ಭಯೋತ್ಪಾದಕನ ಬಿಡುಗಡೆಗೆ, ಖಲಿಸ್ತಾನಿ ಗುಂಪುಗಳಿಂದ $16 ಮಿಲಿಯನ್ ಹಣ ಪಡೆದ ದೆಹಲಿ ಸಿಎಂ ಕೇಜ್ರಿವಾಲ್ | JANATA NEWS
ನ್ಯೂಯಾರ್ಕ್ : ಖಲಿಸ್ತಾನಿ ಗುಂಪುಗಳು ಆಮ್ ಆದ್ಮಿ ಪಕ್ಷಕ್ಕೆ 2014-2022ರ ನಡುವೆ $16 ಮಿಲಿಯನ್ ಹಣವನ್ನು ನೀಡಿವೆ, ಎಂದು ಯುಎಸ್ ಮೂಲದ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಹೇಳಿಕೊಂಡಿದ್ದಾರೆ. ಹಣದ ಬದಲಾಗಿ ಭಯೋತ್ಪಾದಕ ಭುಲ್ಲರ್‌ನನ್ನು ಬಿಡುಗಡೆ ಮಾಡಲು ಕೇಜ್ರಿವಾಲ್ ಮುಂದಾದರು ಎಂದು ಪನ್ನುನ್ ಹೇಳಿಕೊಂಡಿದ್ದಾರೆ. ಭುಲ್ಲರ್ 1993ರ ದೆಹಲಿ ಬಾಂಬ್ ಸ್ಫೋಟದ ಅಪರಾಧಿಯಾಗಿದ್ದಾನೆ.
ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿರುವ ವೀಡಿಯೊದಲ್ಲಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು $16 ಮಿಲಿಯನ್ ಬದಲಾಗಿ ದೇವಿಂದರ್ ಪಾಲ್ ಸಿಂಗ್ ಭುಲ್ಲರ್ ನನ್ನು ಬಿಡುಗಡೆ ಮಾಡಲು ಪ್ರಸ್ತಾಪಿಸಿದ್ದಾರೆ, ಎಂದು ಭಯೋತ್ಪಾದಕ ಪನ್ನುನ್ ಹೇಳಿದ್ದಾರೆ. ಭುಲ್ಲರ್ 1993 ರ ದೆಹಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅಪರಾಧಿಯಾಗಿದ್ದು, ಈ ಸ್ಪೋಟದ ಪರಿಣಾಮವಾಗಿ ಒಂಬತ್ತು ಸಾವುಗಳು ಮತ್ತು 31 ಮಂದಿ ಗಾಯಗೊಂಡಿದ್ದರು.
ಖಲಿಸ್ತಾನಿ ಭಯೋತ್ಪಾದಕ ಗುರ್ಪತ್‌ವಂತ್ ಸಿಂಗ್ ಪನ್ನುನ್ ಪ್ರಕಾರ 2014 ರಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನ್ಯೂಯಾರ್ಕ್ ನ ರಿಚ್‌ಮಂಡ್ ಹಿಲ್ಸ್ ಗುರುದ್ವಾರ ದಲ್ಲಿ ಖಲಿಸ್ತಾನ್ ಪರ ಸಿಖ್ಖರೊಂದಿಗೆ ಸಭೆ ನಡೆಸಿದ್ದಾರೆ. ಅಲ್ಲಿ ಕೇಜ್ರಿವಾಲ್ ಅವರು ಭಯೋತ್ಪಾದಕ ಭುಲ್ಲರ್‌ನನ್ನು ಆರ್ಥಿಕ ಸಹಾಯಕ್ಕಾಗಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ, ಎಂದು ಹೇಳಿಕೊಳ್ಳುವ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ.
ಆಮ್ ಆದ್ಮಿ ಪಕ್ಷದ ಮುಖ್ಯ ಸಂಚಾಲಕ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ದೆಹಲಿ ಅಬಕಾರಿ ನೀತಿ "ಹಗರಣ"ದಲ್ಲಿ ಬಂಧಿಸಿದ್ದು, ಇನ್ನೂ ಇಡಿ ವಶದಲ್ಲೇ ಇಟ್ಟುಕೊಂಡಿದೆ. ಬಂಧನದಿಂದ ರಕ್ಷಣೆ ಕೋರಿ ಅವರ ಮನವಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದ್ದು, ಮಾರ್ಚ್ 28ರವರೆಗೆ ಕೇಜ್ರಿವಾಲ್ ರನ್ನು ಇಡಿ ಕಸ್ಟಡಿಗೆ ನೀಡಿದೆ.
ಆದರೆ, ಬಂಧನದಲ್ಲಿರುವಾಗಲೂ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಯಲು ಎಎಪಿ ನಿರ್ಧರಿಸಿದೆ. ಮುಂಬರುವ ಲೋಕಸಭೆ ಚುನಾವಣೆಗೆ ಅದರ ಸಂಚಾಲಕರಿಗೆ ಪ್ರಚಾರ ಮಾಡಲು ಸಾಧ್ಯವಾಗದ ಕಾರಣ ಪಕ್ಷವು "ಮೈ ಭಿ ಕೇಜ್ರಿವಾಲ್" ಅಭಿಯಾನವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.
Terror support Alert 🚨
— 𝐒𝐮𝐝𝐡𝐢𝐫 भारतीय 🇮🇳 (@seriousfunnyguy) March 25, 2024
AAP supporterd Farmers protests & played a key role in Red Fort Khalistan Flag rioting
Khalistani Terrorist Pannun claims Khalistani group gave AAP $16 million when Kejriwal offered to release terrorist Bhullar in exchange for money. He says Arvind… pic.twitter.com/Q5DmKRx4cb