ಸಿಎಂ ಸಿದ್ದರಾಮಯ್ಯ ಅವರೇ, ದೇಶ ಕಾಯುವ ಸೈನಿಕರನ್ನು ಕಂಡರೆ ನಿಮಗೇಕೆ ದ್ವೇಷ - ಬಿಜೆಪಿ ಪ್ರಶ್ನೆ | JANATA NEWS
ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರೇ, ದೇಶ ಕಾಯುವ ಸೈನಿಕರನ್ನು ಕಂಡರೆ ನಿಮಗೇಕೆ ಈ ಪರಿ ದ್ವೇಷ..?? ಅವರ ಪಾಲಿನ ಪರಿಹಾರದ ಹಣ ಪಡೆಯಲು ನಿಮ್ಮ ಬಳಿ ಅಂಗಲಾಚಬೇಕೇ...??? ಎಂದು ವಿರೋಧ ಪಕ್ಷ ಬಿಜೆಪಿ ಖಾರವಾಗಿ ಪ್ರಶ್ನಿಸಿದೆ.
ಕ್ಯಾಪ್ಟನ್ ಎಂ.ವಿ.ಪ್ರಂಜಲ್ ಹುತಾತ್ಮರಾಗಿ 10 ದಿನಗಳಾದರೂ ಇನ್ನೂ ರಾಜ್ಯ ಸರ್ಕಾರ ಘೋಷಣೆ ಮಾಡಿದ್ದ 50 ಲಕ್ಷ ಪರಿಹಾರ ತಲುಪದ ಕುರಿತು ವರದಿಯೊಂದನ್ನು ಉಲ್ಲೇಖಿಸಿ ರಾಜ್ಯ ಬಿಜೆಪಿ ಪೋಸ್ಟನ್ನು ಹಾಕಿದೆ.
"ದೇಶ ಕಾಯುತ್ತಾ ಮಡಿದ ಸೈನಿಕರಿಗೆ ಪರಿಹಾರ ನೀಡಲು ರಾಜ್ಯ ಕಾಂಗ್ರೆಸ್ ಪಕ್ಷದ ಸರ್ಕಾರದ ಬಳಿ ಹಣವಿಲ್ಲ, ಆದರೆ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಪಾಲಾಗುವವರಿಗೆ ಅಮಾಯಕ ಪಟ್ಟ ಕಟ್ಟಿ, ಅವರ ರಕ್ಷಣೆಗೆ ಮಾತ್ರ ಹಣವಿದೆ."
"ಸಿಎಂ ಸಿದ್ದರಾಮಯ್ಯ ಅವರೇ, ದೇಶ ಕಾಯುವ ಸೈನಿಕರನ್ನು ಕಂಡರೆ ನಿಮಗೇಕೆ ಈ ಪರಿ ದ್ವೇಷ..?? ಅವರ ಪಾಲಿನ ಪರಿಹಾರದ ಹಣ ಪಡೆಯಲು ನಿಮ್ಮ ಬಳಿ ಅಂಗಲಾಚಬೇಕೇ...???", ಎಂದು ಬಿಜೆಪಿ ಖಾರವಾಗಿ ಪ್ರಶ್ನಿಸಿದೆ.