ಈಶ್ವರ ಖಂಡ್ರೆ ಮಗ ಕೇವಲ ನಮ್ಮ ಮುಸಲ್ಮಾನರ ವೋಟಿನ ಕಾರಣದಿಂದ ಗೆದ್ದಿದ್ದಾರೆ - ಸಚಿವ ಜಮೀರ್ ಅಹ್ಮದ್ | JANATA NEWS
ಬೀದರ್ : ನಾನು ಈಶ್ವರ್ ಕಂಡ್ರೆ ಹತ್ರ ಮಾತನಾಡುತ್ತೇನೆ. ಅಷ್ಟುಕ್ಕೂ ಈಶ್ವರ ಖಂಡ್ರೆ ಮಗ ಕೇವಲ ಮತ್ತು ಕೇವಲ ನಮ್ಮ ಮುಸಲ್ಮಾನರ ವೋಟಿನ ಕಾರಣದಿಂದ ಗೆದ್ದಿದ್ದಾರೆ. ನಮ್ಮ ಕೆಲಸ ಮಾಡೋಕೋಸ್ಕರ. ನಾನು ಮಾಡಿಸಿ ಕೊಡುತ್ತೇನೆ, ಎಂದು ಸ್ಪಷ್ಟವಾಗಿ ಮೈಕ್ ಹಿಡಿದು ಹೇಳಿರುವ ಸಚಿವ ಜಮೀರ್ ಅಹ್ಮದ್ ವಿವಾದಾತ್ಮಕ ಹೇಳಿಕೆ ದೇಶಾದ್ಯಂತ ಸಾಕಷ್ಟು ಸುದ್ಧಿ ಮಾಡುತ್ತಿದ್ದು, ಸಾಕಷ್ಟು ಟೀಕೆಗೆ ಆಹ್ವಾನ ನೀಡಿದೆ.
ಬೀದರ್‌ನಲ್ಲಿ ನಡೆದ ವಕ್ಫ್ ಅದಾಲತ್‌ನಲ್ಲಿ ಸಚಿವ ಜಮೀರ್ ಅಹ್ಮದ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಕೇವಲ ಮುಸ್ಲಿಂಮರ ವೋಟ್ ನಿಂದ ಲೋಕಸಭಾ ಚುನಾವಣೆಯಲ್ಲಿ ಈಶ್ವರ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಮುಸ್ಲಿಂ ಮತಗಳಿಂದಲೇ ಗೆದ್ದಿದ್ದು ಎಂದು ತಮ್ಮದೇ ಪಕ್ಷದ ಸಚಿವನ ವಿರುದ್ಧ ಹೇಳಿಕೆ ನೀಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.
ವಿರೋಧಪಕ್ಷ ಬಿಜೆಪಿ ಐಟಿ ರಾಷ್ಟ್ರೀಯ ಮುಖ್ಯಸ್ಥ ಅಮಿತ್ ಮಾಳವೀಯ ಸಚಿವ ಖಾನ್ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಸಚಿವ ಜಮೀರ್ ಖಾನ್ ಅವರು ಮಾತನಾಡಿರುವ ವಿಡಿಯೋ ಶೇರ್ ಮಾಡಿದ್ದು, 'ಮುಸ್ಲಿಂ ವೀಟೋ ಕರ್ನಾಟಕವನ್ನು ಹಾಳು ಮಾಡುತ್ತಿದೆ... ಈ ವಿಡಿಯೋದಲ್ಲಿ ಕರ್ನಾಟಕದ ವಕ್ಫ್ ಸಚಿವ ಝಮೀರ್ ಅಹಮದ್ ಖಾನ್ ಅವರು ಕಾಡಿನೊಳಗೆ ನಿರ್ಮಿಸಲಾದ ಸ್ಮಶಾನ ಭೂಮಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ, “ಕರ್ನಾಟಕ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಪುತ್ರ, ಹೊಸದಾಗಿ ಸಂಸದರಾಗಿರುವ ಸಾಗರ್ ಖಂಡ್ರೆ ಅವರು ಕೇವಲ ಮುಸ್ಲಿಂ ಮತಗಳಿಂದ ಗೆದ್ದಿದ್ದಾರೆ. … ಅದನ್ನು ಮಾಡಲಾಗುತ್ತದೆ ಎಂದು ನಾನು ಖಚಿತಪಡಿಸಿಕೊಳ್ಳುತ್ತೇನೆ." ಆದ್ದರಿಂದ, ಸಂರಕ್ಷಿತ ಅರಣ್ಯ ಭೂಮಿಯನ್ನು ಅತಿಕ್ರಮಿಸುವ ಅಕ್ರಮವನ್ನು ಮುಸ್ಲಿಂ ವೀಟೋ ಮೂಲಕ ಕ್ರಮಬದ್ಧಗೊಳಿಸಲು ಪ್ರಯತ್ನಿಸಲಾಗಿದೆ. ಕರ್ನಾಟಕ ಎಚ್ಚೆತ್ತುಕೊಂಡು ಕಾಂಗ್ರೆಸ್‌ಗೆ ಮತ ಹಾಕಬಾರದು.',ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ವೀಟೋ ಎಂದರೆ, ಕಾನೂನು ರೂಪಿಸುವ ಸಂಸ್ಥೆಯಿಂದ ಮಾಡಿದ ನಿರ್ಧಾರ ಅಥವಾ ಪ್ರಸ್ತಾಪವನ್ನು ತಿರಸ್ಕರಿಸುವ ಸಾಂವಿಧಾನಿಕ ಹಕ್ಕು.