ಕಾರ್ ಬಸ್ ನಡುವೆ ಅಪಘಾತ : ಬೆಂಕಿಗೆ ಕಾರ್ ಆಹುತಿ, ಬಸ್ ಭಾಗಶಃ ನಷ್ಟ | JANATA NEWS
ಬೆಂಗಳೂರು : ನಾಯಂಡಹಳ್ಳಿ ಮತ್ತು ನಾಗರಬಾವಿ ಸರ್ಕಲ್ ಮಧ್ಯ ಇರುವ ಡಾ.ರಾಜಕುಮಾರ್ ಪುಣ್ಯಭೂಮಿ ರಿಂಗ್ ರಸ್ತೆಯಲ್ಲಿ ಇಂದು ಸಂಭವಿಸಿದ ಅಪಘಾತದಲ್ಲಿ ಕಾರು ಒಂದು ಸಂಪೂರ್ಣ ಸುಟ್ಟು ಹೋಗಿದ್ದು ಬಸ್ಗೆ ಕೂಡ ಬೆಂಕಿ ತಗಲಿರುವ ಘಟನೆ ನಡೆದಿದೆ.
ವೇಗವಾಗಿ ಬಂದ ಕಾರೊಂದು ನಗರ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಗೆ ಹಿಂದಿನಿಂದ ಗುದ್ದಿರುವ ಪರಿಣಾಮ ಕಾರಿಗೆ ಬೆಂಕಿ ಹತ್ತಿಕೊಂಡಿದ್ದು ಬೆಂಕಿ ಬಸ್ ನ ಹಿಂಬದಿ ಭಾಗಕ್ಕೆ ಹತ್ತಿಕೊಂಡಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿದೆ ಬಸ್ ಪ್ರಯಾಣಿಕರು ಹಾಗೂ ಕಾರು ಚಾಲಕ ಸೇರಿದಂತೆ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.
ಬಸ್ ಚಾಲಕ ಹಠಾತ್ ಬ್ರೇಕ್ ಹೊಡೆದ ಪರಿಣಾಮ ಅತಿ ವೇಗದಲ್ಲಿದ್ದ ಕಾರ್ ಚಾಲಕನ ಹತೋಟಿ ತಪ್ಪಿ ಕಾರು ಬಸ್ ಹಿಂಬದಿಗೆ ಗುದ್ದಿದೆ ಕಾರಿನ ಮುಂಭಾಗ ಸಂಪೂರ್ಣ ಹಾನಿಗೊಳಗಾಗಿದ್ದು ತಕ್ಷಣ ಬೆಂಕಿ ಹತ್ತಿಕೊಂಡಿದೆ ತಕ್ಷಣ ಕಾರು ಚಾಲಕ ವಾನದಿಂದ ಹೊರಬಂದಿದ್ದು ಅಪಾಯದಿಂದ ಪಾರಾಗಿದ್ದಾರೆ.