ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಪ್ರಕರಣದ ತನಿಖೆ ಆಮೆಗತಿ: ಆರೋಪಿ ರಾಹುಲ್ ಗಾಂಧಿ ಅಪ್ತ - ಆರ್ ಅಶೋಕ | JANATA NEWS
ಬೆಂಗಳೂರು : ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಗಂಭೀರ ಪ್ರಕರಣದ ತನಿಖೆ ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ, ಆರೋಪಿ ಮೊಹಮ್ಮದ್ ಇಲ್ತಾಝ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅಪ್ತನಾಗಿರುವುದೇ ಕಾರಣ ಎನ್ನುವ ರೀತಿಯಲ್ಲಿ ಪ್ರತಿಪಕ್ಷದ ನಾಯಕ ಆರ್. ಅಶೋಕ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಪಾಕ್ ಪರ ಘೋಷಣೆ ಆರೋಪಿ ಎನ್ನಲಾದ ವ್ಯಕ್ತಿಯೊಂದಿಗೆ ರಾಹುಲ್ ಗಾಂಧಿ ಅತ್ಯಂತ ಆತ್ಮೀಯವಾಗಿ ಇರುವ ಕ್ಷಣಗಳ ಫೋಟೊಗಳನ್ನು ಹಂಚಿಕೊಂಡಿರುವ ಆರ್. ಅಶೋಕ ಅವರು ಈ ಕುರಿತು ಸಂಶಯ ವ್ಯಕ್ತಪಡಿಸಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
"ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಶಂಕಿತ ಮೊಹಮ್ಮದ್ ಇಲ್ತಾಝ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅಪ್ತನಾಗಿದ್ದು, ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ ನಡೆದಾಗ ಕೂಡ ರಾಹುಲ್ ಗಾಂಧಿ ಅವರ ಜೊತೆ ಪಾಲ್ಗೊಂಡಿದ್ದ."
"ಈ ಗಂಭೀರ ಪ್ರಕರಣದ ತನಿಖೆ ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ ಈ ದೋಸ್ತಿಯೇ ಕಾರಣಾನಾ? ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ.ಶಿವಕುಮಾರ ಅವರು ಕರ್ನಾಟಕದ ಜನತೆಗೆ ಉತ್ತರಿಸಬೇಕು.", ಎಂದು ಬರೆದಿದ್ದಾರೆ.
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಶಂಕಿತ ಮೊಹಮ್ಮದ್ ಇಲ್ತಾಝ್ ಕಾಂಗ್ರೆಸ್ ನಾಯಕ @RahulGandhi ಅವರ ಅಪ್ತನಾಗಿದ್ದು, ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ ನಡೆದಾಗ ಕೂಡ ರಾಹುಲ್ ಗಾಂಧಿ ಅವರ ಜೊತೆ ಪಾಲ್ಗೊಂಡಿದ್ದ.
— R. Ashoka (ಮೋದಿ ಅವರ ಕುಟುಂಬ) (@RAshokaBJP) March 5, 2024
ಈ ಗಂಭೀರ ಪ್ರಕರಣದ ತನಿಖೆ ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ ಈ ದೋಸ್ತಿಯೇ ಕಾರಣಾನಾ? ಸಿಎಂ… pic.twitter.com/qyjnInWFZd