ನೂತನ ಸಂಸತ್ ಭವನದಲ್ಲಿ ಜಿಗಿದ ದುಷ್ಕರ್ಮಿಗಳು : ಕೆಲ ಕಾಲ ಆತಂಕ ಸೃಷ್ಟಿ | JANATA NEWS
ನವದೆಹಲಿ : ಸಂಸತ್ ಕಲಾಪ ನಡೆಯುತ್ತಿರುವ ಸಂದರ್ಭದಲ್ಲಿ ವೀಕ್ಷಕರ ಗ್ಯಾಲರಿ ಇಂದ ಕಲಾಪ ನಡೆಸುತ್ತಿರುವ ಲೋಕಸಭೆ ಸದನಕ್ಕೆ ಇಬ್ಬರೂ ಜಿಗಿದಿದ್ದು ಬಾರಿ ಆತಂಕಕ್ಕೆ ಕಾರಣವಾಗಿದೆ.
ಸುರಕ್ಷತೆ ದೃಷ್ಟಿಯಲ್ಲಿ ಅತ್ಯಂತ ಆಧುನಿಕ ಸುರಕ್ಷತೆಯಗಳಿಂದ ಸುಸಜ್ಜಿತವಾಗಿರುವ ನೂತನ ಸಂಸತ್ ಭವನದಲ್ಲಿ ಈ ಕೃತ್ಯ ನಡೆದಿದ್ದು ಎಲ್ಲರಿಗೂ ಆಶ್ಚರ್ಯ ಹಾಗೂ ಆತಂಕಕ್ಕೆ ಕಾರಣವಾಗಿದೆ.
ವೀಕ್ಷಕರ ಗ್ಯಾಲರಿ ಇಂದ ಜಿಗಿದ ವ್ಯಕ್ತಿ ಹಳದಿ ಬಣ್ಣದ ಹೊಗೆ ಹೊರಸುಸುವ ವಸ್ತುವನ್ನು ಹೊರಹಾಕಿದ್ದು ಅದರಿಂದ ಸಂಸತ್ ನಲ್ಲಿ ಹೊಗೆ ನಗುಮಟ್ಟದಲ್ಲಿ ಹೊಗೆ ಆವರಿಸಿದ್ದು ತಕ್ಷಣ ಕಾರ್ಯ ಪ್ರವೃತ್ತರಾದ ರಕ್ಷಣಾ ಸಿಬ್ಬಂದಿಗಳು ಇಬ್ಬರೂ ವ್ಯಕ್ತಿಗಳನ್ನು ಬಂಧಿಸಿದ್ದಾರೆ.
22 ವರ್ಷದ ಹಿಂದೆ ಇದೇ ದಿನದಂದು ಸಂಸತ್ ಭವನದ ಮೇಲೆ ಭಯೋತ್ಪಾದಕ ದಾಳಿ ನಡೆದಿದ್ದು ದುಷ್ಕರ್ಮಿಗಳು ಇದೇ ದಿನವನ್ನು ಆಯ್ಕೆ ಮಾಡಿಕೊಂಡಿದ್ದು ಇದಕ್ಕೆ ಕಾರಣವನ್ನು ಇನ್ನು ತನಿಖೆ ಬಳಿಕ ಹೊರಬೀಳಬೇಕಾಗಿದೆ.