ರಾಮಮಂದಿರದ ಮುಂದಿನ ಹನುಮ ಧ್ವಜ ತೆಗೆಯಲು ಕಾಂಗ್ರೆಸ್ ಸರ್ಕಾರ ಯಾವ ಹಕ್ಕಿದೆ? - ಆರ್.ಅಶೋಕ | JANATA NEWS

ಮಂಡ್ಯ : ಹನುಮ ಧ್ವಜವನ್ನು ಏಕಾಏಕಿ ಬಲತ್ಕಾರದಿಂದ ತೆಗೆದಿದ್ದಾರೆ. ಅಲ್ಲಿ ಮತ್ತೆ ಹನುಮ ಧ್ವಜವನ್ನು ಮರುಸ್ಥಾಪಿಸಬೇಕು. ರಾಮಮಂದಿರದ ಮುಂದಿನ ಹನುಮ ಧ್ವಜ ತೆಗೆಯಲು ಕಾಂಗ್ರೆಸ್ ಸರ್ಕಾರ ಯಾವ ಹಕ್ಕಿದೆ, ಅವರು ಯಾರು? ಗ್ರಾಮಸ್ಥರ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡಲಿದೆ, ಎಂದು ಪತಿಪಕ್ಷ ನಾಯಕ ಆರ್.ಅಶೋಕ ಅವರು ಹೇಳಿದ್ದಾರೆ.
"ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ನಿರ್ಣಯದಂತೆ 108 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಹಾರಿಸಲಾಗಿದ್ದ ಹನುಮ ಧ್ವಜವನ್ನು ಇಳಿಸುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ."
"ಸಿಎಂ ಸಿದ್ದರಾಮಯ್ಯನವರೇ, ನಿಮ್ಮ 'ಸರ್ವ ಜನಾಂಗದ ಶಾಂತಿಯ ತೋಟ'ದಲ್ಲಿ ಹಿಂದೂಗಳಿಗೆ ಒಂದು ಹನುಮನ ಧ್ವಜ ಹಾರಿಸುವ ಸ್ವಾತಂತ್ರ್ಯವೂ ಇಲ್ಲವೇ? ನಿಮ್ಮ ಜಾತ್ಯಾತೀತವಾದದಲ್ಲಿ ಹಿಂದೂಗಳು ಎರಡನೇ ದರ್ಜೆ ನಾಗರಿಕರೇ?"
"ಹಿಂದೂಗಳು ಶಾಂತಿ ಪ್ರಿಯರು, ಸಹಿಷ್ಣುಗಳು, ಸಹನಶೀಲರು, ನಿಜ. ಆದರೆ ಪದೇ ಪದೇ ನಿಮ್ಮ ಹಿಂದೂ ವಿರೋಧಿ ಧೋರಣೆಯನ್ನ ನೋಡಿಕೊಂಡು ಕೂರುವಷ್ಟು ಹೇಡಿಗಳಲ್ಲ. ನಿಮ್ಮ ಪಾಪದ ಕೊಡ ತುಂಬುತ್ತಿದೆ. ಹನುಮನ ತಂಟೆಗೆ ಬಂದರೆ ಲಂಕೆಗಾದ ಗತಿಯೇ ತಮ್ಮ ಸರ್ಕಾರಕ್ಕೂ ಆಗಲಿದೆ", ಎಂದು ವಿರೋಧಪಕ್ಷದ ನಾಯಕ ಆರ್.ಅಶೋಕ ಅವರು ಎಚ್ಚರಿಕೆ ನೀಡಿದ್ದಾರೆ.