Sun,May17,2026
ಕನ್ನಡ / English

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಿಂದ ಮಸ್ಟರಿಂಗ್ ಕೇಂದ್ರಗಳ ಭೇಟಿ ಹಾಗೂ ಪರಿಶೀಲನೆ | JANATA NEWS

26 Apr 2024

ಬೆಂಗಳೂರು : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಇಂದು ವಿವಿಧ ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಗರದ 3 ಲೊಕಸಭಾ ಕ್ಷೇತ್ರ ಚುನಾವಣಾಧಿಕಾರಿ ವ್ಯಾಪ್ತಿಯಲ್ಲಿರುವ ಮಸ್ಟರಿಂಗ್ ಕೇಂದ್ರಗಳಿಗೆ ಎಲ್ಲಾ ಮತಗಟ್ಟೆ ಅಧಿಕಾರಿಗಳು ಬಂದು ಮತಗಟ್ಟೆಗಳಿಗೆ ಅಗತ್ಯವಿರುವ ಇವಿಎಂ, ಬ್ಯಾಲೆಟ್ ಯುನಿಟ್, ಕಂಟ್ರೋಲ್ ಯುನಿಟ್, ವಿವಿ ಪ್ಯಾಟ್ ಸೇರಿದಂತೆ ಎಲ್ಲಾ ಮತಗಟ್ಟೆ ಸಾಮಗ್ರಿಗಳನ್ನು ತೆಗೆದುಕೊಂಡು ಬಿ.ಎಂ.ಟಿ.ಸಿ, ಕೆ.ಎಸ್‌.ಆರ್.ಟಿ.ಸಿ, ಇತರೆ ವಾಹನಗಳ ಮೂಲಕ ಮತಗಟ್ಟೆಗಳಿಗೆ ಪೊಲೀಸ್ ಬಂದೋಬಸ್ತ್ ಮೂಲಕ ತೆರಳಲಿದ್ದಾರೆ. ಎಲ್ಲಾ ಮತಗಟ್ಟೆಗಳಲ್ಲೂ ವಸತಿ, ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ‌‌ ಎಂದು ತಿಳಿಸಿದರು.

ನಾಳೆ ಏಪ್ರಿಲ್ 26ರಂದು ಬೆಳಗ್ಗೆ 7.00 ರಿಂದ ಸಂಜೆ 6.00 ಗಂಟೆಯವರೆಗೆ ಮತದಾನ ನಡೆಯಲಿದ್ದು, ಅದಕ್ಕಿಂತ ಮುಂಚಿತವಾಗಿ ಬೆಳಗ್ಗೆ 5.30ಕ್ಕೆ ಅಣುಕು ಮತದಾನ ಪ್ರಾರಂಭವಾಗಲಿದ್ದು, 7.00 ಗಂಟೆಯೊಳಗಾಗಿ ಪೂರ್ಣಗೊಳ್ಳಲಿದೆ. ಮತಗಟ್ಟೆಗಳಲ್ಲಿ ಮತದಾರರಿಗೆ ಯಾವುದೇ ಸಮಸ್ಯೆ ಆಗದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ ಎಂದರು.

ಎಲ್ಲಾ ಮಸ್ಟರಿಂಗ್ ಕೇಂದ್ರಗಳಿಂದ ಬ್ಯಾಲೆಟ್ ಯುನಿಟ್(ಇವಿಎಂ), ಕಂಟ್ರೋಲ್ ಯುನಿಟ್(ಸಿಯು), ವಿವಿ ಪ್ಯಾಟ್ ಗಳನ್ನು ಮತಗಟ್ಟೆಗಳಿಗೆ ತಲುಪಿಸಲು ಈಗಾಗಲೇ ರೂಟ್ ಸಿದ್ದಪಡಿಸಿಕೊಳ್ಳಲಾಗಿದೆ. ಆ ಪ್ರಕಾರ ಒಂದು ಬಸ್ ನಲ್ಲಿ 5 ರಿಂದ 6 ಮಟಗಟ್ಟೆಗಳ ಅಧಿಕಾರಿಗಳು ತೆರಳಲಿದ್ದಾರೆ. ಇಂದು ಮಧ್ಯಾಹ್ನ ನಂತರ ಮತಗಟ್ಟೆಗಳಿಗೆ ತೆರಳಲಿದ್ದಾರೆ ಎಂದು ಹೇಳಿದರು.

ಅಣುಕು ಮತದಾನದ ವೇಳೆ ಇವಿಎಂ ನಲ್ಲಿ ಲೋಪದೋಷಗಳು ಕಂಡುಬಂದರೆ ಸೆಕ್ಟರ್ ಅಧಿಕಾರಿ ಮೂಲಕ ಕನಿಷ್ಠ 10 ಮತಗಟ್ಟೆಗಳಿಗೆ ನಿಯೋಜನೆ ಮಾಡಿರುವಂತಹ ಮಾರ್ಗ ಅಧಿಕಾರಿಯು(Route Officer) ಪರ್ಯಾಯ ವ್ಯವಸ್ಥೆ ಮಾಡಲಿದ್ದಾರೆ.

ಮತಗಟ್ಟೆ ಅಧಿಕಾರಿಗಳಿಗೆ ಕಿಟ್ ವಿತರಣೆ:

ನಗರದ 28 ವಿಧಾನಸಭಾ ಕ್ಷೇತ್ರಗಳ ಮಸ್ಟರಿಂಗ್ ಕೇಂದ್ರಗಳಿಂದ ಮತಗಟ್ಟೆ ಅಧಿಕಾರಿಗಳು, ಇವಿಎಂ, ಸಿಯು, ವಿವಿ ಪ್ಯಾಟ್, ಮತದಾನದ ದಿನ ಅಗತ್ಯವಿರುವ ಚೆಕ್ ಲಿಸ್ಟ್ ಪ್ರಕಾರ ಎಲ್ಲಾ ರೀತಿಯ ಸಾಮಗ್ರಿಗಳು, ಮತಗಟ್ಟೆಗಳಲ್ಲಿ ರಾತ್ರಿ ಉಳಿಯಲು‌ ಮತಗಟ್ಟೆ ಅಧಿಕಾರಿಗಳಿಗೆ ಬೇಕಾದಂತಹ ವ್ಯವಸ್ಥೆ ಮಾಡಲಾಗಿದೆ.

ಭೇಟಿ ನೀಡಿದ ಮಸ್ಟರಿಂಗ್ ಕೇಂದ್ರಗಳ ವಿವರ:

1. ಶೇಷಾದ್ರಿಪುರಂ ಕಾಲೇಜು, ಯಲಹಂಕ.
2. ಬಿಇಎಲ್ ಹೈ ಸ್ಕೂಲ್, ಬ್ಯಾಟರಾಯನಪುರ.
3. ಕ್ರೈಸ್ಟ್ ಯೂನಿವರ್ಸಿಟಿ, ದಾಸರಹಳ್ಳಿ.

ಪರಿಶೀಲನೆಯ ವೇಳೆ ವಲಯ ಜಂಟಿ ಆಯುಕ್ತರುಗಳಾದ ಮೊಹ್ಮದ್ ನಯೀಮ್ ಮೊಮಿನ್, ಬಾಲಶೇಖರ್, ಸಹಾಯಕ ಚುನಾವಣಾಧಿಕಾರಿಗಳಾದ ಸುರೇಶ್, ಪ್ರಮೋದ್ ಪಾಟೀಲ್, ಬಾಲಪ್ಪ ಹಂದಿಗುಂದ, ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

English summary :Visit and inspection of mustering centers by District Election Officer and Chief Commissioner

ನೀಟ್-ಯುಜಿ 2026 ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯ ಮತ್ತೊಬ್ಬ ಮಾಸ್ಟರ್‌ಮೈಂಡ್‌ನ ಗುರುತಿಸಿದ ಸಿಬಿಐ
ನೀಟ್-ಯುಜಿ 2026 ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯ ಮತ್ತೊಬ್ಬ ಮಾಸ್ಟರ್‌ಮೈಂಡ್‌ನ ಗುರುತಿಸಿದ ಸಿಬಿಐ
ಹಾರ್ಮುಜ್ ಮೂಲಕ ಎಲ್‌ಪಿಜಿ ವಾಹಕಗಳ ಸುರಕ್ಷಿತ ಸಾಗಣೆಯನ್ನು ಭಾರತ ದೃಢಪಡಿಸಿದೆ; ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಸಿಬ್ಬಂದಿಯನ್ನು ರಕ್ಷಿಸಲಾಗಿದೆ.
ಹಾರ್ಮುಜ್ ಮೂಲಕ ಎಲ್‌ಪಿಜಿ ವಾಹಕಗಳ ಸುರಕ್ಷಿತ ಸಾಗಣೆಯನ್ನು ಭಾರತ ದೃಢಪಡಿಸಿದೆ; ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಸಿಬ್ಬಂದಿಯನ್ನು ರಕ್ಷಿಸಲಾಗಿದೆ.
ಐಯುಎಂಎಲ್ ಬೆಂಬಲ : ಕೆ.ಸಿ. ವೇಣುಗೋಪಾಲ್ ಬದಲು ವಿ.ಡಿ. ಸತೀಶನ್ ಕೇರಳ ಮುಖ್ಯಮಂತ್ರಿಯಾಗಿ ಆಯ್ಕೆ
ಐಯುಎಂಎಲ್ ಬೆಂಬಲ : ಕೆ.ಸಿ. ವೇಣುಗೋಪಾಲ್ ಬದಲು ವಿ.ಡಿ. ಸತೀಶನ್ ಕೇರಳ ಮುಖ್ಯಮಂತ್ರಿಯಾಗಿ ಆಯ್ಕೆ
 16 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ(ಎಸ್.ಐ.ಆರ್) ಚುನಾವಣಾ ಆಯೋಗ ಆದೇಶ
16 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ(ಎಸ್.ಐ.ಆರ್) ಚುನಾವಣಾ ಆಯೋಗ ಆದೇಶ
ಹೆಚ್ಚುತ್ತಿರುವ ಪ್ರಾದೇಶಿಕ ಉದ್ವಿಗ್ನತೆ : ಇಸ್ರೇಲ್ ಜೊತೆ ಒಪ್ಪಂದ ಮಾಡಿಕೊಳ್ಳದಂತೆ ಇರಾನ್ ವಿದೇಶಾಂಗ ಸಚಿವ ಎಚ್ಚರಿಕೆ
ಹೆಚ್ಚುತ್ತಿರುವ ಪ್ರಾದೇಶಿಕ ಉದ್ವಿಗ್ನತೆ : ಇಸ್ರೇಲ್ ಜೊತೆ ಒಪ್ಪಂದ ಮಾಡಿಕೊಳ್ಳದಂತೆ ಇರಾನ್ ವಿದೇಶಾಂಗ ಸಚಿವ ಎಚ್ಚರಿಕೆ
ಪ್ರಧಾನಿ ಮೋದಿ ಭದ್ರತೆಗಾಗಿ ಕೇವಲ ಒಂದು ಹೆಚ್ಚುವರಿ ಬೆಂಗಾವಲು ವಾಹನದಲ್ಲಿ ಪ್ರಯಾಣ
ಪ್ರಧಾನಿ ಮೋದಿ ಭದ್ರತೆಗಾಗಿ ಕೇವಲ ಒಂದು ಹೆಚ್ಚುವರಿ ಬೆಂಗಾವಲು ವಾಹನದಲ್ಲಿ ಪ್ರಯಾಣ
ಪ್ರಧಾನಿ ಮೋದಿ ಇಂಧನ ಉಳಿತಾಯ ಮನವಿ : ಸೈಕಲ್‌ನಲ್ಲಿ ನ್ಯಾಯಾಲಯಕ್ಕೆ ಬಂದ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಾಧೀಶರು
ಪ್ರಧಾನಿ ಮೋದಿ ಇಂಧನ ಉಳಿತಾಯ ಮನವಿ : ಸೈಕಲ್‌ನಲ್ಲಿ ನ್ಯಾಯಾಲಯಕ್ಕೆ ಬಂದ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಾಧೀಶರು
ಇರಾನ್ ಮಿಲಿಟರಿ ವಿಮಾನಗಳು ತನ್ನ ವಾಯುನೆಲೆ ಬಳಸಲು ಅವಕಾಶ ಮಾಡಿಕೊಟ್ಟ ಪಾಕಿಸ್ತಾನ : ಅಮೆರಿಕ ಬೆನ್ನಿಗೆ ಚೂರಿ
ಇರಾನ್ ಮಿಲಿಟರಿ ವಿಮಾನಗಳು ತನ್ನ ವಾಯುನೆಲೆ ಬಳಸಲು ಅವಕಾಶ ಮಾಡಿಕೊಟ್ಟ ಪಾಕಿಸ್ತಾನ : ಅಮೆರಿಕ ಬೆನ್ನಿಗೆ ಚೂರಿ
ಭಾರತ-ಬಾಂಗ್ಲಾದೇಶ ಗಡಿ ಫೆನ್ಸಿಂಗ್‌ಗಾಗಿ ಬಿಎಸ್‌ಎಫ್‌ಗೆ ಭೂ ವರ್ಗಾವಣೆ ಘೋಷಿಸಿದ ಸಿಎಂ ಸುವೇಂದು
ಭಾರತ-ಬಾಂಗ್ಲಾದೇಶ ಗಡಿ ಫೆನ್ಸಿಂಗ್‌ಗಾಗಿ ಬಿಎಸ್‌ಎಫ್‌ಗೆ ಭೂ ವರ್ಗಾವಣೆ ಘೋಷಿಸಿದ ಸಿಎಂ ಸುವೇಂದು
ಹಿಮಂತ ಬಿಸ್ವಾ ಶರ್ಮಾ ರನ್ನು ಮುಖ್ಯಮಂತ್ರಿಯಾಗಿ ಅಧಿಕೃತವಾಗಿ ನೇಮಿಸಿದ ಅಸ್ಸಾಂ ರಾಜ್ಯಪಾಲರು
ಹಿಮಂತ ಬಿಸ್ವಾ ಶರ್ಮಾ ರನ್ನು ಮುಖ್ಯಮಂತ್ರಿಯಾಗಿ ಅಧಿಕೃತವಾಗಿ ನೇಮಿಸಿದ ಅಸ್ಸಾಂ ರಾಜ್ಯಪಾಲರು
ತಮಿಳುನಾಡು ಮುಖ್ಯಮಂತ್ರಿಯಾಗಿ ಟಿವಿಕೆ ಮುಖ್ಯಸ್ಥ ವಿಜಯ್ ಪ್ರಮಾಣ ವಚನ ಸ್ವೀಕಾರ
ತಮಿಳುನಾಡು ಮುಖ್ಯಮಂತ್ರಿಯಾಗಿ ಟಿವಿಕೆ ಮುಖ್ಯಸ್ಥ ವಿಜಯ್ ಪ್ರಮಾಣ ವಚನ ಸ್ವೀಕಾರ
 ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಪ್ರಮಾಣ ವಚನ ಸ್ವೀಕಾರ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಪ್ರಮಾಣ ವಚನ ಸ್ವೀಕಾರ

ನ್ಯೂಸ್ MORE NEWS...