ದುಷ್ಕರ್ಮಿಗಳ ಮನೆಗಳ ಮೇಲೆ ಬುಲ್ಡೋಜರ್ : ಮಧ್ಯಪ್ರದೇಶದ ನೂತನ ಸಿಎಂ ಮೋಹನ್ ಯಾದವ್ ಆದೇಶ | JANATA NEWS
ಭೋಪಾಲ್ : ಮಧ್ಯಪ್ರದೇಶದ ನೂತನ ಸಿಎಂ ಮೋಹನ್ ಯಾದವ್ ಸರ್ಕಾರ ರಾಜ್ಯದಲ್ಲಿ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.
ಫಲಿತಾಂಶದ ದಿನವಾದ ಡಿಸೆಂಬರ್ 3 ರಂದು ಬಿಜೆಪಿ ಕಾರ್ಯಕರ್ತ ದೇವೇಂದ್ರ ಠಾಕೂರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ದುಷ್ಕರ್ಮಿಗಳ ಮನೆಗಳ ಮೇಲೆ ಬುಲ್ಡೋಜರ್ ಓಡಿಸಲು ರಾಜ್ಯ ಸರ್ಕಾರ ಆದೇಶ ನೀಡಿದೆ.
ಚುನಾವಣಾ ಫಲಿತಾಂಶ ಹೊರಬಿದ್ದ ನಂತರ ಡಿಸೆಂಬರ್ 3 ರಂದು ಬಿಜೆಪಿ ಕಾರ್ಯಕರ್ತ ದೇವೇಂದ್ರ ಅವರ ಮೇಲೆ ಹರಿತವಾದ ಆಯುಧಗಳು ಮತ್ತು ವಸ್ತುಗಳಿಂದ ಹಲ್ಲೆ ನಡೆಸಿದ ಆರೋಪಿಗಳಾದ ಫಾರೂಖ್ ರೈನ್, ಅಸ್ಲಾಂ, ಶಾರುಖ್, ಬಿಲಾಲ್ ಮತ್ತು ಸಮೀರ್ ಅವರನ್ನು ಈಗಾಗಲೇ ಬಂಧಿಸಲಾಗಿದೆ.
English summary : Bulldozer on the houses of criminals: Madhya Pradesh new CM Mohan Yadav orders