ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆ ಪ್ರಾರಂಭ | JANATA NEWS
ಮಣಿಪುರ : ಭಾರತ್ ಜೋಡೋ ನ್ಯಾಯ ಯಾತ್ರೆ ಆರಂಭಿಸಲು ಮಣಿಪುರದ ಇಂಫಾಲಕ್ಕೆ ಆಗಮಿಸಿದ ರಾಹುಲ್ ಗಾಂಧಿ ಅವರನ್ನು ಸಿಎಂ ಸಿದ್ದರಾಮಯ್ಯ ಅವರು ಆತ್ಮೀಯವಾಗಿ ಸ್ವಾಗತಿಸಿ, ನ್ಯಾಯ ಯಾತ್ರೆ ಅಭೂತಪೂರ್ವ ಯಶಸ್ಸು ಕಾಣಲಿ ಎಂದು ಶುಭ ಕೋರಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯು ಜನವರಿ 14 ರ ಭಾನುವಾರದಂದು ಮಣಿಪುರದ ತೌಬಲ್ ಜಿಲ್ಲೆಯಿಂದ ಪ್ರಾರಂಭವಾಗಲಿದೆ.
ರಾಹುಲ್ ಗಾಂಧಿ ಸೇರಿದಂತೆ ಹಲವು ಹಿರಿಯ ಕಾಂಗ್ರೆಸ್ ನಾಯಕರು ಭಾನುವಾರ ಬೆಳಗ್ಗೆ ದೆಹಲಿಯಿಂದ ಮಣಿಪುರಕ್ಕೆ ವಿಮಾನ ಹತ್ತಿದರು, ‘ನ್ಯಾಯ್ ಕಾ ಹಕ್, ಮಿಲ್ನೆ ತಕ್!’ ಎಂಬ ಘೋಷಣೆಗಳನ್ನು ಕೂಗಿದರು.
ಅಶೋಕ್ ಗೆಲ್ಹೋಟ್, ರಾಜೀವ್ ಶುಕ್ಲಾ, ಸಲ್ಮಾನ್ ಖುರ್ಷಿದ್, ದಿಗ್ವಿಜಯ ಸಿಂಗ್, ಅಭಿಷೇಕ್ ಮನು ಸಿಂಘ್ವಿ, ಕಾರ್ತಿ ಚಿದಂಬರಂ ಸೇರಿದಂತೆ ಪ್ರಮುಖ ನಾಯಕರು ಅದೇ ವಿಮಾನದಲ್ಲಿ ದೆಹಲಿಯಿಂದ ಹೊರಟರು.