ನಮಾಜ್ ಟೈಂನಲ್ಲಿ ಹನುಮಾನ್ ಚಾಲೀಸ್ ಹಾಕಿದ್ದಕ್ಕೆ ಮೊಬೈಲ್ ಅಂಗಡಿಯ ಯುವಕನ ಮೇಲೆ ಹಲ್ಲೆ ನಡೆಸಿದ ಮುಸ್ಲಿಂ ತೀವ್ರಗಾಮಿಗಳು | JANATA NEWS
ಬೆಂಗಳೂರು : ದೇವರ ಭಕ್ತಿಗೀತೆ ಹಾಡುಗಳನ್ನು ಹಾಕಿದ್ದಕ್ಕೆ ಮೊಬೈಲ್ ಅಂಗಡಿಯ ಯುವಕನ ಮೇಲೆ ಐದಾರು ಮುಸ್ಲಿಂ ಯುವಕರು ಮನಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಸಿದ್ದಣ್ಣ ಗಲ್ಲಿ ಜುಮ್ಮಾ ಮಸೀದಿ ರಸ್ತೆಯಲ್ಲಿ ನಡೆದಿದೆ.
ಹಲ್ಲೆಗೊಳಗಾಗಿರುವ ಯುವಕ ಮುಖೇಶ್ ಈ ಕುರಿತು ದೂರು ದಾಖಲಿಸಲು ಮುಂದಾದರೂ ಪೊಲೀಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.
ಮೊಬೈಲ್ ಶಾಪ್ ನಡೆಸುತ್ತಿದ್ದ ಮುಖೇಶ್. ಸಂಜೆ ಸಮಯ ಮೊಬೈಲ್ ಶಾಪ್‌ನಲ್ಲಿ ಭಕ್ತಿಗೀತೆ ಹಾಡುಗಳನ್ನು ಹಾಕಿದ್ದ ಎನ್ನಲಾಗಿದೆ.
ಈ ವೇಳೆ ಅಂಗಡಿಗೆ ಬಂದಿದ್ದ ಐದಾರು ಮುಸ್ಲಿಂ ಯುವಕರು, ಸಂಜೆ ನಮಾಜ್ ಟೈಂನಲ್ಲಿ ಹನುಮಾನ್ ಚಾಲೀಸ್ ಹಾಕಬಾರದು ಎಂದು ತಾಕೀತು ಮಾಡಿ ಹಲ್ಲೆಗೆ ಮುಂದಾಗಿದ್ದಾರೆ. ಅಲ್ಲದೇ, ಮೊಬೈಲ್ ಸ್ಪೇರ್ ಪಾರ್ಟ್ಸ್ ಅಂಗಡಿಯಿಂದ ಮುಖೇಶ್ ನನ್ನು ಹೊರ ಎಳೆದು ಮನಸ್ಸೊ ಇಲ್ಲೆ ಹಲ್ಲೆ ನಡೆಸಿರುವ ಹಲ್ಲೆಕೊರರು, ಆತನನ್ನು ನೆಲಕ್ಕೆ ಕೆಡವಿ ಕಾಲಿನಿಂದ ಒದ್ದು ಹಲ್ಲೆ ಮಾಡಿ ಹೋಗಿದ್ದಾರೆ.
ಹಲ್ಲೆಗೊಳಗಾದ ಯುವಕ ಮುಖೇಶ್ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದಾರೆ. ಈ ವೇಳೆ ಪೊಲೀಸರು ಆರೋಪಿಗಳ ವಿರುದ್ಧ ಎಫ್‌ಐಆರ್ ಮಾಡಲು ಹಿಂದೇಟು ಹಾಕುತ್ತಿದ್ದಾರೆಂದು ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಠಾಣೆ ಮುಂದೆ ಜಮಾಯಿಸಿದ ಜನರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಎಫ್ಐಆರ್ ಮಾಡುವ ವರೆಗೂ ಇಲ್ಲಿಂದ ತೆರಳುವುದಿಲ್ಲ ಎಂದು ಎಚ್ಚರಿಕೆ ನೀಡಿದ ಬಳಿಕ ಪೊಲೀಸರು ಎಫ್‌ಐಅರ್ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ವಿರೋಧ ಪಕ್ಷವಾದ ರಾಜ್ಯ ಬಿಜೆಪಿಯು ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ, "ಕರ್ನಾಟಕವು ಕಾಂಗ್ರೆಸ್‌ನ ಅಬ್ಬರದ ತುಷ್ಟೀಕರಣದ ರಾಜಕೀಯದ ಭಾರವನ್ನು ಹೊರುತ್ತಿದೆ. ತೀವ್ರಗಾಮಿ ಉಗ್ರಗಾಮಿಗಳು ಬೀದಿಗಿಳಿದಿದ್ದಾರೆ, ಬಹಿರಂಗವಾಗಿ ಹಿಂದೂಗಳನ್ನು ಭಯಭೀತಗೊಳಿಸಿದ್ದಾರೆ. ರಾಹುಲ್ ಗಾಂಧಿ "ಶಕ್ತಿ" ವಿರುದ್ಧ ಯುದ್ಧ ಘೋಷಿಸುತ್ತಿದ್ದಂತೆ, ಕಾಂಗ್ರೆಸ್ ನ ಬ್ರದರ್ಸ್ 'ಹನುಮಾನ್ ಚಾಲೀಸಾ' ಪಠಣಕ್ಕಾಗಿ ಹಿಂದೂಗಳ ಮೇಲೆ ಭಯೋತ್ಪಾದನೆ ನಡೆಸಿದೆ. ಕಾಂಗ್ರೆಸ್ ಆಡಳಿತದಲ್ಲಿ ಹಿಂದೂಗಳು ಎರಡನೇ ದರ್ಜೆಯ ಪ್ರಜೆಗಳಿಗೆ ಇಳಿದಿದ್ದಾರೆ, ಅವರ ಜೀವನಕ್ಕೆ ಯಾವುದೇ ಭದ್ರತೆ ಅಥವಾ ಸುರಕ್ಷತೆ ಇಲ್ಲ. .", X ನಲ್ಲಿ ಪೋಸ್ಟ್ ಮಾಡಲಾಗುತ್ತಿದೆ.