Tue,May26,2026
ಕನ್ನಡ / English

ಪೆಟ್ರೋಲ್‌ ಡೀಸೆಲ್‌ ದರ ಏರಿಕೆ ಖಂಡಿಸಿ ಬಿಜೆಪಿ ಸೈಕಲ್‌, ಎತ್ತಿನಗಾಡಿ ಮೇಲೇರಿ ಪ್ರತಿಭಟನೆ | JANATA NEWS

20 Jun 2024

ಬೆಂಗಳೂರು : ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ತೈಲ ಬೆಲೆ ಏರಿಸಿ ಜನ ಸಾಮಾನ್ಯರಿಗೆ ಹೊರೆಯಾಗಿದೆ ಎಂದು ಆರೋಪಿಸಿ ರಾಜ್ಯಾದ್ಯಂತ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು. ಪೆಟ್ರೋಲ್‌ ಡೀಸೆಲ್‌ ದರ ಏರಿಕೆ ಖಂಡಿಸಿ ಬಿಜೆಪಿ ಸೈಕಲ್‌, ಎತ್ತಿನಗಾಡಿ ಮೇಲೇರಿ ಪ್ರತಿಭಟನೆ ನಡೆಸಿದೆ.

ಅನಿಯಮಿತ ಬೆಲೆಯೇರಿಕೆ ಮೂಲಕ ನಾಡಿನ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರದ ರಾಜ್ಯದಾದ್ಯಂತ ಬೃಹತ್‌ ಪ್ರತಿಭಟನೆ !

ಪೆಟ್ರೋಲ್‌-ಡಿಸೇಲ್‌ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ರಾಜ್ಯ ಕಾಂಗ್ರೆಸ್‌ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಇಂದು ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ರಸ್ತೆ ತಡೆ ಮೂಲಕ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಸಿಟಿ.ರವಿ ಅವರು, "ಬೆಲೆ ಏರಿಕೆ ಮೂಲಕ ಜನರ ಬದುಕನ್ನು ದುಷ್ಕರಗೊಳಿಸಲು ಹೊರಟಿದೆ ಎಲ್ಲಾ ದರಗಳ ಏರಿಕೆಗೆ ಮುಂದಾಗಿದೆ. ಜನ ವಿರೋಧಿ ನೀತಿ ಸರ್ವಾಧಿಕಾರಿ ನೀತಿ ಸಾರ್ವಜನಿಕವಾಗಿ ಸೈಕಲ್ ನಲ್ಲಿ ಹೋಗೋದಕ್ಕೂ ಬಿಡದಂತಹ ಸರ್ವಾಧಿಕಾರಿ ನೀತಿಯ ವಿರುದ್ಧ ನಮ್ಮ ಹೋರಾಟವಿದೆ. ಈ ಜನ ವಿರೋಧಿ ನೀತಿಯನ್ನು ಹಿಂತೆ ತೆಗೆದುಕೊಳ್ಳುವವರೆಗೂ ನಾವು ವಿಧಾನಸಭೆಯ ಒಳಗಡೆ ವಿಧಾನಸಭೆ ಹೊರಗಡೆ ಹೋರಾಟ ಮಾಡುತ್ತೇವೆ. ಈ ಸರ್ಕಾರ ಇಂದಿನ ದರ ಹೆಚ್ಚಿಸುವ ಮೂಲಕ ನೀರಿನ ಬೆಲೆ ಹೆಚ್ಚಳ ಮೂಲಕ ವಿದ್ಯುತ್ ಶಕ್ತಿ ಇದರ ಹೆಚ್ಚಳದ ಮೂಲಕ ಜನವಿರೋಧಿ ಯಾಗಿ ವರ್ತನೆ ಮಾಡುತ್ತಿದೆ. ಜನ ವಿರೋಧಿ ನೀತಿ ವಿರುದ್ಧ ನಮ್ಮ ಹೋರಾಟ", ಎಂದು ಹೇಳಿದ್ದಾರೆ. ಬಳಿಕ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಬಿ.ವೈ. ವಿಜಯೇಂದ್ರ ಮಾತನಾಡಿ, ‘ರಾಜ್ಯ ಸರ್ಕಾರದ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಳದ ನಿರ್ಧಾರವನ್ನು ವಿರೋಧಿಸಿ ಕಳೆದೆರಡು ದಿನಗಳಿಂದ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ... ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದರೂ ಇಂದಿಗೂ ಸರ್ಕಾರ ತನ್ನ ನಿರ್ಧಾರ ಬದಲಿಸಿಲ್ಲ. ಸಿಎಂ ತಮ್ಮ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ...ಆದರೆ ರಾಜ್ಯ ಸರ್ಕಾರ ಈಗಲೇ ತೆಗೆದುಕೊಂಡಿರುವ ನಿರ್ಧಾರವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದು, ಬಿಜೆಪಿ ಸುಮ್ಮನಿರುವುದಿಲ್ಲ. ..ಬೆಂಗಳೂರಿನಲ್ಲಿ ಸೈಕಲ್ ಯಾತ್ರೆ ಕೈಗೊಳ್ಳುತ್ತಿದ್ದೇವೆ...", ಎಂದಿದ್ದಾರೆ.

English summary :Protest against the increase in petrol and diesel price by BJP cycle and bullock cart

ತನ್ನ ಸ್ವಂತ ತಂದೆಗೆ ನಿಷ್ಠೆ ತೋರದ ಮಗ ದೇಶಕ್ಕೆ ನಿಷ್ಠನಾಗಿರುತ್ತಾನೆಯೇ? - ರಾಹುಲ್ ಗಾಂಧಿ ಸಮಗ್ರತೆ ಪ್ರಶ್ನಿಸಿದ ಎಸ್.ಜೈಶಂಕರ್
ತನ್ನ ಸ್ವಂತ ತಂದೆಗೆ ನಿಷ್ಠೆ ತೋರದ ಮಗ ದೇಶಕ್ಕೆ ನಿಷ್ಠನಾಗಿರುತ್ತಾನೆಯೇ? - ರಾಹುಲ್ ಗಾಂಧಿ ಸಮಗ್ರತೆ ಪ್ರಶ್ನಿಸಿದ ಎಸ್.ಜೈಶಂಕರ್
ಕೋಮುಗಲಭೆ ಪ್ರಕರಣ ಸೇರಿ ಒಟ್ಟು 52 ಕ್ರಿಮಿನಲ್‌ ಪ್ರಕರಣ ಹಿಂಪಡೆಯಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ : ಬಿಜೆಪಿ ಆಕ್ರೋಶ
ಕೋಮುಗಲಭೆ ಪ್ರಕರಣ ಸೇರಿ ಒಟ್ಟು 52 ಕ್ರಿಮಿನಲ್‌ ಪ್ರಕರಣ ಹಿಂಪಡೆಯಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ : ಬಿಜೆಪಿ ಆಕ್ರೋಶ
ಮದರಸಾಗಳಲ್ಲಿಯೂ ವಂದೇ ಮಾತರಂ ಕಡ್ಡಾಯಗೊಳಿಸಿದ ಪಶ್ಚಿಮ ಬಂಗಾಳ ಸರ್ಕಾರ
ಮದರಸಾಗಳಲ್ಲಿಯೂ ವಂದೇ ಮಾತರಂ ಕಡ್ಡಾಯಗೊಳಿಸಿದ ಪಶ್ಚಿಮ ಬಂಗಾಳ ಸರ್ಕಾರ
ಪ್ರಧಾನಿ ವಿದೇಶ ಪ್ರವಾಸದ ಉದ್ದೇಶ ಅರ್ಥಮಾಡಿಕೊಳ್ಳುವ ಬೌದ್ಧಿಕ ಸಾಮರ್ಥ್ಯ ರಾಹುಲ್ ಗಾಂಧಿಗೆ ಇಲ್ಲ - ವಿದೇಶಾಂಗ ಸಚಿವ ಎಸ್. ಜೈಶಂಕರ್
ಪ್ರಧಾನಿ ವಿದೇಶ ಪ್ರವಾಸದ ಉದ್ದೇಶ ಅರ್ಥಮಾಡಿಕೊಳ್ಳುವ ಬೌದ್ಧಿಕ ಸಾಮರ್ಥ್ಯ ರಾಹುಲ್ ಗಾಂಧಿಗೆ ಇಲ್ಲ - ವಿದೇಶಾಂಗ ಸಚಿವ ಎಸ್. ಜೈಶಂಕರ್
ಪಾಕಿಸ್ತಾನ ವಾಯುಪಡೆಯ ಜೆಎಫ್ -17 ಫೈಟರ್ ಜೆಟ್ ಮತ್ತೆ ಕ್ರ್ಯಾಷ್ ಆಗಿದೆ : ಈಗ ಪಂಜಾಬ್ ಪ್ರಾಂತ್ಯದಲ್ಲಿ
ಪಾಕಿಸ್ತಾನ ವಾಯುಪಡೆಯ ಜೆಎಫ್ -17 ಫೈಟರ್ ಜೆಟ್ ಮತ್ತೆ ಕ್ರ್ಯಾಷ್ ಆಗಿದೆ : ಈಗ ಪಂಜಾಬ್ ಪ್ರಾಂತ್ಯದಲ್ಲಿ
ದ್ವಿಪಕ್ಷೀಯ ಮಾತುಕತೆಗೂ ಮುನ್ನ ಇಟಲಿ ಪ್ರಧಾನಿ ಮೆಲೋನಿ ರನ್ನು ರೋಮ್‌ನಲ್ಲಿ ಭೇಟಿಯಾದ ಪ್ರಧಾನಿ ಮೋದಿ
ದ್ವಿಪಕ್ಷೀಯ ಮಾತುಕತೆಗೂ ಮುನ್ನ ಇಟಲಿ ಪ್ರಧಾನಿ ಮೆಲೋನಿ ರನ್ನು ರೋಮ್‌ನಲ್ಲಿ ಭೇಟಿಯಾದ ಪ್ರಧಾನಿ ಮೋದಿ
ಕೊಡಗಿನ ದುಬಾರೆ ಶಿಬಿರದಲ್ಲಿ ಆನೆ ದಾಳಿಗೆ ಚೆನ್ನೈನ ಪ್ರವಾಸಿಗರೊಬ್ಬರು ಬಲಿ
ಕೊಡಗಿನ ದುಬಾರೆ ಶಿಬಿರದಲ್ಲಿ ಆನೆ ದಾಳಿಗೆ ಚೆನ್ನೈನ ಪ್ರವಾಸಿಗರೊಬ್ಬರು ಬಲಿ
ಪ್ರಧಾನಿ ಮೋದಿಗೆ ಸ್ವೀಡನ್ ನಿಂದ ಪ್ರತಿಷ್ಠಿತ ರಾಯಲ್ ಆರ್ಡರ್ ಆಫ್ ಪೋಲಾರ್ ಸ್ಟಾರ್ ಪ್ರಶಸ್ತಿ ಪ್ರದಾನ
ಪ್ರಧಾನಿ ಮೋದಿಗೆ ಸ್ವೀಡನ್ ನಿಂದ ಪ್ರತಿಷ್ಠಿತ ರಾಯಲ್ ಆರ್ಡರ್ ಆಫ್ ಪೋಲಾರ್ ಸ್ಟಾರ್ ಪ್ರಶಸ್ತಿ ಪ್ರದಾನ
ನೀಟ್-ಯುಜಿ 2026 ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯ ಮತ್ತೊಬ್ಬ ಮಾಸ್ಟರ್‌ಮೈಂಡ್‌ನ ಗುರುತಿಸಿದ ಸಿಬಿಐ
ನೀಟ್-ಯುಜಿ 2026 ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯ ಮತ್ತೊಬ್ಬ ಮಾಸ್ಟರ್‌ಮೈಂಡ್‌ನ ಗುರುತಿಸಿದ ಸಿಬಿಐ
ಹಾರ್ಮುಜ್ ಮೂಲಕ ಎಲ್‌ಪಿಜಿ ವಾಹಕಗಳ ಸುರಕ್ಷಿತ ಸಾಗಣೆಯನ್ನು ಭಾರತ ದೃಢಪಡಿಸಿದೆ; ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಸಿಬ್ಬಂದಿಯನ್ನು ರಕ್ಷಿಸಲಾಗಿದೆ.
ಹಾರ್ಮುಜ್ ಮೂಲಕ ಎಲ್‌ಪಿಜಿ ವಾಹಕಗಳ ಸುರಕ್ಷಿತ ಸಾಗಣೆಯನ್ನು ಭಾರತ ದೃಢಪಡಿಸಿದೆ; ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಸಿಬ್ಬಂದಿಯನ್ನು ರಕ್ಷಿಸಲಾಗಿದೆ.
ಐಯುಎಂಎಲ್ ಬೆಂಬಲ : ಕೆ.ಸಿ. ವೇಣುಗೋಪಾಲ್ ಬದಲು ವಿ.ಡಿ. ಸತೀಶನ್ ಕೇರಳ ಮುಖ್ಯಮಂತ್ರಿಯಾಗಿ ಆಯ್ಕೆ
ಐಯುಎಂಎಲ್ ಬೆಂಬಲ : ಕೆ.ಸಿ. ವೇಣುಗೋಪಾಲ್ ಬದಲು ವಿ.ಡಿ. ಸತೀಶನ್ ಕೇರಳ ಮುಖ್ಯಮಂತ್ರಿಯಾಗಿ ಆಯ್ಕೆ
 16 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ(ಎಸ್.ಐ.ಆರ್) ಚುನಾವಣಾ ಆಯೋಗ ಆದೇಶ
16 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ(ಎಸ್.ಐ.ಆರ್) ಚುನಾವಣಾ ಆಯೋಗ ಆದೇಶ

ನ್ಯೂಸ್ MORE NEWS...