ದೇಶ ವಿಭಜನೆಯ ಕೂಗು : ಪ್ರತಿಭಟನೆ ನಡೆಸುತ್ತಿದ್ದ ಯುವ ಮೋರ್ಚಾ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ | JANATA NEWS
ಬೆಂಗಳೂರು : ದೇಶ ವಿಭಜನೆಯ ಕೂಗು ಎಬ್ಬಿಸಿದ್ದ ಸಂಸದ ಕಾಂಗ್ರೆಸ್ ನ ಡಿಕೆ.ಸುರೇಶ ಅವರ ಹೇಳಿಕೆ ಖಂಡಿಸಿ ಅವರ ನಿವಾಸದ ಮುಂದೆ ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕರ್ನಾಟಕ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ಮಾಡುವ ಮೂಲಕ ಕರ್ನಾಟಕ ಕಾಂಗ್ರೆಸ್ ಸರ್ಕಾರ ತನ್ನ ರಾಜ್ಯದಲ್ಲಿರುವ ಗೂಂಡಾ ರಾಜ್ಯ ಎಂದು ಮತ್ತೊಮ್ಮೆ ಸಾಬೀತು ಪಡಿಸಿದೆ" ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ನಾವು ಗಾಂಧಿ ರಾಮನ ಭಕ್ತರು ಎಂದು ಹೇಳುತ್ತೀರಲ್ಲ ಸಿಎಂ ಸಿದ್ದರಾಮಯ್ಯ ಅವರೇ, ಇದೇನಾ ನಿಮ್ಮ ಗಾಂಧಿ ರಾಮನ ತತ್ವ. ಇದೇನಾ ನಿಮ್ಮ ಸರ್ವ ಜನಾಂಗದ ಶಾಂತಿಯ ತೋಟ? ಎಂದು ಪ್ರಶ್ನಿಸಿದ್ದಾರೆ.
ಗೃಹ ಸಚಿವ ಡಾ.ಪರಮೇಶ್ವರ ಅವರು ಈ ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಕಾನೂನಿನ ವಶಕ್ಕೆ ಒಪ್ಪಿಸಬೇಕು. ನಿಷ್ಪಕ್ಷಪಾತ ತನಿಖೆಗೆ ಆದೇಶ ನೀಡಬೇಕು, ಎಂದು ಒತ್ತಾಯಿಸಿದ್ದಾರೆ.