ನಿಮ್ಮನ್ನು ನೀವು ಪ್ರಧಾನಿ ಸ್ಥಾನದವರೆಗೂ ಕಲ್ಪನೆ ಮಾಡಿಕೊಂಡು ಮಾತನಾಡಬಾರದು : ಸಿಎಂ ಸಿದ್ದರಾಮಯ್ಯಗೆ ಸಂಸದ ಸಿಂಹ ಸಲಹೆ | JANATA NEWS
ಬೆಂಗಳೂರು : ಪ್ರಧಾನಿ ವಿಮಾನ ವಿಷಯಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಅವರ ಮಾತಲ್ಲಿ ವಿವೇಚನೆ ರಹಿತ ಧೋರಣೆ ಇತ್ತು, ಎಂದು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟಿದ್ದಾರೆ.
ನಿಮ್ಮ ಹಾಗೆ ಪ್ರಧಾನಿಯವರು ಖಾಸಗಿ ವಿಮಾನದಲ್ಲಿ ಓಡಾಡುವುದಿಲ್ಲ... ಪ್ರಧಾನಿಗಳು ಸರ್ಕಾರಿ ಏರ್ ಫೋರ್ಸ್ ಒನ್ ವಿಮಾನದಲ್ಲಿ ಓಡಾಡುತ್ತಾರೆ... ಅವರು ಯಾವುದು ಪ್ರೈವೇಟ್ ಜೆಟ್ ಅಲ್ಲಿ ಓಡಾಡುತ್ತಿಲ್ಲ. ನಿಮ್ಮನ್ನು ನೀವು ಪ್ರಧಾನಿ ಸ್ಥಾನದವರೆಗೂ ಕಲ್ಪನೆ ಮಾಡಿಕೊಂಡು ಮಾತನಾಡಬಾರದು, ಎಂದು ಸಂಸದ ಪ್ರತಾಪ್ ಸಿಂಹ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದಾರೆ.
ದೇಶದಲ್ಲಿ 24 ಮುಖ್ಯಮಂತ್ರಿಗಳಿದ್ದಾರೆ, 2 ಕೇಂದ್ರಾಡಳಿತ ಪ್ರದೇಶಗಳಿವೆ ಅದಕ್ಕೂ ಸಹ ಮುಖ್ಯಮಂತ್ರಿಗಳು ಇದ್ದಾರೆ. ಆದರೆ ದೇಶಕ್ಕೆ ಇರುವುದು ಒಂದೇ ಒಂದು ಪ್ರಧಾನ ಮಂತ್ರಿ. 140 ಕೋಟಿ ಜನರಿಗೆ ಹಾಗೂ ಇಡೀ ದೇಶಕ್ಕೆ ಇರುವುದು ಒಂದೇ ಪ್ರಧಾನಿ ತಾವು ದಯವಿಟ್ಟು ತಮ್ಮನ್ನು ತಾವು ಪ್ರಧಾನಿ ಸ್ಥಾನದವರೆಗೂ ಹೋಲಿಸಿಕೊಂಡು ಮಾತಾಡಬಾರದು, ಎಂದು ಕಿವಿ ಮಾತು ಹೇಳಿದ್ದಾರೆ.
ಇತ್ತೀಚಿಗೆ ಐಷಾರಾಮಿ ಖಾಸಗಿ ವಿಮಾನದಲ್ಲಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ತೆರಳಿದ್ದ ವಿಡಿಯೋವನ್ನು ಜಮೀರ್ ಅಹ್ಮದ್ ಶೇರ್ ಮಾಡಿದ್ದು, ಈ ಕುರಿತು ಸಾಕಷ್ಟು ವಿವಾದ ಸೃಷ್ಟಿಯಾದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ಅವರು, ಪ್ರಧಾನಿ ಯಾವ ವಿಮಾನದಲ್ಲಿ ಓಡಾಡ್ತಾರೆ? ಅವರಿಗೆ ಕೇಳಿದರಾ? ಈ ಪ್ರಶ್ನೆನ ಕೇಳಿ? ಎಂದು ಮಾಧ್ಯಮದವರಿಗೆ ಮಾರ್ಮಿಕವಾಗಿ ನುಡಿದಿದ್ದರು.
ಪ್ರಧಾನ ಮಂತ್ರಿ ಯಾವುದರಲ್ಲಿ ಓಡಾಡ್ತಾರೆ, ಎಂದು ಕೇಳುತ್ತಾರೆ. ರೀ.. ಸ್ವಾಮಿ, ಸಿದ್ದರಾಮಯ್ಯ ಸಾಹೇಬರೇ, ಪ್ರಧಾನಿಯವರಿಗೆ ವಿಮಾನ ನಮ್ಮ ಪಾರ್ಲಿಮೆಂಟ್ ಅಲ್ಲಿ ಎನ್.ಎಸ್.ಜಿ ಆಕ್ಟ್ ಅನುಸಾರ ಪ್ರಧಾನಿ ಭದ್ರತೆಆನುಸಾರ ಪಾರ್ಲಿಮೆಂಟ್ ನಿಯಮದ ಪ್ರಕಾರ ತೀರ್ಮಾನ ಆಗಿದೆ. ಅದೇ ರೀತಿ, ಅದೇ ವಿಮಾನದಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ ಯವರು ಕೂಡ ಓಡಾಡುತ್ತಾರೆ, ಎಂದು ತಿಳಿಸಿದ್ದಾರೆ.
ಪ್ರಧಾನಿಯವರು ಒಬ್ಬರೇ ಆ ವಿಮಾನದಲ್ಲಿ ಓಡಾಡುತ್ತಾರೆ, ನಿಮ್ಮ ಹಾಗೆ ಚೇಲಾಗಳೊಂದಿಗೆ ಓಡಾಡೋದಿಲ್ಲ. ಪ್ರಧಾನಿಯವರು ಅವರ ಕಾರ್ಯಾಲಯದ ಅಧಿಕಾರಿಗಳು ಹಾಗೂ ವಿದೇಶಾಂಗ ಸಿಬ್ಬಂದಿಗಳೊಂದಿಗೆ ಸರ್ಕಾರಿ ವಿಮಾನದಲ್ಲಿ ತೆರಳುತ್ತಾರೆ. ಅವರು ತಮ್ಮ ಚೀಲಗಳನ್ನು ಖಾಸಗಿನಲ್ಲಿ ತಮ್ಮ ಪಟಾಲಮ್ಮುಗಳನ್ನು ಕರೆದುಕೊಂಡು ಓಡಾಡುವುದಿಲ್ಲ, ಎಂದು ಲೇವಡಿ ಮಾಡಿದ್ದಾರೆ.