ಇಂಡಿ ಅಲಯನ್ಸ್‌ಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ | JANATA NEWS

ಮುಂಬಯಿ : ಮುಂಬೈನ ಮಾತೋಶ್ರೀ ನಿವಾಸದಲ್ಲಿ ಶಿವಸೇನಾ (ಯುಬಿಟಿ) ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾದ ನಂತರ ಸೋಮವಾರ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಇಂಡಿ ಅಲಯನ್ಸ್‌ಗೆ ಬಹಿರಂಗವಾಗಿ ಬೆಂಬಲವನ್ನು ನೀಡಿದ್ದಾರೆ.
ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ, ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ಅವರ ಪತ್ನಿ ರಾಧಿಕಾ ಮರ್ಚೆಂಟ್ ಅವರ 'ಶುಭ ಆಶೀರ್ವಾದ' ಸಮಾರಂಭದಲ್ಲಿ ಪಾಲ್ಗೊಳ್ಳಲು ಜ್ಯೋತಿರ್ಮಠದ ಶಂಕರಾಚಾರ್ಯರು ಮಹಾರಾಷ್ಟ್ರದ ರಾಜಧಾನಿ ಮುಂಬೈಗೆ ಬಂದಿದ್ದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ, ಠಾಕ್ರೆ ಅವರು ‘ದ್ರೋಹದ ಬಲಿಪಶು’ ಮತ್ತು ಹಿಂದೂ ಧರ್ಮದಲ್ಲಿ ದ್ರೋಹವು ಪಾಪವಾಗಿದೆ.
“ಉದ್ಧವ್ ಠಾಕ್ರೆ ಮೋಸ ಹೋಗಿದ್ದಾರೆ. ಅವರು ಎದುರಿಸಬೇಕಾದ ದ್ರೋಹದಿಂದ ನಮಗೆಲ್ಲ ನೋವಾಗಿದೆ ಎಂದು ನಾನು ಅವರಿಗೆ ಹೇಳಿದೆ. ಅವರು ಮತ್ತೆ ಮಹಾರಾಷ್ಟ್ರದ ಮುಖ್ಯಮಂತ್ರಿ ಆಗುವವರೆಗೂ ನಮ್ಮ ನೋವಿಗೆ ಪರಿಹಾರವಿಲ್ಲ ಎಂದರು.
ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶದವರೆಗೆ ಎನ್‌ಡಿಎದಲ್ಲಿದ್ದರು, ನಂತರ ಸರ್ಕಾರ ರಚಿಸಲು ಇಂಡಿ ಅಲಯನ್ಸ್‌ಗೆ ಸೇರಿದರು. ಕಾಂಗ್ರೆಸ್ ಜೊತೆ ಕೈಜೋಡಿಸುವುದು ಅವರ ತಂದೆ ದಿವಂಗತ ಬಾಳಾ ಸಾಹೇಬ್ ಠಾಕ್ರೆಯವರ ನೀತಿಗೆ ವಿರುದ್ಧವಾಗಿತ್ತು, ಎಂಬ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಶಂಕರಾಚಾರ್ಯರು, “ಮೋಸ ಮಾಡುವವನು ಹಿಂದೂ ಆಗಲಾರ. ಅದನ್ನು ಹೊರುವವನು ಹಿಂದೂ. ಉದ್ಧವ್ ಠಾಕ್ರೆಯೊಂದಿಗೆ ಏನಾಯಿತು ಎಂದು ಮಹಾರಾಷ್ಟ್ರದ ಜನರು ತಲ್ಲಣಗೊಂಡಿದ್ದಾರೆ ಮತ್ತು ಇದು ಲೋಕಸಭೆ ಚುನಾವಣೆಯಲ್ಲೂ ಗೋಚರಿಸಿತು. ಇದು ತಮ್ಮ ನಾಯಕನನ್ನು ಆಯ್ಕೆ ಮಾಡುವ ಜನರಿಗೆ ಮಾಡುವ ಅಗೌರವವೂ ಹೌದು. ಅಧಿಕಾರಾವಧಿ ಮುಗಿಯುವ ಮುನ್ನವೇ ಸರಕಾರವನ್ನು ಕೆಳಗಿಳಿಸಿ ಜನಾದೇಶವನ್ನು ಅವಮಾನಿಸುವುದು ತಪ್ಪು.", ಎಂದು ರಾಜಕೀಯ ಕ್ಷೇತ್ರದಲ್ಲಿ ತಮ್ಮ ಜ್ಞಾನವನ್ನು ತಿಳಿಸಿದ್ದಾರೆ.