ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಯಕರ ಮನೆ ಮೇಲೆ ದಾಳಿ ನಡೆಸುತ್ತಿದ್ದ ವೇಳೆ ಇಡಿ, ಸಿಆರ್‌ಪಿಎಫ್ ತಂಡದ ಮೇಲೆ ಜನರಿಂದ ಹಲ್ಲೆ | JANATA NEWS
ಕೋಲ್ಕತ್ತಾ : ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಆಡಳಿತಾರೂಢ ಟಿಎಂಸಿಯ ಬ್ಲಾಕ್ ಮಟ್ಟದ ಕಾರ್ಯಕರ್ತರ ಮನೆ ಮೇಲೆ ಶುಕ್ರವಾರ ದಾಳಿ ನಡೆಸಲು ಯತ್ನಿಸಿದ ಜಾರಿ ನಿರ್ದೇಶನಾಲಯದ(ಇಡಿ) ತಂಡದ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣವನ್ನು ಭಾರತೀಯ ಜನತಾ ಪಕ್ಷ(ಬಿಜೆಪಿ) ತೀವ್ರವಾಗಿ ಖಂಡಿಸಿದ್ದು, ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಸಿಡಿದೆದ್ದಿದೆ.
ಪಶ್ಚಿಮ ಬಂಗಾಳದಲ್ಲಿ ಹಿರಿಯ ಇಡಿ ಅಧಿಕಾರಿಯೊಬ್ಬರು ತಮ್ಮ ಮೇಲೆ ನಡೆದ ಮಾರಣಾಂತಿಕ ದಾಳಿಯಿಂದ ಬದುಕುಳಿದರು. ಬಹುಕೋಟಿ ಪಡಿತರ ಹಗರಣದ ಆರೋಪಿ ರಾಜ್ಯ ಆಡಳಿತ ಪಕ್ಷದ ಟಿಎಂಸಿ ನಾಯಕ ಶಹಜಹಾನ್ ಶೇಖ್ ಅವರ ಮನೆಗಳ ಮೇಲೆ ದಾಳಿ ನಡೆಸಲು ಅವರು ಬಂಗಾಳದ ಸಂದೇಶಖಾಲಿಗೆ ತೆರಳಿದ್ದರು.
ಪದೇ ಪದೇ ಕರೆ ಮಾಡಿದ ನಂತರ ಎನ್‌ಐಎ ತಂಡವು ಶೇಖ್ ಅವರ ಮನೆಯ ಬಾಗಿಲು ಒಡೆಯಲು ಪ್ರಯತ್ನಿಸಿದಾಗ, ನೂರಾರು ಜನರ ಗುಂಪು ಸ್ಥಳದಲ್ಲಿ ಜಮಾಯಿಸಿ ಘೋಷಣೆಗಳನ್ನು ಕೂಗಿದರು ಹಾಗೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಘಟನೆಯನ್ನು ಖಂಡಿಸಿದ ಪ.ಬಂ. ಬಿಜೆಪಿ ಮುಖಂಡ ಮತ್ತು ವಿರೋಧ ಪಕ್ಷದ ನಾಯಕ ಸುವೆಂದು ಆಶಿಕಾರಿ ಅವರು, "ಭಯಾನಕ. ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಇಡಿ ಅಧಿಕಾರಿಗಳು ಮತ್ತು ಸಿಆರ್‌ಪಿಎಫ್ ಜವಾನರು ಸಂದೇಶಖಾಲಿ; ಉತ್ತರ 24 ಪರಗಣ ಜಿಲ್ಲೆಯಲ್ಲಿ ಟಿಎಂಸಿ ನಾಯಕ ಶೇಖ್ ಷಹಜಹಾನ್ ಅವರ ಮನೆ ಮೇಲೆ ದಾಳಿ ನಡೆಸುತ್ತಿರುವಾಗ ಕ್ರೂರವಾಗಿ ಹಲ್ಲೆಗೆ ಒಳಗಾಗಿದ್ದಾರೆ. ರಾಷ್ಟ್ರವಿರೋಧಿ ದಾಳಿಕೋರರಲ್ಲಿ ರೋಹಿಂಗ್ಯಾಗಳು ಇದ್ದಾರೆ ಎಂದು ನನಗೆ ಅನುಮಾನವಿದೆ. ನಾನು ಗೌರವಾನ್ವಿತ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಜಿ, ಪಶ್ಚಿಮ ಬಂಗಾಳದ ಗವರ್ನರ್, ನಿರ್ದೇಶಕ ಇಡಿ, ನಿರ್ದೇಶಕ ಸಿಆರ್‌ಪಿಎಫ್ ಇಂಡಿಯಾ ಈ ಗಂಭೀರ ಪರಿಸ್ಥಿತಿಯನ್ನು ಅರಿತು ಸೂಕ್ತ ಕ್ರಮಕೈಗೊಳ್ಳಬೇಕು ಈ ಅರಾಜಕತೆಯನ್ನು ಹತ್ತಿಕ್ಕಲು ಕ್ರಮ. NIA ಭಾರತ ಕೂಡ ಈ ವಿಷಯವನ್ನು ತನಿಖೆ ಮಾಡಬೇಕೆಂದು ಕೋರುತ್ತೇನೆ.", ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಹುಕೋಟಿ ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ರಾಜ್ಯ ಸಚಿವ ಜ್ಯೋತಿಪ್ರಿಯೋ ಮಲ್ಲಿಕ್ ಅವರ ಆಪ್ತ ಸಹಾಯಕ ಸಜಹಾನ್ ಎಂದು ಪರಿಗಣಿಸಲಾಗಿದೆ.