Mon,Apr13,2026
ಕನ್ನಡ / English

ನನ್ನ ಮಗಳ ಹತ್ಯೆ ವಿಷಯದಲ್ಲಿ ಸರ್ಕಾರ ದಾರಿ ತಪ್ಪಿಸುತ್ತಿದೆ: ನೇಹಾ ತಂದೆ ನಿರಂಜನ್ ಹಿರೇಮಠ ಆರೋಪ | JANATA NEWS

20 Apr 2024

ಹುಬ್ಬಳ್ಳಿ : ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣ ಸಂಬಂಧ ಸರ್ಕಾರ ದಾರಿ ತಪ್ಪಿಸುತ್ತಿದೆ ಎಂದು ನೇಹಾ ತಂದೆ ನಿರಂಜನ್ ಹಿರೇಮಠ ಅವರು ಗಂಭೀರ ಆರೋಪ ಮಾಡಿದ್ದಾರೆ.

ಘಟನೆ ನಡೆದ ಮೊದಲ ದಿನ ನನ್ನ ಜೊತೆಗೆ ಇದ್ದವರು, ಇಂದು ನನ್ನ ಬೆನ್ನಿಗೆ ನಿಂತಿಲ್ಲ, ಘಟನೆ ವೈಯಕ್ತಿಕ ಎಂದು ಹೇಳಿಕೆ ನೀಡಿದ್ದ ಗೃಹ ಸಚಿವ ಜಿ. ಪರಮೇಶ್ವರ ಅವರು ಇಂದು ವಿಷಾದ ವ್ಯಕ್ತಪಡಿಸಿದ್ದಾರೆ. ಆಡಳಿತ ಪಕ್ಷದಲ್ಲಿ ಇದ್ದವರೇ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಮೂಲಕ ತನಿಖೆಯ ದಾರಿ ತಪ್ಪಿಸುವ ಪ್ರಯತ್ನ ನಡೆಸಿದ್ದಾರೆ ಎಂದು ದೂರಿದರು.

ನಮ್ಮದು ಕ್ರಿಮಿನಲ್‌ ಹಿನ್ನೆಲೆಯುಳ್ಳ ಕುಟುಂಬ ಅಲ್ಲ. ಐದು ಮಂದಿ ಸೇರಿ ನನ್ನ ಮಗಳ ಹತ್ಯೆ ಮಾಡಿದ್ದಾರೆ. ಉಳಿದ ಫಯಾಜ್‌ನನ್ನ ಮುಂದಕ್ಕೆ ಬಿಟ್ಟು ಕೊಲೆ ಮಾಡಿಸಿದ್ದಾರೆ. ಆ ಸಂದರ್ಭದಲ್ಲಿ ಉಳಿದ ನಾಲ್ಕೂ ಜನರು ಅಲ್ಲೇ ಇದ್ದರು. ಆದ್ರೆ 100ಕ್ಕೆ ನೂರು ಪೊಲೀಸ್ ಆಯುಕ್ತರು ಗೃಹ ಸಚಿವರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಆಡಳಿತ ಪಕ್ಷದ ಕೆಲ ಸ್ಥಳೀಯ ಜನಪ್ರತಿನಿಧಿಗಳೂ ತಪ್ಪು ಮಾಹಿತಿ ನೀಡಿದ್ದಾರೆ. ಗೃಹಸಚಿವರನ್ನ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಈ ಬೆಳೆವಣಿಗೆ ನೋಡಿದರೆ ಪ್ರಕರಣ ದಾರಿ ತಪ್ಪುವ ಹಾಗೆ ಕಾಣುತ್ತಿದೆ. ಸಿ.ಎಂ ಅವರಿಗೆ ಪತ್ರ ಬರೆದು ನಾವೂ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಭಾವುಕರಾಗಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ನನ್ನ ಮಗಳ ಹೆಸರಿನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿ ನನ್ನ ಮಗಳ ಬಗ್ಗೆ ಸಮಾಜದಲ್ಲಿ ತಪ್ಪು ತಿಳುವಳಿಕೆ ಬರುವಂತೆ ಮಾಡಿದ್ದಾರೆ. ಆರೋಪಿ ಜೈಲಿನಲ್ಲಿದ್ದರು ಖಾತೆಯನ್ನು ಯಾರು ಸೃಷ್ಟಿ ಮಾಡಿದ್ದಾರೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು. ಈ ಕುರಿತು ವಕೀಲರೊಂದಿಗೆ ಮಾತನಾಡಿದ್ದೇನೆ.‌ ಸೈಬರ್ ಪೊಲೀಸರಿಗೆ ಈ ಬಗ್ಗೆ ದೂರು ನೀಡಲಿದ್ದೇನೆ ಎಂದು ಹೇಳಿದರು.

RELATED TOPICS:
English summary :Government is misleading in my daughter murder case: Neha father Niranjan Hiremath alleges

ಹಿರಿಯ ಗಾಯಕಿ ಆಶಾ ಬೋಸ್ಲೆ ನಿಧನ : ಪ್ರಧಾನಿ ಮೋದಿ ಸಂತಾಪ
ಹಿರಿಯ ಗಾಯಕಿ ಆಶಾ ಬೋಸ್ಲೆ ನಿಧನ : ಪ್ರಧಾನಿ ಮೋದಿ ಸಂತಾಪ
 ಬೆಂಗಳೂರು ಮತ್ತು ಮುಂಬೈ ನಡುವೆ ಹೊಸ ವಂದೇ ಭಾರತ್ ಸ್ಲೀಪರ್ ರೈಲು ಸೇವೆಗೆ ಅನುಮೋದನೆ
ಬೆಂಗಳೂರು ಮತ್ತು ಮುಂಬೈ ನಡುವೆ ಹೊಸ ವಂದೇ ಭಾರತ್ ಸ್ಲೀಪರ್ ರೈಲು ಸೇವೆಗೆ ಅನುಮೋದನೆ
ನಾಸಿಕ್ ಟಿಸಿಎಸ್ ಪ್ರಕರಣ: ಮತಾಂತರ, ಮೂಲಭೂತೀಕರಣ ಆರೋಪಗಳ ಮೇಲೆ ತನಿಖೆ ಆರಂಭ
ನಾಸಿಕ್ ಟಿಸಿಎಸ್ ಪ್ರಕರಣ: ಮತಾಂತರ, ಮೂಲಭೂತೀಕರಣ ಆರೋಪಗಳ ಮೇಲೆ ತನಿಖೆ ಆರಂಭ
ದೋಷಾರೋಪಣೆ ಪ್ರಕ್ರಿಯೆ ಆರಂಭವಾದ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯ ನ್ಯಾಯಮೂರ್ತಿ ಯಶವಂತ್ ವರ್ಮಾ ರಾಜೀನಾಮೆ
ದೋಷಾರೋಪಣೆ ಪ್ರಕ್ರಿಯೆ ಆರಂಭವಾದ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯ ನ್ಯಾಯಮೂರ್ತಿ ಯಶವಂತ್ ವರ್ಮಾ ರಾಜೀನಾಮೆ
2008ರ ಮಾಲೆಗಾಂವ್ ಸ್ಫೋಟ ಪ್ರಕರಣ: ಕರ್ನಲ್ ಪುರೋಹಿತ್‌ಗೆ ಬ್ರಿಗೇಡಿಯರ್ ಬಡ್ತಿಗೆ ಅನುಮತಿ
2008ರ ಮಾಲೆಗಾಂವ್ ಸ್ಫೋಟ ಪ್ರಕರಣ: ಕರ್ನಲ್ ಪುರೋಹಿತ್‌ಗೆ ಬ್ರಿಗೇಡಿಯರ್ ಬಡ್ತಿಗೆ ಅನುಮತಿ
ಪ್ರತಿಯೊಬ್ಬ ಸೈನಿಕ ಡ್ರೋನ್ ಹಾರಿಸಲು ಸಿದ್ದವಾಗಬೇಕು - ಪ್ರತಿ ಸೈನಿಕನಿಗೆ ಡ್ರೋನ್ ಒದಗಿಸಲು ಸೇನಾ ಮುಖ್ಯಸ್ಥರು
ಪ್ರತಿಯೊಬ್ಬ ಸೈನಿಕ ಡ್ರೋನ್ ಹಾರಿಸಲು ಸಿದ್ದವಾಗಬೇಕು - ಪ್ರತಿ ಸೈನಿಕನಿಗೆ ಡ್ರೋನ್ ಒದಗಿಸಲು ಸೇನಾ ಮುಖ್ಯಸ್ಥರು
ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳಿಗೆ ಶಿಕ್ಷೆ ವಿಧಿಸಿದ ಬೆಂಗಳೂರು ನ್ಯಾಯಾಲಯ
ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳಿಗೆ ಶಿಕ್ಷೆ ವಿಧಿಸಿದ ಬೆಂಗಳೂರು ನ್ಯಾಯಾಲಯ
ಇರಾನ್‌ನ 10 ಅಂಶಗಳ ಯೋಜನೆಯನ್ನು ಟ್ರಂಪ್ ಸ್ವೀಕಾರಾರ್ಹವಲ್ಲ ಎಂದು ತಿರಸ್ಕರಿಸಿದ್ದಾರೆ - ಶ್ವೇತಭವನ
ಇರಾನ್‌ನ 10 ಅಂಶಗಳ ಯೋಜನೆಯನ್ನು ಟ್ರಂಪ್ ಸ್ವೀಕಾರಾರ್ಹವಲ್ಲ ಎಂದು ತಿರಸ್ಕರಿಸಿದ್ದಾರೆ - ಶ್ವೇತಭವನ
ಇರಾನ್‌ಗೆ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಪೂರೈಸುವ ದೇಶದ ಮೇಲೆ ತಕ್ಷಣವೇ 50% ಸುಂಕ
ಇರಾನ್‌ಗೆ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಪೂರೈಸುವ ದೇಶದ ಮೇಲೆ ತಕ್ಷಣವೇ 50% ಸುಂಕ
ಭಾರತೀಯ ಪ್ರಜೆಗಳನ್ನು ಇರಾನ್‌ನಿಂದ ಬೇಗನೆ ನಿರ್ಗಮಿಸಲು ಬಲವಾಗಿ ಸೂಚಿಸಿದ - ರಾಯಭಾರ ಕಚೇರಿ
ಭಾರತೀಯ ಪ್ರಜೆಗಳನ್ನು ಇರಾನ್‌ನಿಂದ ಬೇಗನೆ ನಿರ್ಗಮಿಸಲು ಬಲವಾಗಿ ಸೂಚಿಸಿದ - ರಾಯಭಾರ ಕಚೇರಿ
ಆರ್‌ಎಸ್‌ಎಸ್, ಬಿಜೆಪಿ ವಿರುದ್ಧ ದ್ವೇಷ ಭಾಷಣ: ಕಾಂಗ್ರೆಸ್ ಅಧ್ಯಕ್ಷ ಖರ್ಗೆ ವಿರುದ್ಧ ಹಲವು ರಾಜ್ಯಗಳಲ್ಲಿ ಎಫ್‌ಐಆರ್ ದಾಖಲು
ಆರ್‌ಎಸ್‌ಎಸ್, ಬಿಜೆಪಿ ವಿರುದ್ಧ ದ್ವೇಷ ಭಾಷಣ: ಕಾಂಗ್ರೆಸ್ ಅಧ್ಯಕ್ಷ ಖರ್ಗೆ ವಿರುದ್ಧ ಹಲವು ರಾಜ್ಯಗಳಲ್ಲಿ ಎಫ್‌ಐಆರ್ ದಾಖಲು
ಕಾಂಗ್ರೆಸ್ ನಾಯಕ ಪವನ್ ಖೇರಾ ಬಂಧಿಸಲು ದೆಹಲಿ ನಿವಾಸಕ್ಕೆ ತಲುಪಿದ ಪೊಲೀಸರು
ಕಾಂಗ್ರೆಸ್ ನಾಯಕ ಪವನ್ ಖೇರಾ ಬಂಧಿಸಲು ದೆಹಲಿ ನಿವಾಸಕ್ಕೆ ತಲುಪಿದ ಪೊಲೀಸರು

ನ್ಯೂಸ್ MORE NEWS...