ರಾಜ್ಯದಲ್ಲಿ 35 ಜೆಎನ್.1 ವೈರಸ್ ಸೋಂಕು | JANATA NEWS
ಬೆಂಗಳೂರು : ಕರ್ನಾಟಕದಲ್ಲಿ ಕೋವಿಡ್‌ನ JN.1 ರೂಪಾಂತರಿ ವೈರಸ್ ಬಂದಿದ್ದು, ರಾಜ್ಯದಲ್ಲಿ 35 ಜೆಎನ್.1 ಪಾಸಿಟಿವ್ ಬಂದಿದೆ. ಬೆಂಗಳೂರಿನಲ್ಲಿ ಹೆಚ್ಚು ಸಂಖ್ಯೆ ಇದ್ದ ಹಾಗೆ ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಈ ಪೈಕಿ ಬೆಂಗಳೂರಿನಲ್ಲಿ 20 ಮಂದಿಗೆ JN.1 ರೂಪಾಂತರಿ ವೈರಸ್ ಸೋಂಕು ದೃಢಪಟ್ಟಿದ್ದರೆ, ಮೈಸೂರು, ರಾಮನಗರ, ಮಂಡ್ಯ ಹಾಗೂ ಚಾಮರಾಜನಗರದಲ್ಲೂ JN.1 ರೂಪಾಂತರಿ ವೈರಸ್ ಸೋಂಕಿತರು ಪತ್ತೆಯಾಗಿಡೇ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕೊರೊನಾ ಹೊಸ ರೂಪಾಂತರಿಯಾದ ಜೆಎನ್.1 ವೈರಸ್ ದಿನೇ ದಿನೇ ಹೆಚ್ಚುತ್ತಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಾಳೆ ಜಿಲ್ಲಾವಾರು ಮಾಹಿತಿ ನೀಡಲಾಗುತ್ತದೆ. ನಾಳೆ ಸಬ್ ಕಮಿಟಿ ಸಭೆ ಇದೆ. ಅದರಲ್ಲಿ ಈ ಕುರಿತು ಚರ್ಚೆ ಮಾಡಲಾಗುತ್ತದೆ. ತಜ್ಞರ ಜೊತೆ ಉಪ ಸಮಿತಿ ಸಭೆ ಮಾಡಲಾಗುತ್ತದೆ. ಜೆಎನ್.1 ಬಂದ ಬಗ್ಗೆ ಮಾಹಿತಿ ಇತ್ತು. ಅಧಿಕೃತವಾಗಿ ತಿಳಿಯಲು ಮಾತ್ರ ಸ್ಯಾಂಪಲ್ ಕಳುಹಿಸಲಾಗಿತ್ತು.
ನ್ಯೂ ಇಯರ್‌ಗೆ ಎಲ್ಲೂ ಹೊಸ ಮಾರ್ಗಸೂಚಿ ಇಲ್ಲ, ಇಡೀ ದೇಶದಲ್ಲಿ ಮಾರ್ಗಸೂಚಿ ಜಾರಿ ಇಲ್ಲ. ಜನ ಗುಂಪಾಗಿ ಸೇರಬಾರದು, ಕಾರ್ಯಕ್ರಮ ಮಾಡಬಾರದು ಎಂದು ನಿಯಮ ಇರಲ್ಲ. ಪಾಸಿಟಿವ್ ಬಂದವರು ಸದ್ಯ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ. ಯಾವುದೇ ರೀತಿ ಗೈಡ್ ಲೈನ್ ಸದ್ಯ ಬಿಟ್ಟಿಲ್ಲ. ನಾಳೆ ಮಧ್ಯಾಹ್ನದ ನಂತರ ಆ ಬಗ್ಗೆ ತಿಳಿಸುತ್ತೇವೆ ಅಂತ ಸಚಿವರು ಸ್ಪಷ್ಟಪಡಿಸಿದ್ದಾರೆ.