಡಿದ ಬಿಜೆಪಿ JANATA NEWS

ಹೈದರಾಬಾದ್ : ರಾಹುಲ್ ಗಾಂಧಿ ದೇಶದ ಏಕತೆಗೆ ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ಭಾಷಣದಲ್ಲಿ ತಪ್ಪಾಗಿ ಹೇಳಿ ಎಡವಟ್ಟು ಮಾಡಿಕೊಂಡ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಿಜೆಪಿಗೆ ಲೇವಡಿ ಮಾಡಿದೆ.
ರಾಜಸ್ಥಾನದ ಅನುಪಗಢದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ರಾಷ್ಟ್ರದ ಏಕತೆಗಾಗಿ ರಾಹುಲ್ ಗಾಂಧಿಯಂತಹ ನಾಯಕರು ತಮ್ಮ ಪ್ರಾಣವನ್ನು ತ್ಯಜಿಸಿದ್ದಾರೆ ಎಂದು ತಪ್ಪಾಗಿ ಹೇಳಿದ್ದಾರೆ.
ಈ ಭಾಷಣದ ವೀಡಿಯೊ ಕ್ಲಿಪ್ ಅನ್ನು ಲಗತ್ತಿಸಿರುವ ಬಿಜೆಪಿ, ಇದು ಯಾವಾಗ ಸಂಭವಿಸಿತು? ಎಂದು ಪ್ರಶ್ನಿಸಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.
English summary :Rahul Gandhi Sacrifice: Mallikarjuna Kharge statement mocked by BJP