ಲಷ್ಕರ್-ಎ-ತೋಯ್ಬಾ ಕಮಾಂಡರ್ ಸೇರಿ, ಮೂವರು ಉಗ್ರರನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಪಡೆ | JANATA NEWS
ಶ್ರೀನಗರ : ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಭಾರತೀಯ ಪಡೆ, ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮತ್ತು ಲಷ್ಕರ್-ಎ-ತೋಯ್ಬಾ(ಎಲ್‌ಇಟಿ) ಉಗ್ರರ ಕಮಾಂಡರ್ ಸೇರಿ, ಮೂವರು ಇಸ್ಲಾಮಿಕ್ ಉಗ್ರರನ್ನು ನಿಷ್ಕ್ರಿಯಗೊಳಿಸಿದೆ.
ಎನ್ಕೌಂಟರ್ ನಲ್ಲಿ ಸತ್ತ ಉಗ್ರರ ಕಮಾಂಡರ್ ಬಸಿತ್ ಅಹ್ಮದ್ ದಾರ್, ಲಷ್ಕರ್-ಎ-ತೈಬಾ (ಎಲ್‌ಇಟಿ) ಆಫ್‌ಶೂಟ್ ಗ್ರೂಪ್ ಮತ್ತು ದಿ ರೆಸಿಸ್ಟೆಂಟ್ ಫ್ರಂಟ್ (ಟಿಆರ್‌ಎಫ್)ನ ಕಮಾಂಡರ್ ಆಗಿದ್ದ. ಕಣಿವೆ ಪ್ರದೇಶದ ಅಲ್ಪಸಂಖ್ಯಾತರ ಮತ್ತು ಭದ್ರತಾ ಸಿಬ್ಬಂದಿಯ ಹತ್ಯೆಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.
ದಾರ್ ಜೊತೆ ಹತ್ಯೆಗೊಳಗಾದ ಇಬ್ಬರು ಎಲ್‌ಇಟಿ ಭಯೋತ್ಪಾದಕರು ಮೋಮಿನ್ ಗುಲ್ಜಾರ್ ಮತ್ತು ಫಾಹಿಮ್ ಅಹ್ಮದ್ ಬಾಬಾ ಎಂದು ಗುರುತಿಸಲಾಗಿದೆ.
18 ಹತ್ಯೆಗಳಲ್ಲಿ ಭಾಗಿಯಾಗಿದ್ದವರನ್ನು ಎನ್‌ಕೌಂಟರ್ ಮಾಡಿರುವುದು ನಮಗೆ ದೊಡ್ಡ ಸಾಧನೆಯಾಗಿದೆ. ಈ ಕಾರ್ಯಾಚರಣೆಯಲ್ಲಿ ಭದ್ರತಾ ಸಿಬ್ಬಂದಿ, ನಾಗರಿಕರು ಮತ್ತು ಅಲ್ಪಸಂಖ್ಯಾತರು ಸೇರಿದ್ದಾರೆ ಎಂದು ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕ ವಿ ಕೆ ಬಿರ್ಡಿ ತಿಳಿಸಿದ್ದಾರೆ.