ಹಲಾಲ್ ಕಟ್ ಕರ್ನಾಟಕ ಕಾಂಗ್ರೆಸ್ ಸರ್ಕಾರ ಹಿಂದೂಗಳು, ಹಿಂದೂಗಳ ಸಂಸ್ಥೆಗಳು ಬೆಳೆದರೆ ಸಹಿಸೋದೇ ಇಲ್ಲ | JANATA NEWS
ಬೆಂಗಳೂರು : ಹಲಾಲ್ ಕಟ್ ಕರ್ನಾಟಕ ಕಾಂಗ್ರೆಸ್ ಸರ್ಕಾರ ಹಿಂದೂಗಳು, ಹಿಂದೂಗಳ ಸಂಸ್ಥೆಗಳು, ಬಿಸಿನೆಸ್ ಗಳು ಬೆಳೆದರೆ ಸಹಿಸೋದೇ ಇಲ್ಲ., ಎಂದು ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ಮುಖಂಡ
ಆರ್ ಅಶೋಕ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್ ಅಶೋಕ್ ಅವರು, "ಕರ್ನಾಟಕದಲ್ಲಿ ಎಲ್ಲಾ ಪತಂಜಲಿ ಉತ್ಪನ್ನದ ಗುಣಮಟ್ಟದ ಪರೀಕ್ಷೆ ಮಾಡುವ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಆದೇಶದ ಕುರಿತಾದ ವರದಿಯೊಂದನ್ನು ಉಲ್ಲೇಖಿಸಿ ಹೇಳಿಕೆ ನೀಡಿದ್ದಾರೆ.
"ಹಲಾಲ್ ಕಟ್ ಕರ್ನಾಟಕ ಕಾಂಗ್ರೆಸ್ ಸರ್ಕಾರ ಹಿಂದೂಗಳು, ಹಿಂದೂಗಳ ಸಂಸ್ಥೆಗಳು, ಬಿಸಿನೆಸ್ ಗಳು ಬೆಳೆದರೆ ಸಹಿಸೋದೇ ಇಲ್ಲ.
ಸಮಸ್ತ ಭಾರತೀಯರ ಅಚ್ಚುಮೆಚ್ಚಿನ ಬ್ರ್ಯಾಂಡ್ ಆಗಿ ಬೆಳೆಯುತ್ತಿರುವ ಬಾಬಾ ರಾಮದೇವ್ ಅವರ ಪತಂಜಲಿ ಮೇಲೆ ಈಗ ಕಾಂಗ್ರೆಸ್ ಸರ್ಕಾರದ ವಕ್ರದೃಷ್ಟಿ ಬಿದ್ದಿದೆ.
ಮಾನ್ಯ ದಿನೇಶ್ ಗುಂಡೂರಾವ್ ಅವರೇ, ಪತಂಜಲಿ ಉತ್ಪನ್ನಗಳ ಮೇಲೆ ನಿಮಗೇಕಿಷ್ಟು ದ್ವೇಷ?
ಪತಂಜಲಿ ಹಲಾಲ್ ಅಲ್ಲ ಅಂತಲೇ?
ಪತಂಜಲಿ ಕೇಸರಿ ಬಟ್ಟೆ ತೊಡುವ ಯೋಗಗುರು ಶ್ರೀ ಬಾಬಾ ರಾಮ್ ದೇವ್ ಅವರದ್ದು ಅಂತಲೇ?
ಪತಂಜಲಿ ಆತ್ಮನಿರ್ಭರ ಭಾರತದ ಪ್ರತೀಕ ಅಂತಲೇ?
ಈ ದ್ವೇಷ ರಾಜಕಾರಣವೇ ಕಾಂಗ್ರೆಸ್ ಪಕ್ಷವನ್ನ ಸುಡಲಿದೆ. ಈ ನಿಮ್ಮ ಹಲಾಲ್ ಮಮಕಾರವೇ ನಿಮ್ಮನ್ನ ನಾಶ ಮಾಡಲಿದೆ"., ಎಂದು ಆರ್ ಅಶೋಕ್ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.