5 ರಿಂದ 11 ದಿನಾಂಕದ ಅವಧಿಯಲ್ಲಿ ಶೀತ ಅಲೆಗಳ ಸ್ಥಿತಿ : ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ | JANATA NEWS

ನವದೆಹಲಿ : ಮಧ್ಯ ಭಾರತದ ಕೆಲವು ಭಾಗಗಳಲ್ಲಿ ಈ ತಿಂಗಳ 5 ರಿಂದ 11 ದಿನಾಂಕದ ಅವಧಿಯಲ್ಲಿ ಶೀತ ಅಲೆಗಳ ಸ್ಥಿತಿ ನಿರೀಕ್ಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.
ಐಎಂಡಿ ಡಿಜಿ ಡಾ.ಮೃತ್ಯುಂಜಯ್ ಅವರ ಪ್ರಕಾರ ಮಧ್ಯಪ್ರದೇಶ, ರಾಜಸ್ತಾನ, ಹರಿಯಾಣ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಂತಹ ಈ ಮಧ್ಯ ಭಾರತದ ರಾಜ್ಯಗಳಲ್ಲಿ ಹಗಲಿನ ತಾಪಮಾನವು ಸಾಮಾನ್ಯ ದಿನಗಳ ತಾಪಮಾನಕ್ಕಿಂತ ಕೆಳಗೆ ಜಾರುವ ನಿರೀಕ್ಷೆಯಿದೆ.
ಮತ್ತು ಭಾರತದ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತದ ಪರಿಣಾಮದ ಪ್ರದೇಶಗಳಾದ ಲಕ್ಷದ್ವೀಪ ಮತ್ತು ಪೂರ್ವ ಕರಾವಳಿಯಲ್ಲಿ ಭಾರೀ ಮಳೆ ಮತ್ತು ಭಾರೀ ಗಾಳಿಗೆ ಕಾರಣವಾಗುತ್ತದೆ.
ಡಾ.ಮೃತ್ಯುಂಜಯ್ ಮೊಹಾಪಾತ್ರ ಅವರು ಹೇಳುತ್ತಾರೆ, "ಜನವರಿ 5-11 ರ ಸಮಯದಲ್ಲಿ ರಾತ್ರಿಯ ಉಷ್ಣತೆಯು ಕುಸಿಯುವ ನಿರೀಕ್ಷೆಯಿದೆ, ಇದು ಮಧ್ಯ ಭಾರತದ ಕೆಲವು ಭಾಗಗಳಲ್ಲಿ ಶೀತ ಅಲೆಯ ಪರಿಸ್ಥಿತಿಗಳಿಗೆ ಕಾರಣವಾಗಬಹುದು ... ಹಗಲಿನ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆ ಇರುತ್ತದೆ ಮತ್ತು ಶೀತ ದಿನದ ಪರಿಸ್ಥಿತಿಗಳಿಗೆ ಕಾರಣವಾಗುತ್ತದೆ ವಿಶೇಷವಾಗಿ ಮಧ್ಯಪ್ರದೇಶದಲ್ಲಿ, ಮಹಾರಾಷ್ಟ್ರದ ಉತ್ತರ ಭಾಗಗಳಲ್ಲಿ, ಉತ್ತರ ಪ್ರದೇಶದ ದಕ್ಷಿಣ ಭಾಗಗಳಲ್ಲಿ..."