ಡಿಕೆ ಶಿವಕುಮಾರ್ ಅವರ ಖಾಸಗಿ ವಕೀಲರು ಅಡ್ವೋಕೇಟ್ ಜೆನರಲ್ ಆಗಿ ಸಿ.ಬಿ.ಐ ತನಿಖೆ ಹಿಂಪಡೆಯಲು ಶಿಫಾರಸು ಮಾಡಿದ್ದಾರೆ- ಯತ್ನಾಳ್ | JANATA NEWS
ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ಅವರ ಖಾಸಗಿ ವಕೀಲರು ಅಡ್ವೋಕೇಟ್ ಜೆನರಲ್ ಆಗಿ ಡಿ.ಕೆ.ಶಿವಕುಮಾರ್ ಮೇಲೆ ನಡೆಯುತ್ತಿದ್ದ ಸಿ.ಬಿ.ಐ ತನಿಖೆಗೆ ಸರ್ಕಾರದ ಅನುಮತಿ ಹಿಂಪಡೆಯಬೇಕೆಂದು ಸಂಪುಟಕ್ಕೆ ಶಿಫಾರಸು ಮಾಡಿದ್ದಾರೆ, ಎಂದು ಬಿಜೆಪಿ ಮುಖಂಡ ಹಾಗೂ ಶಾಸಕ ಬಸವಣ್ಣ ಗೌಡ ಪಾಟೀಲ್ ಯತ್ನಾಳ್ ಅವರು ಗಂಭೀರ ಆರಂಭ ಮಾಡಿದ್ದಾರೆ.
"ಅಡ್ವೋಕೇಟ್ ಜನರಲ್ ಶ್ರೀ ಶಶಿಕಿರಣ್ ಶೆಟ್ಟಿ ಅವರು ಉಪ ಮುಖ್ಯ ಮಂತ್ರಿಗಳಾದ ಶ್ರೀ ಡಿ ಕೆ ಶಿವಕುಮಾರ್ ಅವರ ವಕೀಲರಾಗಿ ಅವರ ಹಲವು ಭ್ರಷ್ಟಾಚಾರದ ಪ್ರಕರಣವನ್ನು ಕೈಗೆತ್ತುಕೊಂಡು ವಾದ ಮಂಡಿಸಿದ್ದರು."
"ದುರಂತದ ವಿಷಯವೇನೆಂದರೆ, ಸರ್ಕಾರದ ಪ್ರಭಾವಿ ರಾಜಕಾರಣಿಯ ಖಾಸಗಿ ವಕೀಲರು ಅಡ್ವೋಕೇಟ್ ಜೆನರಲ್ ಆಗಿ ಡಿ.ಕೆ.ಶಿವಕುಮಾರ್ ಮೇಲೆ ನಡೆಯುತ್ತಿದ್ದ ಸಿ.ಬಿ.ಐ ತನಿಖೆಗೆ ಸರ್ಕಾರದ ಅನುಮತಿ ಹಿಂಪಡೆಯಬೇಕೆಂದು ಸಂಪುಟಕ್ಕೆ ಶಿಫಾರಸು ಮಾಡುತ್ತಾರೆ."
"ಈ ಶಿಫಾರಸ್ಸಿನ ಕಾನೂನಿನ ಮಾನ್ಯತೆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆಯೂ ಆಗದೆ ಅಂಗೀಕೃತವಾಗುತ್ತದೆ. ಇದು ಒಂದು ನಿಷ್ಪಕ್ಷಪಾತವಾದ ತನಿಖೆಗೆ ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೋರಿ ಮಾಡಿದ ಪ್ರಹಸನ. ನ್ಯಾಷನಲ್ ಲಾ ಸ್ಕೂಲ್ ನ 'ಪ್ರತಿಭೆ' ಶಶಿಕಿರಣ್ ಅವರು ಈ ರೀತಿ contradictory ಆಗಿ ಜವಾಬ್ದಾರಿಗಳನ್ನು (roles ) ಮಾಡಬಾರದು."
"ಕಾನೂನು ವ್ಯವಸ್ಥೆಯ ಅಣಕ ಮಾಡುವುದು (Mockery of Justice) ಕೆಲ ಪ್ರಭಾವಿ ರಾಜಕಾರಣಿಗಳಿಗೆ ಅಭ್ಯಾಸ ಆಗಿರುವುದು ದುರಂತ. ಸಚಿವ ಸಂಪುಟದಲ್ಲಿರುವ ಯಾವುದೇ ಸಚಿವರು ಇದು ಚರ್ಚೆಯಾಗಬೇಕು ಎಂದು ಹೇಳದೆ, ಇದಕ್ಕೆ ಒಪ್ಪಿಗೆ ನೀಡಿರುವುದು ಹಲವು ಸಂಶಯಗಳನ್ನು ಹುಟ್ಟು ಹಾಕುತ್ತದೆ. ಇವರು ಯಾವುದೇ ತಪ್ಪು ಮಾಡಿಲ್ಲವೆಂದರೆ, ಸಿ.ಬಿ.ಐ ಮೇಲೆ ಭಯ ಏಕೆ ?"
"ರಾಜ್ಯದ ಅಧೀನದಲ್ಲಿರುವ ಪೊಲೀಸರಿಗೆ ಒಪ್ಪಿಸಿದರೆ ಒಬ್ಬ ಪ್ರಭಾವಿ ರಾಜಕಾರಣಿಯ ಕರ್ಮಕಾಂಡವನ್ನು ಸುಲಭವಾಗಿ ಮುಚ್ಚಿಹಾಕಬಹುದು ಎಂದು ಇವರ ಯೋಜನೆ ಎಂಬುದು ಗೊತ್ತಿರುವ ವಿಷಯ.
ಖಾಸಗಿ ವಕೀಲರನ್ನು ಅಡ್ವೊಕೆಟ್ ಜನರಲ್ ಹುದ್ದೆಗೆ ನೇಮಿಸಿದ್ದು ಮತ್ತು ಇದೆ ಪ್ರಕರಣವನ್ನು ಅವರು ಶಿಫಾರಸು ಮಾಡುತ್ತಾರೆ ಎಂದರೆ ಇದು Contradiction ಆಗುವುದಿಲ್ಲವೇ.," ಎಂದು ಸರಣಿ ಪೋಸ್ಟ್ ಮಾಡೋ ಮೂಲಕ ಬಿಜೆಪಿ ಶಾಸಕ ಯತ್ನಾಳ ಅವರು ಪ್ರಶ್ನಿಸಿದ್ದಾರೆ.