ಸಿಎಂ ಸಿದ್ದರಾಮಯ್ಯ ನವರಿಗೆ ರಾಮಭಕ್ತರ ಮೇಲೆ ಏಕಿಷ್ಟು ದ್ವೇಷ, ಹಗೆತನ? - ಆರ್ ಅಶೋಕ್ | JANATA NEWS
ಬೆಂಗಳೂರು : ಸಿಎಂ ಸಿದ್ದರಾಮಯ್ಯ ನವರಿಗೆ ರಾಮಭಕ್ತರ ಮೇಲೆ ಏಕಿಷ್ಟು ದ್ವೇಷ, ಹಗೆತನ? ಕೇಸರಿ ಬಣ್ಣ, ಕುಂಕುಮ ಕಂಡರೆ ಕಾಂಗ್ರೆಸ್ ಪಕ್ಷಕ್ಕೆ ಏಕಿಷ್ಟು ಅಸಹ್ಯ? ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಪ್ರಶ್ನಿಸಿದ್ದಾರೆ.
ನಾಳೆ ಹುಬ್ಬಳ್ಳಿಯಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ತಾವು ಭಾಗವಹಿಸಿದಾಗಯು ಹಾಗೂ ಬೇಕಿದ್ದರೆ ತಮ್ಮನ್ನು ಬಂಧಿಸಲಿ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಆರ್ ಅಶೋಕ್ ಅವರು ಸವಾಲು ಹಾಕಿದ್ದಾರೆ.
"ಅಲ್ಪಸಂಖ್ಯಾತರ ಮೇಲೆ ಮಮಕಾರ, ಹಿಂದೂಗಳೆಂದರೆ ತಾತ್ಸಾರ. ಅಲ್ಪಸಂಖ್ಯಾತರ ಮೇಲೆ ಎಲ್ಲಿಲ್ಲದ ಪ್ರೀತಿ, ಅಕ್ಕರೆ ತೋರುವ ಸಿಎಂ ಸಿದ್ದರಾಮಯ್ಯ ನವರಿಗೆ ರಾಮಭಕ್ತರ ಮೇಲೆ ಏಕಿಷ್ಟು ದ್ವೇಷ, ಹಗೆತನ? ಕೇಸರಿ ಬಣ್ಣ, ಕುಂಕುಮ ಕಂಡರೆ ಕಾಂಗ್ರೆಸ್ ಪಕ್ಷಕ್ಕೆ ಏಕಿಷ್ಟು ಅಸಹ್ಯ?"
"ಹಳೇ ಕೇಸುಗಳಿಗೆ ಮರುಜೀವ ನೀಡಿ ಕರಸೇವಕರ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿರುವ ಹಿಂದು ವಿರೋಧಿ ಕಾಂಗ್ರೆಸ್ ಸರ್ಕಾರದ ದೌರ್ಜನ್ಯ ಅತ್ಯಂತ ಖಂಡನೀಯ."
"ರಾಮಜನ್ಮಭೂಮಿ ಹೋರಾಟಗಾರರ ಬಂಧನ ಖಂಡಿಸಿ ನಾಳೆ ಹುಬ್ಬಳ್ಳಿಯಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ನಾನು ಪಾಲ್ಗೊಳ್ಳಲಿದ್ದೇನೆ. ಸ್ವಯಂಸೇವಕರು, ಕರಸೇವಕರು, ಹಿಂದೂ ಕಾರ್ಯಕರ್ತರ ವಿರುದ್ಧ ಎಲ್ಲೇ ದೌರ್ಜನ್ಯ ನಡೆದರೂ ಅವರ ಬೆನ್ನಿಗೆ ನಿಲ್ಲುತ್ತೇನೆ. ಕಾಂಗ್ರೆಸ್ ಸರ್ಕಾರ ನನ್ನನ್ನೂ ಬೇಕಿದ್ದರೆ ಬಂಧಿಸಲಿ, ಕೇಸು ದಾಖಲಿಸಲಿ.", ಎಂದು ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.