ಮೆಟ್ರೋ ಹಳಿ ಮೇಲೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ : ನೇರಳೆ ಮಾರ್ಗದ ಸೇವೆ ಕೆಲಕಾಲ ಸ್ಥಗಿತ | JANATA NEWS
ಬೆಂಗಳೂರು : ವಿದ್ಯಾರ್ಥಿ ಮೆಟ್ರೋ ಹಳಿ ಮೇಲೆ ಹಾರಿದ್ದರಿಂದ ಚಲ್ಲಘಟ್ಟ-ಮೆಜೆಸ್ಟಿಕ್ ನಡುವಿನ ನಮ್ಮ ಮೆಟ್ರೋ ಪರ್ಪಲ್ ಲೈನ್ ಸೇವೆಗೆ ಕೆಲಕಾಲ ತೊಂದರೆಯಾಯಿತು. ಪ್ರಯಾಣಿಕರು ಇತರ ಸಾರಿಗೆ ವ್ಯವಸ್ಥೆಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದರು.
ಇಂದು ಮಧ್ಯಾಹ್ನ ಅತ್ತಿಗುಪ್ಪೆ ನಿಲ್ದಾಣದಲ್ಲಿ ಬರುತ್ತಿದ್ದ ರೈಲಿನ ಮುಂದೆ ಮೆಟ್ರೋ ಹಳಿ ಮೇಲೆ ಹಾರಿ 19 ವರ್ಷದ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಮೃತರನ್ನು ಪ್ರಥಮ ವರ್ಷದ ಕಾನೂನು ವಿದ್ಯಾರ್ಥಿ ದೆಹಲಿ ಮೂಲದ ಧುರ್ವಾ ಎಂದು ಗುರುತಿಸಲಾಗಿದೆ.
ನೇರಳೆ ಮಾರ್ಗದ ಸೇವೆಗಳು ಆ ಸಮಯದಲ್ಲಿ ವೈಟ್‌ಫೀಲ್ಡ್ ಮತ್ತು ಮಾಗಡಿ ರಸ್ತೆ ನಡುವೆ ಮಾತ್ರ ಲಭ್ಯವಿದ್ದವು ಮತ್ತು ನಂತರ ಪುನರಾರಂಭಿಸಲಾಯಿತು.
ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಯುವಕನನ್ನು ವಿಕ್ಟೋರಿಯಲ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬದುಕುಳಿಯಲಿಲ್ಲ. ಧ್ರುವ ಅವರು ಹಳಿ ಮೇಲೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಮೆಟ್ರೋ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಎರಡು ತಿಂಗಳ ಹಿಂದೆ ಜನವರಿ 5 ರಂದು ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಕೇರಳ ಮೂಲದ ಯುವಕನೊಬ್ಬ ರೈಲು ಬರುತ್ತಿದ್ದಂತೆ ಹಳಿ ಮೇಲೆ ಹಾರಿದ್ದ.