ರಾಜ್ಯ ಸರ್ಕಾರ ಮಿಷನರಿಗಳಿಗೆ ಕುಮ್ಮಕ್ಕು ಕೊಟ್ಟು ಹಿಂದೂಗಳನ್ನು ಮತಾಂತರಿಸಲು ಪ್ರೋತ್ಸಾಹಿಸುತ್ತಿದೆ - ಬಿಜೆಪಿ | JANATA NEWS

ಮಂಗಳೂರು : ರಾಜ್ಯದ ಕಾಂಗ್ರೆಸ್ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಗೊಳಿಸಿ ನೇರವಾಗಿ ಮಿಷನರಿಗಳಿಗೆ ಕುಮ್ಮಕ್ಕು ಕೊಟ್ಟು ಹಿಂದೂಗಳನ್ನು ಮತಾಂತರಿಸಲು ಪ್ರೋತ್ಸಾಹ ಕೊಟ್ಟಿದೆ, ಎಂದು ರಾಜ್ಯ ಬಿಜೆಪಿ ಗಂಭೀರ ಆರೋಪ ಮಾಡಿದೆ.
ಎಫ್ಐಆರ್ ಪ್ರತಿಯೊಂದಿಗೆ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿರುವ ಬಿಜೆಪಿ, "ಶಾಲಾ ಶಿಕ್ಷಕಿ ವಿದ್ಯಾರ್ಥಿಗಳನ್ನು ಮತಾಂತರ ಮಾಡುತ್ತಿರುವುದನ್ನು ವಿರೋಧಿಸಿ ಜನಪ್ರತಿನಿಧಿಗಳು ಪ್ರತಿಭಟನೆ ಮಾಡಿದರೆ ಅವರ ಮೇಲೆಯೇ ಎಫ್‌ಐಆರ್ ದಾಖಲಿಸುವ ಭಂಡತನಕ್ಕೆ ಇಳಿದಿದೆ ಮತಾಂಧ ಕರ್ನಾಟಕ ಕಾಂಗ್ರೆಸ್ ಪಕ್ಷ."
"ಮಂಗಳೂರಿನ ಜೆರೊಸಾ ಶಾಲೆಯಲ್ಲಿ ಶ್ರೀ ರಾಮ ಮತ್ತು ಹಿಂದೂ ಧರ್ಮದ ಅವಹೇಳನ ಮಾಡಿ, ಮತಾಂತರಕ್ಕೆ ಪ್ರಚೋದನೆ ನೀಡಿದ ಘಟನೆಯ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಬಿಜೆಪಿ ಶಾಸಕರಾದ ಶ್ರೀ ಭರತ ಶೆಟ್ಟಿ ವೈ ಹಾಗೂ ಶ್ರೀ ವೇದವ್ಯಾಸ ಕಾಮತ್ ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸುವ ಮೂಲಕ ಕಾಂಗ್ರೆಸ್ ತನ್ನ ಹಿಂದೂ ವಿರೋಧಿ ನೀತಿಯನ್ನು ತೋರಿದೆ."
"ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಗೊಳಿಸಿರುವ ಸರ್ಕಾರ ಇಂದು ನೇರವಾಗಿ ಮಿಷನರಿಗಳಿಗೆ ಕುಮ್ಮಕ್ಕು ಕೊಟ್ಟು ಹಿಂದೂಗಳನ್ನು ಮತಾಂತರಿಸಲು ಪ್ರೋತ್ಸಾಹ ಕೊಟ್ಟಿದೆ."
"ಕೂಡಲೇ ಸರ್ಕಾರ ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಿ ಶಾಲೆಯ ವಿರುದ್ಧ ಕ್ರಮಕೈಗೊಳ್ಳದೆ ಹೋದರೆ, ಬಿಜೆಪಿ ರಾಜ್ಯಾದ್ಯಂತ ಹೋರಾಟ ನಡೆಸಲಿದೆ".
"ಮಾನ್ಯ ಸಿದ್ದರಾಮಯ್ಯ ಅವರೇ, ಕರ್ನಾಟಕದಲ್ಲಿ ಇರುವುದು ಜನರಿಂದ ಚುನಾಯಿತವಾದ ಸರ್ಕಾರವೋ ಅಥವಾ ಮಿಷನರಿಗಳ ಗುಲಾಮಿ ಸರ್ಕಾರವೋ?", ಎಂದು ಕರ್ನಾಟಕ ಬಿಜೆಪಿ ಪ್ರಶ್ನೆ ಮಾಡಿದೆ.