ನೇಪಾಳ ವಿಮಾನ ಅಪಘಾತದಲ್ಲಿ 18 ಮಂದಿ ಸಾವು : ರನ್‌ವೇಯಿಂದ ಸ್ಕಿಡ್ ಆಗಿ ಸೌರ್ಯ ಏರ್‌ಲೈನ್ಸ್ ವಿಮಾನ | JANATA NEWS
ಕಠ್ಮಂಡು : ನೇಪಾಳದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ. ಬುಧವಾರ ಬೆಳಗ್ಗೆ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆಗುತ್ತಿದ್ದ ವೇಳೆ ರನ್‌ವೇಯಿಂದ ಸ್ಕಿಡ್ ಆಗಿ ಸೌರ್ಯ ಏರ್‌ಲೈನ್ಸ್ ವಿಮಾನ ಜಖಂಗೊಂಡಿದೆ.
ವರದಿಗಳ ಪ್ರಕಾರ, ವಿಮಾನವು ಇಬ್ಬರು ಸಿಬ್ಬಂದಿ ಮತ್ತು 17 ತಂತ್ರಜ್ಞರನ್ನು ಪೋಖರಾ ನಗರಕ್ಕೆ ನಿರ್ವಹಣೆ ತಪಾಸಣೆಗಾಗಿ ಕರೆದೊಯ್ಯುತ್ತಿತ್ತು ಎಂದು ವಿಮಾನ ನಿಲ್ದಾಣದ ಭದ್ರತಾ ಮುಖ್ಯಸ್ಥ ಅರ್ಜುನ್ ಚಂದ್ ಠಾಕುರಿ ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದ್ದಾರೆ.
ಪೈಲಟ್ ಮನೀಶ್ ಶಂಕ್ಯ ಅವರನ್ನು ರಕ್ಷಿಸಲಾಗಿದ್ದು, ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ತಲೆಗೆ ಗಾಯವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೇಪಾಳ ಸೇನೆಯ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.