ಮೋಸ್ಟ್ ವಾಂಟೆಡ್ ಪಿಎಫ್‌ಐ ಭಯೋತ್ಪಾದಕ ಮೊಹಮ್ಮದ್ ಘೌಸ್ ನಯಾಜಿಯನ್ನು ಸೌತ್ ಆಫ್ರಿಕಾದಲ್ಲಿ ಬಂಧಿಸಿದ ಎನ್‌ಐಎ | JANATA NEWS
ನವದೆಹಲಿ : ಮೋಸ್ಟ್ ವಾಂಟೆಡ್ ಪಿಎಫ್‌ಐ ಭಯೋತ್ಪಾದಕ ಮೊಹಮ್ಮದ್ ಘೌಸ್ ನಯಾಜಿಯನ್ನು ದಕ್ಷಿಣ ಆಫ್ರಿಕಾದಿಂದ ಹಿಡಿದು ಭಾರತಕ್ಕೆ ಗಡೀಪಾರು ಮಾಡಲಾಯಿತು. 2016ರಲ್ಲಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖಂಡ ರುದ್ರೇಶ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪ ಹೊತ್ತಿದ್ದ ಪಿಎಫ್‌ಐ ಭಯೋತ್ಪಾದಕ ಮೊಹಮ್ಮದ್ ಗೌಸ್ ನಿಯಾಜಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶನಿವಾರ ಬಂಧಿಸಿದೆ.
ಮಾಹಿತಿ ನೀಡಿದವರಿಗೆ 5 ಲಕ್ಷ ಬಹುಮಾನವನ್ನು ಹೊಂದಿದ್ದ ಉಗ್ರನನ್ನು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಗಡಿಪಾರು ಮಾಡಲಾಗಿದೆ.
ಗುಜರಾತ್ ಪೊಲೀಸ್ ಆಂಟಿ-ಟೆರರಿಸ್ಟ್ ಸ್ಕ್ವಾಡ್ (ಎಟಿಎಸ್) ಮೊಹಮ್ಮದ್ ಗೌಸ್ ನಿಯಾಜಿಯನ್ನು ಮೊದಲು ದಕ್ಷಿಣ ಆಫ್ರಿಕಾದಲ್ಲಿ ಪತ್ತೆ ಹಚ್ಚಿತು. ಇದಾದ ನಂತರ ಅವರು ಈ ಮಾಹಿತಿಯನ್ನು ಕೇಂದ್ರ ಏಜೆನ್ಸಿ ಎನ್‌ಐಎಗೆ ನೀಡಿದ್ದಾರೆ.
ಎನ್‌ಐಎ ದಕ್ಷಿಣ ಆಫ್ರಿಕಾವನ್ನು ಸಂಪರ್ಕಿಸಿತು ಮತ್ತು ದಕ್ಷಿಣ ಆಫ್ರಿಕಾದ ಏಜೆನ್ಸಿ ಮೊಹಮ್ಮದ್ ಗೌಸ್ ನಿಯಾಜಿಯನ್ನು ಬಂಧಿಸಿತು. ಇದೀಗ ಅವರನ್ನು ಭಾರತಕ್ಕೆ ಹಸ್ತಾಂತರಿಸಲಾಗಿದ್ದು, ಪ್ರಸ್ತುತ ಮುಂಬೈಗೆ ಕರೆದೊಯ್ಯಲಾಗಿದೆ.
ನಿಯಾಜಿ ನಿಷೇಧಿತ ಉಗ್ರಗಾಮಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಜೊತೆ ಸಂಬಂಧ ಹೊಂದಿದ್ದ. 2016ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ 35 ವರ್ಷದ ಆರ್‌ಎಸ್‌ಎಸ್ ಮುಖಂಡ ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಈತ ಭಾಗಿಯಾಗಿದ್ದ ಎನ್ನಲಾಗಿದೆ.
ಕೊಲೆ ಮಾಡಿದ ಬಳಿಕ ಅಲ್ಲಿಂದ ತಪ್ಪಿಸಿಕೊಂಡು ಭಾರತ ಬಿಟ್ಟು ಬೇರೆ ಬೇರೆ ದೇಶಗಳಲ್ಲಿ ನೆಲೆಸಿದ್ದ. ಪ್ರಕರಣವನ್ನು ಎನ್‌ಐಎ ತನಿಖೆ ನಡೆಸುತ್ತಿದೆ.