ಬೆಂಗಳೂರಿನಾದ್ಯಂತ ಶಾಲೆಗಳಿಗೆ ಬಾಂಬ್ ಬೆದರಿಕೆ : ಹಗುರವಾಗಿ ತೆಗೆದುಕೊಳ್ಳುವ ಪ್ರಶ್ನೆ ಇಲ್ಲ - ಶಿಕ್ಷಣ ಸಚಿವ ಮಧು ಬಂಗಾರಪ್ಪ | JANATA NEWS
ಸೊರಬ : ಬೆಂಗಳೂರಿನಾದ್ಯಂತ ಶಾಲೆಗಳಿಗೆ ಬಾಂಬ್ ಬೆದರಿಕೆಯ ಕುರಿತು ಪ್ರತಿಕ್ರಿಯಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಬೆಂಗಳೂರಿನ ಶಾಲೆಗಳನ್ನು ಗುರಿಯಾಗಿಸಿಕೊಂಡು ಬಾಂಬ್ ಬೆದರಿಕೆಗೆ ಕಾರಣರಾದವರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸಲಾಗುವುದು, ಎಂದು ಹೇಳಿದರು.
"ಪೋಷಕರು ಧೈರ್ಯವಾಗಿರಬೇಕು ನಮ್ಮ ಕರ್ತವ್ಯವನ್ನು ನಾವು ಮಾಡುತ್ತೇವೆ ಹಗುರವಾಗಿ ತೆಗೆದುಕೊಳ್ಳುವ ಪ್ರಶ್ನೆ ಇಲ್ಲ" ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಮಕ್ಕಳು ವಿಷಯ ಅಂದ ತಕ್ಷಣ ಪೋಷಕರಿಗೆ ಭಯ ಇರುತ್ತದೆ. ಪೊಲೀಸರ ಹತ್ರ ಮಾತಾಡಿದ್ದೇನೆ. ಅದು ಯಾರೇ ಇರಲಿ ಅಷ್ಟು ಸುಲಭವಾಗಿ ಬಿಡುವುದಿಲ್ಲ, ಎಂದಿದ್ದಾರೆ.
ಅದು(ಆರೋಪಿ) ಯಾರು ಎಂದು ಈ ಹಂತದಲ್ಲಿ ಗೊತ್ತಾಗುವುದಿಲ್ಲ. ಆದರೆ ಪೊಲೀಸರು ಹೇಳಿದ್ದಾರೆ, ಅವರನ್ನು ಹುಡುಕಿ ತೆಗೆಯುತ್ತೇವೆ ಎಂದು. ನಾವು ಅವರನ್ನು ಮತ್ತು ಅವರ ಉದ್ದೇಶ ಏನು ಎಂದು ಹುಡುಕಿ ತೆಗೆಯುತ್ತೇವೆ, ಎಂದು ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ.