ಟ್ರಕ್, ಕಾರು ಭೀಕರ ಅಪಘಾತದಲ್ಲಿ 6 ಜನರ ಸಾವು: ಕಳೆದ 24 ಗಂಟೆಗಳಲ್ಲಿ ರಾಜ್ಯಾದ್ಯಂತ ರಸ್ತೆ ಅಪಘಾತಗಳಲ್ಲಿ 51 | JANATA NEWS

ಹಾಸನ : ಟ್ರಕ್ ಹಾಗೂ ಕಾರಿನ ನಡುವೆ ಸಂಭವಿಸದ ಭೀಕರ ಅಪಘಾತದಲ್ಲಿ 6 ಜನರು ದಾರುಣ ಸಾವನ್ನಪ್ಪಿದ ಘಟನೆ ಹಾಸನ ಹೊರವಲಯದ ಈಚನಹಳ್ಳಿ ಬಳಿ ಸಂಭವಿಸಿರುವ ಕುರಿತು ವರದಿಯಾಗಿದೆ. ಇಂದು ಭಾನುವಾರ ನಸುಕಿನ ಜಾವದಲ್ಲಿ ನಿದ್ದೆ ಮಂಪರಿನಲ್ಲಿ ಚಾಲಕ ಕಾರು ಚಲಾಯಿಸಿದ ಪರಿಣಾಮ ಅಪಘಾತ ಸಂಭವಿಸದೆ ಎನ್ನಲಾಗಿದೆ.
ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಆರು ಮಂದಿ ಸ್ಥಳದಲ್ಲಿಯೇ ಮೃತಪಟ್ಟದ್ದು, ಕಾರು ಸಂಪೂರ್ಣ ನಜ್ಜುಗುಜ್ಜು ಆಗಿದೆ. ಮೂವರು ಮಹಿಳೆಯರು,ಒಂದು ಮಗು ಹಾಗೂ ಇಬ್ಬರು ಪುರುಷರು ಕಾರಿನಲ್ಲಿದ್ದರು.
ನುಜ್ಜುಗುಜ್ಜಾಗಿರುವ ಕಾರಿನೊಳಗಿಂದ ಶವಗಳನ್ನು ಹೊರತೆಗೆಯಲು ಪೊಲೀಸರು ಕಷ್ಟಪಟ್ಟರು ಎನ್ನಲಾಗಿದೆ. ಹಾಸನ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಳೆದ 24 ಗಂಟೆಗಳಲ್ಲಿ ರಸ್ತೆ ಅಪಘಾತಗಳಲ್ಲಿ 51 ಜೀವಗಳು ಕಳೆದುಹೋದವು, ಇದು ಇತ್ತೀಚಿನ ಹಿಂದಿನ ಅತಿ ಹೆಚ್ಚು ಸಂಖ್ಯೆಗಳಲ್ಲಿ ಒಂದಾಗಿದೆ. ಇವುಗಳಲ್ಲಿ ಹೆಚ್ಚಿನವು ಅತಿವೇಗದ ಮತ್ತು ಅಜಾಗರೂಕ ಚಾಲನೆಯಿಂದ ಉಂಟಾಗುತ್ತವೆ. ರಸ್ತೆ ಸುರಕ್ಷತೆಗೆ ಎಲ್ಲರ ಜವಾಬ್ದಾರಿಯುತ ನಡವಳಿಕೆಯ ಅಗತ್ಯವಿದೆ", ಎಂದು ಸಂಚಾರ ಹಾಗೂ ರಸ್ತೆ ಸುರಕ್ಷತೆ ಎಡಿಜಿಪಿ ಅಲೋಕ ಕುಮಾರ ಅವರು ತಿಳಿಸಿದ್ದಾರೆ.