ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಣ ಬೇರೆಬೇರೆ ಕಂಪನಿಗಳ ಖಾತೆಗೆ.. ದೊಡ್ಡ ಶೆಡ್ಯಂತ್ರ - ಕೋಟಾ ಶ್ರೀನಿವಾಸ ಪೂಜಾರಿ | JANATA NEWS

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಬಿ.ನಾಗೇಂದ್ರ ಅವರು ರಾಜೀನಾಮೆ ಕೇಳಿದ್ದಾರೆಂದು ಸುದ್ದಿ, ಅದಕ್ಕೆ ನಾಗೇಂದ್ರ ಅವರು ನನ್ನ ರಾಜೀನಾಮೆ ಕೇಳಿದರೆ, ಎಲ್ಲರ ವಿಷಯ ಬಹಿರಂಗ ಪಡಿಸುತ್ತೇನೆ ಎಂದು ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಬೆದರಿಕೆ ಹಾಕಿದ್ದಾರೆ ಎಂಬ ಸುದ್ದಿ ಬಂದಿದೆ. ಎಂದು ಮಾಜಿ ಸಚಿವ ಹಾಗೂ ಲೋಕಸಭಾ ಚುನಾವಣಾ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ
ಈ ಕುರಿತು ಮಾತನಾಡಿರುವ ಅವರು, "ಸಿದ್ದರಾಮಯ್ಯನವರು ನಾಗೇಂದ್ರ ಅವರನ್ನು ಕರೆದು ರಾಜೀನಾಮೆ ಕೊಡಬೇಕು ಎಂದು ಹೇಳಿದ್ದಾರೆ ಎಂದು ಸುದ್ದಿ. ಆದರೆ ಸಚಿವ ನಾಗೇಂದ್ರ ಅವರು ನನ್ನ ರಾಜೀನಾಮೆ ಕೇಳಿದರೆ ಎಲ್ಲರದ್ದು ಬಹಿರಂಗಪಡಿಸುತ್ತೇನೆ, ಎಂದು ಬೆದರಿಕೆ ಬೆದರಿಕೆ ಹಾಕಿದ್ದಾರೆ ಎಂದು ಸುದ್ದಿ. ಹಾಗಾಗಿ ಮುಖ್ಯಮಂತ್ರಿಗಳು ಕೂಡ ಸಂದಿಗ್ನದಲ್ಲಿ ಇದ್ದಾರೆ ಎಂದು ನಮಗೆ ಅನಿಸುತ್ತದೆ. ಆ ಕಾರಣಕ್ಕೆ ಭಾರತೀಯ ಜನತಾ ಪಕ್ಷ ಇದನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡಿದೆ."
"ಬಡವರ ಹಣ, ದುರ್ಬಲರ ಹಣ, ಧ್ವನಿ ಇಲ್ಲದವರ ಹಣ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಪರ ಕೆಲಸ ಮಾಡುತ್ತೇನೆ, ಎಂದು ಹೇಳುತ್ತಿರುವ ಸಿದ್ದರಾಮಯ್ಯ ಅವರ(ಸರ್ಕಾರದ) 87 ಕೋಟಿ ರೂಪಾಯಿ ಬಡವರ ಶಿಕ್ಷಣ, ಅವರು ಉದ್ಯೋಗಕ್ಕೆ, ಅವರ ಆರೋಗ್ಯಕ್ಕೆ, ವಸತಿಗೆ ಮೀಸಲಿಟ್ಟಂತಹ ಹಣ ಇವತ್ತು ಕಂಪನಿಗಳಿಗೆ, ಬೇರೆಬೇರೆ ಕಂಪನಿಗಳ ಖಾತೆಗೆ ಹೋಗುತ್ತಿದೆ. ಅಂತ ಪರಂಪರೆ ಮತ್ತು ವ್ಯವಸ್ಥೆ ರಾಜ್ಯದಲ್ಲಿ ತುಂಬಾ ಆತಂಕಕ್ಕೆ ಎಡೆಮಾಡಿದೆ. "
"ಆ ಹಿನ್ನಲೆಯಲ್ಲಿ ಸಚಿವರ ರಾಜೀನಾಮೆ ಕೇಳಲಾಗದಷ್ಟು, ಪಡೆಯಲಾಗದಷ್ಟು ಮುಖ್ಯಮಂತ್ರಿಗಳು ದುರ್ಬಲರಾಗಿದ್ದಾರೆ ಎನ್ನುವಂತ ಆತಂಕ ಈಗ ರಾಜ್ಯದಲ್ಲಿ ಎಲ್ಲೆಡೆ ಹರದಾಡುತ್ತಿದೆ. ಆ ಹಿನ್ನೆಲೆಯಲ್ಲಿ ನಾನು ಸಿದ್ದರಾಮಯ್ಯನವರಲ್ಲಿ ಅಗ್ರಹಪಡಿಸುತ್ತೇನೆಂದರೆ, ತಕ್ಷಣ ನಿಮ್ಮ ಸಚಿವರ ರಾಜೀನಾಮೆ ತೆಗೆದುಕೊಳ್ಳಲು ಏನಾದರೂ ನಿಮಗೆ ತೊಂದರೆ ಇದ್ದರೆ, ನಿಮ್ಮ ರಾಜೀನಾಮೆ ಕೇಳುವಂತಹ ಅನಿವಾರ್ಯತೆ ಈಗ ಭಾರತೀಯ ಜನತಾ ಪಕ್ಷಕ್ಕೆ ಬಂದಿದೆ ಎನ್ನುವಂತ ಮಾತು ಹೇಳಬೇಕಾಗಿದೆ."
"ಒಟ್ಟಾರೆ ಈ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಣ ಇಷ್ಟೊಂದು ದುರ್ವ್ಯವಹಾರ ಆಗುವಾಗ ಕೂಡ ಕಣ್ಣು ಮುಚ್ಚಿ ಕುಳಿತಿರುವುದು ನೋಡಿದರೆ ಯಾರು ಊಹಿಸಲು ಆಗದಂತಹ ದೊಡ್ಡ ಶೆಡ್ಯಂತ್ರ ಇದೆ ಎಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ," ಎಂದು ಮಾಜಿ ಸಚಿವ ಪೂಜಾರಿ ಹೇಳಿದ್ದಾರೆ.
ಈ ವಿಡಿಯೋ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ, "ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಕಂಡ ಅತ್ಯಂತ ದುರ್ಬಲ ಸಿಎಂ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ. ಲಾಭದಲ್ಲಿ ಪಾಲುದಾರರಾದವರು ನಷ್ಟದಲ್ಲಿಯೂ ಸಹ ಪಾಲುದಾರರಾಗಬೇಕು ಎಂಬುದು ಸಚಿವ ನಾಗೇಂದ್ರ ಅವರ ಅಹವಾಲು ಇರಬಹುದು. ಸಚಿವ ನಾಗೇಂದ್ರ ಅವರ ಜೊತೆ ಸಿಎಂ ಸಿದ್ದರಾಮಯ್ಯನವರು ಸಹ ರಾಜೀನಾಮೆ ನೀಡಿದರೂ ಅಚ್ಚರಿಯಿಲ್ಲ!!!", ಎಂದು ಎಕ್ಸ್ ನಲ್ಲಿ ಹೇಳಿದೆ.