ಸಿದ್ದರಾಮಯ್ಯ ಸರ್ಕಾರ ಕರ್ನಾಟಕದಲ್ಲಿ ಲೂಟಿಗೈದ 5 ಕೋಟಿಯನ್ನು ತೆಲಂಗಾಣದಲ್ಲಿ ಮತ ಆಮಿಷಕ್ಕಾಗಿ ಬಳಸುತ್ತಿದೆ - ಬಿಜೆಪಿ | JANATA NEWS
ಬೆಂಗಳೂರು : ತೆಲಂಗಾಣದ ರಂಗಾರೆಡ್ಡಿಯಲ್ಲಿ ನಿನ್ನೆ ಪೊಲೀಸರು ವಶಕ್ಕೆ ಪಡೆದ ರೂ.5 ಕೋಟಿ ನಗದು ಹಣವು ಕರ್ನಾಟಕದಲ್ಲಿ ಕೊಳ್ಳೆ ಹೊಡೆದ ಹಣ ಎಂದು ರಾಜ್ಯ ಬಿಜೆಪಿ ಗಂಭೀರ ಆರೋಪ ಮಾಡಿದೆ.
"ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ, ಕರ್ನಾಟಕದಲ್ಲಿ ಕೊಳ್ಳೆ ಹೊಡೆದ ಕೋಟಿ ಕೋಟಿ ಕಪ್ಪವನ್ನು ಹೈಕಮಾಂಡ್‌ಗೆ ರವಾನೆ ಮಾಡುತ್ತಿತ್ತು. ಈಗ ಕರ್ನಾಟಕದಲ್ಲಿ ಲೂಟಿಗೈದ 5 ಕೋಟಿಯನ್ನು ಯಾವ ನಾಚಿಕೆ ಇಲ್ಲದೆ ತೆಲಂಗಾಣದಲ್ಲಿ ಮತ ಆಮಿಷಕ್ಕಾಗಿ ಬಳಸುತ್ತಿದೆ. ಇಲ್ಲಿ ಕದ್ದ ಹಣದಲ್ಲಿ ಅಲ್ಲಿ ತುಪ್ಪ ಸವರುತ್ತಿರುವುದು ನಾಚಿಕೆಗೇಡಿನ ಸಂಗತಿ.", ಎಂದು ಈ ಕುರಿತು ಎಕ್ಸ್ ನಲ್ಲಿ ಮಾಡಿರುವ ಒಂದು ಪೋಸ್ಟ್ ನಲ್ಲಿ ಹೇಳಿದೆ.
ತೆಲಂಗಾಣದ ರಂಗಾರೆಡ್ಡಿಯಲ್ಲಿ ಗುರುವಾರ ಮುಂಜಾನೆ ಗಚ್ಚಿಬೌಲಿ ಪೊಲೀಸರು ರೂ. ಕಾರಿನಿಂದ ಲೆಕ್ಕಕ್ಕೆ ಸಿಗದ 5 ಕೋಟಿ ರೂ. ನಗದು ಹಣವನ್ನು ಮುಂದಿನ ಕ್ರಮಕ್ಕಾಗಿ ಐಟಿ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿರುವ ಕುರಿತು ವರದಿಯನ್ನು ಎಎನ್ಐ ಮಾಡಿತ್ತು.