2 ಹೊಸ ರಾಜ್ಯಗಳೊಂದಿಗೆ ತನ್ನ ಬಾಹುಗಳನ್ನು 16 ರಾಜ್ಯಕ್ಕೆ ವಿಸ್ತರಿಸಿದ ಬಿಜೆಪಿ | JANATA NEWS
ನವದೆಹಲಿ : ಬಿಜೆಪಿ ಪಕ್ಷವು ಈಗ ಭಾರತದ 28 ರಾಜ್ಯಗಳ ಪೈಕಿ 12 ರಲ್ಲಿ ಅಧಿಕಾರದಲ್ಲಿದೆ ಮತ್ತು ಇತರ ನಾಲ್ಕು ರಾಜ್ಯಗಳಲ್ಲಿ ಆಡಳಿತ ಸಮ್ಮಿಶ್ರದಲ್ಲಿದೆ. ಮತ್ತೊಂದೆಡೆ, ಕಾಂಗ್ರೆಸ್ ರಾಜಸ್ಥಾನ ಮತ್ತು ಛತ್ತೀಸ್‌ಗಢ ದಲ್ಲಿ ಸರ್ಕಾರ ಕಳೆದುಕೊಂಡರೂ, ಕೆಸಿಆರ್ ಸರ್ಕಾರ ಉರುಳಿಸುವ ಮೂಲಕ, ಕರ್ನಾಟಕ ಮತ್ತು ಹಿಮಾಚಲ ಪ್ರದೇಶ ದೊಂದಿಗೆ ತೆಲಂಗಾಣ ಹೊಸ ಸೇರ್ಪಡೆ ಮಾಡಿಕೊಂಡು, ಈಗ ಕೇವಲ ಮೂರು ರಾಜ್ಯಗಳಿಗೆ ಇಳಿಕೆಯಾಗಿದೆ.
ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿಯ ಗೆಲುವಿನೊಂದಿಗೆ ಪಕ್ಷವು 2024 ಕ್ಕೆ ಮುಂಚಿತವಾಗಿ ದೊಡ್ಡ ಭರವಸೆ ನೀಡಿದಂತಾಗಿದೆ.
ವಿಜಯದ ನಂತರ ಪಕ್ಷದ ಪ್ರಧಾನ ಖಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಜ್ಯ ಚುನಾವಣೆಯಲ್ಲಿ ಬಿಜೆಪಿಯ "ಹ್ಯಾಟ್ರಿಕ್" 2024 ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹ್ಯಾಟ್ರಿಕ್ ಗ್ಯಾರಂಟಿ ಎಂದು ಹೇಳಿದರು, ಅವರು ತೀರ್ಪನ್ನು ಜನರ ಅನುಮೋದನೆ ಎಂದು ಬಣ್ಣಿಸಿದರು. ಪಕ್ಷದ "ಉತ್ತಮ ಆಡಳಿತ ಮತ್ತು ಪಾರದರ್ಶಕತೆಯ ರಾಜಕೀಯ" ಕಾರಣ ಎಂದರು.
2014 ರಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ, ಬಿಜೆಪಿ 12 ರಾಜ್ಯಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತು ಮತ್ತು ನರೇಂದ್ರ ಮೋದಿ ಈಗ ದೇಶದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಪ್ರಧಾನ ಮಂತ್ರಿಗಳಲ್ಲಿ ಒಬ್ಬರು.