ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ 50 ಲಕ್ಷ ಪರಿಹಾರ ಘೋಷಿಸಿ, ಮರೆತ ಸಿಎಂ ಸಿದ್ದರಾಮಯ್ಯ? | JANATA NEWS
ಬೆಂಗಳೂರು : ಹುತಾತ್ಮರಾದ ವೀರ ಯೋಧ ಕ್ಯಾಪ್ಟನ್ ಪ್ರಾಂಜಲ್ ಅವರ ಕುಟುಂಬಕ್ಕೆ ₹50 ಲಕ್ಷ ಪರಿಹಾರ ಕೊಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಮತಿಭ್ರಮಣೆಗೊಂಡು ಯಾರು ಹೇಳಿದ್ದು ಎಂದು ಕೇಳುತ್ತಿದ್ದಾರೆ, ಎಂದು ವಿರೋಧ ಪಕ್ಷ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಜಮ್ಮು ಮತ್ತು ಕಾಶ್ಮೀರ ಭಯೋತ್ಪಾದಕರ ವಿರುದ್ಧ ನಡೆದ ಎನ್ಕೌಂಟರ್ ನಲ್ಲಿ ಹುತಾತ್ಮರಾದ ಕ್ಯಾಪ್ಟನ್ ಪ್ರಾಂಜಲ್ ಅವರಿಗೆ ಪರಿಹಾರ ಹಣ ನೀಡುವಲ್ಲಿ ವಿಳಂಬದ ಕುರಿತು ಮಾಧ್ಯಮಗಳ ಪ್ರಶ್ನೆ ಒಂದಕ್ಕೆ ಉತ್ತರಿಸುತ್ತಿದ್ದ ಸಿಎಂ ಸಿದ್ದರಾಮಯ್ಯ ಅವರು, "ಪರಿಹಾರ ಕೊಡುತ್ತೇನೆ ಎಂದು ಹೇಳಿದವರು ಯಾರಯ್ಯ?" ಎಂದು ಪ್ರಶ್ನಿಸಿದ್ದಾರೆ.
ಈ ವಿಡಿಯೋವನ್ನು ಶೇರ್ ಮಾಡಿ ತರಾಟೆ ತೆಗೆದುಕೊಂಡಿರುವ ಬಿಜೆಪಿ "ಹುತಾತ್ಮರಾದ ವೀರ ಯೋಧ ಕ್ಯಾಪ್ಟನ್ ಪ್ರಾಂಜಲ್ ಅವರ ಕುಟುಂಬಕ್ಕೆ ₹50 ಲಕ್ಷ ಪರಿಹಾರ ಕೊಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಮತಿಭ್ರಮಣೆಗೊಂಡು ಯಾರು ಹೇಳಿದ್ದು ಎಂದು ಕೇಳುತ್ತಿದ್ದಾರೆ."
"ಕೊಟ್ಟ ಮಾತಿನಂತೆ ಸಿದ್ದರಾಮಯ್ಯ ಅವರು ಹಿಂದೆಂದೂ ನಡೆದುಕೊಂಡಿಲ್ಲ ಅದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಲೇ ಇದ್ದಾರೆ ಇದೀಗ ಯೋಧನ ಸಾವಿನ ವಿಚಾರದಲ್ಲಿ ತಮ್ಮ ಹೀನ ಮನಸ್ಥಿತಿಯನ್ನು ತೋರಿಸಿದ್ದಾರೆ."
"#ATMSarkara ಮೂರನ್ನೂ ಬಿಟ್ಟುವರು ಊರಿಗೆ ದೊಡ್ಡವರು ಎನ್ನುವ ಸಂದೇಶ ಸಾರುತ್ತಿರುವುದು ನಿಜಕ್ಕೂ ದುರಂತ.", ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.