ಮೋದಿ ಸರ್ಕಾರದ ಫೇಮ್ ಇಂಡಿಯಾ ಹಂತ-2 ಯೋಜನೆಯಿಂದ ರಾಜ್ಯಕ್ಕೆ 921 ಎಲೆಕ್ಟ್ರಿಕ್ ಬಸ್ ಗಳ ಪೈಕಿ 100 ಬಸ್ ಈಗ ಬಂದಿದೆ - ಬಿಜೆಪಿ | JANATA NEWS
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರ್ಕಾರದ ಫೇಮ್ ಇಂಡಿಯಾ ಹಂತ-2 ಭಾಗವಾಗಿ ಕರ್ನಾಟಕಕ್ಕೆ ಈ ವರ್ಷ 921 ಎಲೆಕ್ಟ್ರಿಕ್ ಬಸ್‌ಗಳನ್ನು ಕೊಡಲಾಗುತ್ತಿದೆ. ಅದರಲ್ಲಿ ಇದೀಗ 100 ಇವಿ ಬಸ್‌ಗಳು ಬೆಂಗಳೂರು ಮಹಾನಗರ ಸಾರಿಗೆಗೆ ಬಂದು ಸೇರಿವೆ, ಎಂದು ರಾಜ್ಯ ಬಿಜೆಪಿ ಹೇಳಿದೆ.
100 ಎಲೆಕ್ಟ್ರಿಕ್ ಬಸ್ ಗಳು ರಾಜ್ಯ ಸರ್ಕಾರದ ಕೊಡುಗೆ ಎಂದು ಹೇಳಿರುವ ಸಿಎಂ ಸಿದ್ದರಾಮಯ್ಯ ಅವರನ್ನು ತರಾಟೆ ತೆಗೆದುಕೊಂಡಿರುವ ಬಿಜೆಪಿ ಪಕ್ಷವು, "ಭಂಡಗೇಡಿ ಕಾಂಗ್ರೆಸ್ ಸರ್ಕಾರ ಸೌಜನ್ಯಕ್ಕೂ ಪ್ರಧಾನಿ ಅವರಿಗೆ ಧನ್ಯವಾದಗಳನ್ನು ತಿಳಿಸದೆ ನಾನೇ ಮಾಡಿದ್ದು, ನಾನೇ ತಂದಿದ್ದು ಎಂದು ಬೀಗಿ, ಬಿಟ್ಟಿ ಪ್ರಚಾರ ಪಡೆದುಕೊಳ್ಳುತ್ತಿದೆ.", ಎಂದು ವಾಗ್ದಾಳಿ ನಡೆಸಿದೆ.
ಈ ಕುರಿತು ರಾಜ್ಯ ಬಿಜೆಪಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, "ಯಾರೋ ಹುಟ್ಟಿಸಿದ ಮಗುವಿಗೆ ನಾನೇ ಅಪ್ಪ ಎಂದು ಬೀಗಿದಂತಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ತನೆ."
"ಶಕ್ತಿ ಯೋಜನೆಯನ್ನು ಅವಾಸ್ತವಿಕವಾಗಿ ಅನುಷ್ಠಾನ ಮಾಡಿ ರಾಜ್ಯದ ನಾಲ್ಕು ನಿಗಮಗಳನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ಬರ್ಬಾದ್ ಮಾಡಿ ಹಾಕಿದೆ."
"ಪ್ರಯಾಣಿಕರು ಸಾರಿಗೆ ಬಸ್‌ಗಳು ಸಂಚರಿಸದೆ ಪ್ರತಿದಿನ ಹೊಡೆದಾಡಿಕೊಳ್ಳುತ್ತಿರುವುದನ್ನು ನೋಡಿ ಮಜವಾದಿ ಸರ್ಕಾರ ಮಜಾ ತೆಗೆದುಕೊಂಡಿದ್ದು ಬಿಟ್ಟರೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಿಲ್ಲ."
"ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿ ಹಾಗೂ ಬದ್ಧತೆಯಿಂದ ಫೇಮ್ ಇಂಡಿಯಾ ಯೋಜನೆಯನ್ನು ಜಾರಿಗೆ ತರಲಾಯಿತು. ಇದಕ್ಕೆ ಬಜೆಟ್‌ನಲ್ಲಿ ₹10 ಸಾವಿರ ಕೋಟಿಯನ್ನು ಮೀಸಲಿಡಲಾಯಿತು."
"ಫೇಮ್ ಇಂಡಿಯಾ ಹಂತ-2 ಭಾಗವಾಗಿ ಕರ್ನಾಟಕಕ್ಕೆ ಈ ವರ್ಷ 921 ಎಲೆಕ್ಟ್ರಿಕ್ ಬಸ್‌ಗಳನ್ನು ಕೊಡಲಾಗುತ್ತಿದೆ. ಅದರಲ್ಲಿ ಇದೀಗ 100 ಇವಿ ಬಸ್‌ಗಳು ಬೆಂಗಳೂರು ಮಹಾನಗರ ಸಾರಿಗೆಗೆ ಬಂದು ಸೇರಿವೆ."
"ರಾಜ್ಯದಲ್ಲಿ ಹದಗೆಟ್ಟ ಸಾರಿಗೆ ವ್ಯವಸ್ಥೆಯನ್ನು ಸರಿದೂಗಿಸಲು ಪ್ರಧಾನಿ ಮೋದಿಯವರ ಇಚ್ಛಾಶಕ್ತಿಯ ನೆರವೇ ಬೇಕಾಯಿತು. ಆದರೆ ಭಂಡಗೇಡಿ ಕಾಂಗ್ರೆಸ್ ಸರ್ಕಾರ ಸೌಜನ್ಯಕ್ಕೂ ಪ್ರಧಾನಿ ಅವರಿಗೆ ಧನ್ಯವಾದಗಳನ್ನು ತಿಳಿಸದೆ ನಾನೇ ಮಾಡಿದ್ದು, ನಾನೇ ತಂದಿದ್ದು ಎಂದು ಬೀಗಿ, ಬಿಟ್ಟಿ ಪ್ರಚಾರ ಪಡೆದುಕೊಳ್ಳುತ್ತಿದೆ."
"ಸುಳ್ಳುಗಳನ್ನು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸುಳ್ಳು ಸುದ್ದಿಯನ್ನೇ ಹರಡಿ ಟೂಲ್‌ಕಿಟ್ ಪ್ರಚಾರ ಪಡೆದುಕೊಳ್ಳುತ್ತಿದೆ.", ಎಂದು ವಾಗ್ದಾಳಿ ನಡೆಸಿದೆ.