ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಲಿದ್ದಾರೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ | JANATA NEWS
ನವದೆಹಲಿ : ಜನವರಿ 26, 2024 ರಂದು ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಮುಖ್ಯ ಅತಿಥಿಯಾಗಲಿದ್ದಾರೆ.
ಬರುವ ವರ್ಷ ಜನವರಿ 26ರಂದು ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನವನ್ನು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಸ್ವೀಕರಿಸಿದ್ದಾರೆ.
ಈ ಕುರಿತು ಹೇಳಿರುವ ಅಧ್ಯಕ್ಷ ಮ್ಯಾಕ್ರನ್, "ನಿಮ್ಮೊಂದಿಗೆ ಆಚರಿಸಲು ನಾನು ಇಲ್ಲಿರಲಿದ್ದೇನೆ!", "ನನ್ನ ಆತ್ಮೀಯ ಸ್ನೇಹಿತ" ಎಂದು ಕರೆದು ಪ್ರಧಾನಿ ಮೋದಿಯವರಿಗೆ ಧನ್ಯವಾದ ಅರ್ಪಿಸಿದರು.
"ನಿಮ್ಮ ಆಹ್ವಾನಕ್ಕೆ ಧನ್ಯವಾದಗಳು, ನನ್ನ ಆತ್ಮೀಯ ಸ್ನೇಹಿತ ನರೇಂದ್ರ ಮೋದಿ. ಭಾರತ, ನಿಮ್ಮ ಗಣರಾಜ್ಯೋತ್ಸವದಂದು, ನಿಮ್ಮೊಂದಿಗೆ ಆಚರಿಸಲು ನಾನು ಇಲ್ಲಿರಲಿದ್ದೇನೆ!", ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಎಕ್ಸ್ ನಲ್ಲಿ ಬರೆದಿದ್ದಾರೆ.
ಈ ಪೋಸ್ಟ್‌ಗೆ ಪ್ರತ್ಯುತ್ತರವಾಗಿ ಪಿಎಂ ಮೋದಿ ಬರೆದಿದ್ದು, "ನನ್ನ ಆತ್ಮೀಯ ಸ್ನೇಹಿತ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್, 75 ನೇ ಗಣರಾಜ್ಯೋತ್ಸವದಲ್ಲಿ ನಿಮ್ಮನ್ನು ಮುಖ್ಯ ಅತಿಥಿಯಾಗಿ ಸ್ವೀಕರಿಸಲು ನಾವು ಉತ್ಸುಕತೆಯಿಂದ ಎದುರು ನೋಡುತ್ತಿದ್ದೇವೆ. ನಾವು ಭಾರತ-ಫ್ರಾನ್ಸ್ ವ್ಯೂಹಾತ್ಮಕ ಪಾಲುದಾರಿಕೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ನಂಬಿಕೆಯನ್ನು ಹಂಚಿಕೊಂಡಿದ್ದೇವೆ. ಶೀಘ್ರದಲ್ಲೇ ಭೇಟಿಯಾಗೋಣ" ಎಂದು ಹೇಳಿದ್ದಾರೆ.