ರಾಜ್ಯದ ರಾಜಕಾರಣದಲ್ಲಿ ಪವಾರ್ ಅವರು ಇದಾರೆ... ಶಿಂದೆ ಅವರು ಇದಾರೆ - ಎಚ್.ಡಿ.ಕುಮಾರಸ್ವಾಮಿ | JANATA NEWS

ನವದೆಹಲಿ : ಮಹಾರಾಷ್ಟ್ರ ರೀತಿಯಲ್ಲಿ ಕರ್ನಾಟಕ ರಾಜ್ಯದಲ್ಲೂ ಸಹ ಸರ್ಕಾರ ಬದಲಾವಣೆ ಆಗುವ ಸಾದ್ಯತೆ ಇದೆ ಹಾಗೂ ಚುನಾವಣೆ ಬಳಿಕ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನವದೆಹಲಿಯಲ್ಲಿ ಹೇಳಿದ್ದಾರೆ.
ಇಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ತಮ್ಮ ಮಕ್ಕಳಾದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯ ಅಧ್ಯಕ್ಷ ಎಚ್ ಡಿ ಕುಮಾರಸ್ವಾಮಿ, ಮಾಜಿ ಸಚಿವ ಹಾಗೂ ಶಾಸಕ ಎಚ್.ಡಿ.ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಅವರೊಂದಿಗೆ ರಾಷ್ಟ್ರ ರಾಜಧಾನಿ ರಾಜಧಾನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂದು ಗುರುವಾರ ಭೇಟಿ ಮಾಡಿ ಹೋಗುಚ್ಚ ನೀಡಿ ಅಭಿನಂದಿಸಿದ್ದಾರೆ.
ಏನು ಬೇಕಾದರೆ ಆಗಬಹುದು. ರಾಜ್ಯದ ರಾಜಕಾರಣದಲ್ಲಿ ಪವಾರ್ ಅವರು ಇದಾರೆ. ಶಿಂದೆ ಅವರು ಇದಾರೆ. ಯಾರು ಮೊದಲು ಮುಂದೆ ಬರ್ತಾರೆ ನೋಡಬೇಕು, ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಹೇಳುವ ಮೂಲಕ ಕರ್ನಾಟಕ ರಾಜಕೀಯ ಹಾಗೂ ಸರ್ಕಾರ ಬದಲಾವಣೆ ಕುರಿತು ಹೊಸ ಮುನ್ಸೂಚನೆ ನೀಡಿದ್ದಾರೆ.
ಸೀಟು ಹಂಚಿಕೆಯಲ್ಲಿ ಏನೂ ಗೊಂದಲವಿಲ್ಲಾ. ಎರಡೂ ಪಕ್ಷಗಳ ಮಧ್ಯೆ ಪರಸ್ಪರ ವಿಶ್ವಾಸ ಗಳಿಸುವ ಕೆಲಸವಾಗಬೇಕಾಗಿದೆ. ಜನವರಿ ಅಷ್ಟರ ಹೊತ್ತಿಗೆ ರಾಜ್ಯದ ಲೂಟಿ ಸರ್ಕಾರದ ವಿರುದ್ಧ ಜೊತೆಗೂಡಿ ಹೋರಾಟ ನಡೆಸುವುದು ಮುಖ್ಯ, ಎಂದು ಕುಮಾರಸ್ವಾಮಿ ಹೇಳಿದ್ದಾರೆ.