ಪುಣೆ ಪೋರ್ಶೆ ಕಾರು ಅಪಘಾತ : ಪ್ರಬಂಧ ಬರೆಯುವ ಶಿಕ್ಷೆಯೊಂದಿಗೆ ಯುವಕನಿಗೆ ಜಾಮೀನು, ತಂದೆಯ ಬಂಧನ | JANATA NEWS
ಪುಣೆ : ಇಬ್ಬರು ಸಾಫ್ಟವೇರ್ ಉದ್ಯೋಗಿಗಳ ಸಾವಿಗೆ ಕಾರಣವಾದ ವೇಗವಾಗಿ ಬಂದ ಬಿಲ್ಡರ್ ಒರ್ವರ ಪುತ್ರನ ಐಷಾರಾಮಿ ಪೋರ್ಶೆ ಕಾರು ಹಾಗೂ ಆತನಿಗೆ ನ್ಯಾಯವ್ಯವಸ್ಥೆ ನೀಡಿದ ಶಿಕ್ಷೆಯ ಕುರಿತು ಸಾಕಷ್ಟು ಟೀಕೆಗೆ ಕಾರಣವಾಗಿದೆ.
ಕುಡಿದು ವೇಗವಾಗಿ ಚಲಾಯಿಸಿದ್ದ ಪೋರ್ಶೆ ಕಾರೊಂದು ನಿಯಂತ್ರಣ ತಪ್ಪಿ ಇತರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಎಂದು ಹೇಳಲಾಗಿದೆ. ಇದರಿಂದ ಸಿಟ್ಟಿಗೆದ್ದ ಜನ, ಕಾರು ಚಾಲನೆ ಮಾಡುತ್ತಿದ್ದ ವೇದಾಂತ್ ಅಗರ್ವಾಲ್ ಎಂಬಾತನನ್ನು ಕಾರಿನಿಂದ ಹೊರಗೆ ಎಳೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಆದರೆ, ಈ ಭಯಾನಕ ಅಪಘಾತ ನಡೆದ 15 ಘಂಟೆಯ ಒಳಗೆ ವೇದಾಂತಗೆ ಜಾಮೀನು ಮಂಜೂರು ಮಾಡಲಾಗಿದೆ. 17 ವರ್ಷದ ಈ ಯುವಕ ಕುಡಿದು ವಾಹನ ಚಲಾಯಿಸಿ ಇಬ್ಬರನ್ನು ಕೊಂದ ಆರೋಪದ ಬೆನ್ನಲ್ಲೇ, 300 ಪದಗಳ ಪ್ರಬಂಧವನ್ನು ಬರೆಯುವ ಷರತ್ತಿನ ಮೇಲೆ ಜಾಮೀನು ನೀಡಲಾಗಿದೆ. ದುರಂತವು ಆಕ್ರೋಶವನ್ನು ಹುಟ್ಟುಹಾಕಿದೆ, ಅನೇಕರು ನ್ಯಾಯಾಂಗ ತೀವ್ರವಾಗಿ ಟೀಕಿಸಿದ್ದು ಮತ್ತು ಅಸ್ತಿತ್ವದಲ್ಲಿರುವ ಸಂಚಾರ ಕಾನೂನುಗಳನ್ನು ದೂಷಿಸಿದ್ದಾರೆ.
ಮಾಜಿ ಬೆಂಗಳೂರು ಪೊಲೀಸ್ ಕಮಿಷನರ್ ಬಾಸ್ಕರ್ ರಾವ್ ಅವರು ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, "ಇದು ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ಅಂತರಾಷ್ಟ್ರೀಯ ಅಪಹಾಸ್ಯದ ವಿಷಯವಾಗಿದೆ, ಅದರಲ್ಲೂ ವಿಶೇಷವಾಗಿ ಈಗ ರಜೆಯಲ್ಲಿರುವ ನ್ಯಾಯಾಂಗ.. ಶ್ರೀಮಂತ ಮತ್ತು ದುರಹಂಕಾರಿ ಪೋಷಕರ ಹಾಳಾದ ಕೆಟ್ಟ ಹುಡುಗನ ಕೈಯಲ್ಲಿ ಸತ್ತ ಇಬ್ಬರು ಯುವಕರ ಪೋಷಕರಿಗೆ ನಾವು ಯಾವ ಸಾಂತ್ವನದ ಮಾತುಗಳನ್ನು ನೀಡಬಹುದು…😡 😡😡", ಎಂದು ಎಕ್ಸ್ ನಲ್ಲಿ ಬರೆದಿದ್ದಾರೆ.
ಪೋರ್ಶೆ ಕಾರು ಚಲಾಯಿಸುತ್ತಿದ್ದ ಅಗರ್ವಾಲ್ ಕಲ್ಯಾಣಿ ನಗರದ ಪಬ್‌ವೊಂದರಿಂದ ಆಗಮಿಸುತ್ತಿದ್ದ ಎಂದು ತಿಳಿದು ಬಂದಿದೆ. ಆದರೆ ಆತ ಪಾನಮತ್ತನಾಗಿದ್ದನೋ ಇಲ್ಲವೋ ಎಂಬ ಬಗ್ಗೆ ಪೊಲೀಸರು ಇನ್ನಷ್ಟೇ ತನಿಖೆ ನಡೆಸಬೇಕಿದೆ.
ಘಟನೆಯ ಎರಡು ದಿನಗಳ ನಂತರ, ಬಾಲಾಪರಾಧಿಯ ತಂದೆಯನ್ನು ಮೋಟಾರು ವಾಹನ ಕಾಯ್ದೆ, 2019 ರ ಪ್ರಕಾರ ಬಂಧಿಸಲಾಯಿತು.
ವೇದಾಂತ್ ಅಗರ್ವಾಲ್ ಪುಣೆಯಲ್ಲಿ ಪುಣೆಯ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಬ್ರಹ್ಮ ರಿಯಾಲ್ಟಿಯ ಮಾಲೀಕ ವಿಶಾಲ್ ಅಗರ್ವಾಲ್ ಎಂಬುವವರ ಪುತ್ರನಾಗಿದ್ದಾನೆ. ಐಷಾರಾಮಿ ಪೋರ್ಶೆ ಕಾರಿನಲ್ಲಿ ಮಿತಿ ಮೀರಿದ ವೇಗವಾಗಿ ಆಗಮಿಸಿದ ಈತ ನಿಯಂತ್ರಣ ತಪ್ಪಿ ಬೈಕ್ ಹಾಗೂ ಇತರ ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಬೈಕ್‌ನಲ್ಲಿದ್ದ ಅನಿಸ್ ದುಧಿಯ ಹಾಗೂ ಅಶ್ವಿನಿ ಕೋಸ್ಟಾ ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯರವಾಡ ಪೊಲೀಸ್ ಠಾಣೆಯಲ್ಲಿ ಮೃತರ ಸ್ನೇಹಿತರಾದ ಇಕೀಬ್ ರಂಜಾನ್ ಮುಲ್ಲಾ ಎಂಬುವವರು ಪ್ರಕರಣ ದಾಖಲಿಸಿದ್ದಾರೆ. ಘಟನೆಯಿಂದ ರೊಚ್ಚಿಗೆದ್ದ ಜನ ಮಾತ್ರ ಆತನನ್ನು ಕಾರಿನಿಂದ ಹೊರಗೆಳೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
This has become a topic of international ridicule of our criminal justice system in particular the Judiciary who are now on a holiday.. what comforting words can we offer to parents of two youngsters who died at the hands of rich and arrogant parent’s spoiled brat…😡😡😡
— Bhaskar Rao ( MODI KA PARIWAAR) (@Nimmabhaskar22) May 21, 2024