ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದಾಗಿ ಅತ್ಯಾಚಾರ, ಕೊಲೆ, ಹಲ್ಲೆ, ನಡೆಯುತ್ತಿದೆ. ಭಯೋತ್ಫಾದನೆ, ಕೋಮುಗಲಭೆಗಳು ರಾರಾಜಿಸುತ್ತಿವ - ಬಿಜೆಪಿ | JANATA NEWS
ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದಾಗಿ ಸಂಪೂರ್ಣವಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಪರಿಣಾಮ ಅರಾಜಕತೆ ತಾಂಡವವಾಡುತ್ತಿದೆ, ಎಂದು ಕರ್ನಾಟಕ ಬಿಜೆಪಿ ರಾಜ್ಯ ಸರ್ಕಾರ ವನ್ನು ತರಾಟೆಗೆ ತೆಗೆದುಕೊಂಡಿದೆ. ಬೆಂಗಳೂರಿನ ಡಿಜೆಹಳ್ಳಿ-ಕೆಜಿಹಳ್ಳಿ ಮಾದರಿಯಲ್ಲಿ ಇತ್ತೀಚೆಗೆ ಚೆನ್ನಗರಿ ಪೊಲೀಸ್ ಠಾಣೆ ಮೇಲೆ ನಡೆದ ದಾಳಿ ಹಾಗೂ ಉಡುಪಿಯಲ್ಲಿ ನಡೆದ ಗ್ಯಾಂಗ್ ವಾರ್ ಗಳ ವಿಡಿಯೋ ಹಂಚಿಕೊಂಡಿರುವ ರಾಜ್ಯ ಬಿಜೆಪಿ ಎಕ್ಸ್ ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ಈ ಕುರಿತು ಪೋಸ್ಟ್ ಮಾಡಿರುವ ಬಿಜೆಪಿ, "ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದಾಗಿ ಸಂಪೂರ್ಣವಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಪರಿಣಾಮ ಅರಾಜಕತೆ ತಾಂಡವವಾಡುತ್ತಿದೆ."
"ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರನ್ನು ಬಂಧಿಸುವುದಕ್ಕೆ ಹತ್ತಾರು ಪೊಲೀಸರನ್ನು ಸಿದ್ದರಾಮಯ್ಯ ಸರ್ಕಾರ ಕಳುಹಿಸಿಕೊಡುತ್ತೆ. ಮತ್ತೊಂದೆಡೆ ಚೆನ್ನಗರಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ ಮತಾಂಧರ ಪರ ನಿಲ್ಲುತ್ತಾ ಪೊಲೀಸ್ ಅಧಿಕಾರಿಗಳನ್ನೇ ಅಮಾನತು ಮಾಡುತ್ತೆ."
"ಪೊಲೀಸರನ್ನು ತಮ್ಮ ಕೈಗೊಂಬೆ ಮಾಡಿಕೊಂಡು ಆಟ ಆಡಿಸುತ್ತಿರುವ ಪರಿಣಾಮ ಕಾನೂನು ಮತಾಂಧರ ತಾಳಕ್ಕೆ ಕುಣಿಯುತ್ತಿದೆ. ಹೀಗಾಗಿ ಯುವತಿಯರ ಮೇಲೆ ಅತ್ಯಾಚಾರ, ಕೊಲೆ, ಹಲ್ಲೆ, ನಡೆಯುತ್ತಿದೆ. ಭಯೋತ್ಫಾದನೆ, ಕೋಮುಗಲಭೆಗಳು ರಾಜ್ಯದಲ್ಲಿ ರಾರಾಜಿಸುತ್ತಿವೆ.", ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದೆ.
ಇದಕ್ಕೂ ಮೊದಲು ಎಕ್ಸ್ ನಲ್ಲಿ ಮಾಡಿರುವ ಇನ್ನೊಂದು ಪೋಸ್ಟ್ ನಲ್ಲಿ, "ಕರ್ನಾಟಕ ಮಾಡೆಲ್! ಗ್ಯಾಂಗ್ ವಾರ್‌ಗಳು, ಯುವತಿಯರ ಮೇಲೆ ಅತ್ಯಾಚಾರ, ಹಲ್ಲೆ, ಹತ್ಯೆ, ಬಾಂಬ್ ಬ್ಲಾಸ್ಟ್‌ಗಳು, ಗಾಂಜಾ, ಅಫೀಮು, ರೇವ್ ಪಾರ್ಟಿಗಳು, ಪಾಕೈಸ್ತಾನ್ ಜಿಂದಾಬಾದ್ ಘೋಷಣೆಗಳು ಸೇರಿ ಇತ್ಯಾದಿಗಳು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕಾಮನ್ ಆಗಿದೆ."
"ಉಗ್ರರು, ಮತಾಂಧರು, ಪುಂಡರು, ಕಿಡಿಗೇಡಿಗಳು ರೌಡಿಗಳಿಗೆ ಸಿದ್ದರಾಮಯ್ಯ ಸರ್ಕಾರ ಫ್ರೀ ಹ್ಯಾಂಡ್ ಕೊಟ್ಟು ಪೊಲೀಸರನ್ನು ಕೈಗೊಂಬೆ ಮಾಡಿಕೊಂಡಿರುವ ಪರಿಣಾಮವೇ ಇಂದು ಅರಾಜಕತೆ ಸೃಷ್ಟಿಯಾಗಿದೆ. ಇದು ದೇಶಕ್ಕೆ ಕಾಂಗ್ರೆಸ್ ತೋರಿಸುತ್ತಿರುವ ಕರ್ನಾಟಕ ಮಾಡೆಲ್!", ಎಂದು ಬರೆದಿದೆ.